ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಲಿಂಗಪುರ: ಮಹಿಳೆಯರನ್ನು ಆಕರ್ಷಿಸುವ ಸಖಿ ಮತಗಟ್ಟೆ

Published 6 ಮೇ 2024, 13:35 IST
Last Updated 6 ಮೇ 2024, 13:35 IST
ಅಕ್ಷರ ಗಾತ್ರ

ಮಹಾಲಿಂಗಪುರ: ಲೋಕಸಭಾ ಚುನಾವಣೆ ಹಿನ್ನೆಲೆ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿ ಅವರನ್ನು ಮತಗಟ್ಟೆಯತ್ತ ಆಕರ್ಷಿಸಲು ಹಾಗೂ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಪಟ್ಟಣದ ಕೆಂಗೇರಿಮಡ್ಡಿ, ಸಮೀಪದ ರನ್ನಬೆಳಗಲಿ ಪಟ್ಟಣ ಹಾಗೂ ಚಿಮ್ಮಡ ಗ್ರಾಮದಲ್ಲಿ ಪಿಂಕ್ ಮತಗಟ್ಟೆ ನಿರ್ಮಿಸಲಾಗಿದೆ.

ಪಟ್ಟಣದಲ್ಲಿ 34 ಮತಗಟ್ಟೆ ಸ್ಥಾಪಿಸಲಾಗಿದ್ದು, ಈ ಪೈಕಿ ಕೆಂಗೇರಿಮಡ್ಡಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 192ನೇ ಮತಗಟ್ಟೆಯಲ್ಲಿ ಸಖಿ ಜನಸ್ನೇಹಿ ಮತದಾನ ಕೇಂದ್ರವನ್ನು ರೂಪಿಸಲಾಗಿದೆ. ಇದರ ವ್ಯಾಪ್ತಿಯಲ್ಲಿ 1,534 ಮತದಾರರಲ್ಲಿ 788 (ಶೇ50ಕ್ಕಿಂತ ಹೆಚ್ಚು) ಮಹಿಳಾ ಮತದಾರರಿದ್ದಾರೆ.

ರನ್ನಬೆಳಗಲಿಯಲ್ಲಿ 13 ಮತಗಟ್ಟೆ ಸ್ಥಾಪಿಸಲಾಗಿದ್ದು, ಈ ಪೈಕಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಆವರಣದಲ್ಲಿರುವ 4ನೇ ಮತಗಟ್ಟೆಯಲ್ಲಿ ಪಿಂಕ್ ಮತದಾನ ಕೇಂದ್ರವನ್ನು ರೂಪಿಸಲಾಗಿದೆ. ಇದರ ವ್ಯಾಪ್ತಿಯಲ್ಲಿ 1,456 ಮತದಾರರಲ್ಲಿ 751 (ಶೇ‌50ಕ್ಕಿಂತ ಹೆಚ್ಚು) ಮಹಿಳಾ ಮತದಾರರಿದ್ದಾರೆ. ಚಿಮ್ಮಡ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತಗಟ್ಟೆ ಸಂಖ್ಯೆ 177ರಲ್ಲಿ ಸಖಿ ಜನಸ್ನೇಹಿ ಮತದಾನ ಕೇಂದ್ರವನ್ನು ರೂಪಿಸಲಾಗಿದೆ. ಇದರ ವ್ಯಾಪ್ತಿಯಲ್ಲಿ 1,310 ಮತದಾರರಿದ್ದು, 716 (ಶೇ 50ಕ್ಕಿಂತ ಹೆಚ್ಚು) ಮಹಿಳಾ ಮತದಾರರಿದ್ದಾರೆ.

ಇಲ್ಲಿ ಮತದಾರರ ಗುರುತಿನ ಚೀಟಿಯ ಕ್ರಮ ಸಂಖ್ಯೆ, ಹೆಸರು, ಭಾವಚಿತ್ರ, ವಿಳಾಸವನ್ನು ಪರಿಶೀಲಿಸುವ, ಎಡಗೈನ ತೋರು ಬೆರಳಿಗೆ ಶಾಹಿ ಹಚ್ಚುವ ಮತ್ತು ಮತದಾನದ ಇವಿಎಂ ಮತ್ತು ವಿವಿ ಪ್ಯಾಡ್‌ಗಳನ್ನು ನಿರ್ವಹಿಸುವ ಮತಗಟ್ಟೆಯ ಅಧಿಕಾರಿಗಳೆಲ್ಲ ಮಹಿಳೆಯರೇ ಆಗಿರಲಿದ್ದಾರೆ. ಈ ಮತಗಟ್ಟೆ(ಪಿಂಕ್)ಯನ್ನು ಪ್ರತ್ಯೇಕವಾಗಿ ಮಹಿಳೆಯರಿಗಾಗಿ ಸಿದ್ಧಪಡಿಸಲಾಗಿದೆ.
ಮಹಿಳಾ ಮತದಾರರ ಗಮನ ಸೆಳೆಯುವ ಸಲುವಾಗಿ ಮತಗಟ್ಟೆಯನ್ನು ಮಹಿಳಾ ವರ್ಲಿ ಚಿತ್ರಗಳಿಂದ ಅಲಂಕಾರಗೊಳಿಸಲಾಗಿದೆ. ಮತದಾನ ಜಾಗೃತಿ ಅಭಿಯಾನದ ಘೋಷ ವಾಕ್ಯ ಬರೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT