ಕೆರೂರ: ಪಟ್ಟಣದ ಆರಾಧ್ಯದೈವ, ದೇವಾಂಗ ಸಮುದಾಯದ ಕುಲದೇವತೆ ಬನಶಂಕರಿದೇವಿ ರಥೋತ್ಸವವು ಗುರುವಾರ ಸಂಜೆ ಜರುಗಲಿದೆ.

ಬೆಳಿಗ್ಗೆ ದೇವಸ್ಥಾನದಲ್ಲಿ ಬನಶಂಕರಿದೇವಿ ದೇವಿಗೆ ಮಹಾಭಿಷೇಕ, ಕುಂಭಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ.

ಜಾತ್ರೆಯ ಸಂಭ್ರಮದಲ್ಲಿರುವ ದೇವಸ್ಥಾನ 100 ವರ್ಷಗಳ ಇತಿಹಾಸ ಹೊಂದಿದೆ. 1916ರಲ್ಲಿ ಊರಿನ ಹಿರಿಯರು ಬಾದಾಮಿಯ ಬನಶಂಕರಿಯಿಂದ ಎರಡು ಕಲ್ಲುಗಳನ್ನು ತಂದು, ಪ್ರಥಮವಾಗಿ ಕಲ್ಲುಗಳನ್ನು ಪೂಜಿಸುತ್ತಾ ನಂತರ ದಿನಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಇಂದಿನವರೆಗೂ ದೇವಿಯು ಪಟ್ಟಣದ ಆರಾಧ್ಯ ದೇವತೆಯಾಗಿ ನೆಲಸಿದ್ದಾಳೆ.

ಡಿ.27ರಂದು ಗರುಡ ಪಟದೊಂದಿಗೆ ಪ್ರಾರಂಭವಾದ ಜಾತ್ರಾ ಮಹೋತ್ಸವವು 15 ದಿನಗಳವರೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯುವ ಜಾತ್ರೆಯಾಗಿದೆ. ಅಮ್ಮನ ಜಾತ್ರೆ ಅಂದರೆ ಸಾಕು ಭಕ್ತರ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ.

ಜಾತ್ರೆ ಅಂಗವಾಗಿ ದಿನ ಬೆಳಿಗ್ಗೆ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ, ಮಹಿಳೆಯರ ಲಲಿತಾ ಸಹಸ್ರನಾಮ, ಸಂಜೆ ಉಚ್ಛಾಯ ಮೆರವಣಿಗೆಯು ರಥೋತ್ಸವದ ದಿನವರೆಗೆ ಸಡಗರದಿಂದ ನಡೆಯುತ್ತದೆ. ಬನಶಂಕರಿದೇವಿಯು ಸರ್ವಜನಾಂಗದ ಇಷ್ಟಾರ್ಥ ಸಿದ್ದಿಗಳನ್ನು ನೇರವೇರಿಸುವ ದೇವತೆಯಾಗಿದ್ದಾಳೆ.

ದೇವಸ್ಥಾನವನ್ನು ಬಾಳೆಕಂಬ, ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ. ರಥೋತ್ಸವಕ್ಕೆ ವಿವಿಧ ಬಗೆಯ ಹೂ, ಬಣ್ಣ ಬಣ್ಣದ ಧ್ವಜಗಳಿಂದ ಶೃಂಗರಿಸಲಾಗುವುದು. ಜ.10ರಂದು ಬನಶಂಕರಿದೇವಿಯ ಓಕಳಿ ಹಬ್ಬವು ಅತ್ಯಂತ ಸಂಭ್ರಮದಿಂದ ಜರುಗಲಿದೆ. ಜ.12ರಂದು ಕಳಸ ಇಳಿಸುವುದರೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.

ಜ.8ರಿಂದ 31ರವರೆಗೆ ಐದು ಸಾಮಾಜಿಕ ನಾಟಕಗಳು ಪ್ರದರ್ಶನಗೊಳ್ಳಲಿವೆ. ಅದರಲ್ಲೂ ಈ ಬಾರಿ ‘ಕುಂಟ ಕೋಣ ಮೂಕ ಜಾಣ’ ಎಂಬ ಹ್ಯಾಸಭರಿತ ನಾಟಕವು ಕೆರೂರಿನ ಕಲಾವಿದರಿಂದ ಪ್ರದರ್ಶನಗೊಳ್ಳಲಿದೆ.

ನಮ್ಮ ಪೂರ್ವಜರ ಕಾಲದಿಂದಲೂ ದೇವಿಯು ಭಕ್ತರ ಇಷ್ಟಾರ್ಥ ನೆರವೇರಿಸುವ ಕುಲದೇವತೆಯಾಗಿ ಪಟ್ಟಣದಲ್ಲಿ ನೆಲಸಿದ್ದಾಳೆ. ದೇವಿಯ ಜಾತ್ರೆ ಮತ್ತು ನವರಾತ್ರಿ ಉತ್ಸವ ಬಂದರೆ ಪಟ್ಟಣದಲ್ಲಿ ಹಬ್ಬದ ವಾತಾವರಣ ಇರುತ್ತದೆ
ಸದಾನಂದ ಮದಿ ಮಾಜಿ ಅಧ್ಯಕ್ಷ ಪಟ್ಟಣ ಪಂಚಾಯಿತಿ

ಬನಶಂಕರಿದೇವಿ ಕಳಸ ಮೆರವಣಿಗೆ ಸಂಭ್ರಮ

ಕೆರೂರ: ಜ.8ರಂದು ಜರುಗಲಿರುವ ಬನಶಂಕರಿದೇವಿ ಜಾತ್ರಾ ರಥೋತ್ಸವದ ಅಂಗವಾಗಿ ಪಟ್ಟಣದಲ್ಲಿ ದೇವಿಯ ಕಳಸದ ಮೆರವಣಿಗೆ ಸಕಲ ಮಂಗಲವಾದ್ಯಗಳೊಂದಿಗೆ ಬುಧವಾರ ನಡೆಯಿತು.

ಪಟ್ಟಣದ ಗೌಡರ ಮನೆಯಲ್ಲಿರುವ ದೇವಿಯ ಕಳಸಕ್ಕೆ ವಿಶೇಷ ಪೂಜೆ

ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ಬಿದಿಗಳಾದ ಪತ್ತಾರಕಟ್ಟಿ ಓಣಿ, ನೆಹರೂನಗರ,

ರಾಷ್ಟ್ರೀಯ ಹೆದ್ದಾರಿ. ಮಾರುತೇಶ್ವರ ಗುಡಿ, ಲಕ್ಷ್ಮೀಗುಡಿ ಓಣಿ ಹೀಗೆ ಸಂಚರಿಸಿ ದೇವಸ್ಥಾನ ಸೇರಿಸಿತು.

ಕಳಸದ ಮೆರವಣಿಗೆ ಮಾರ್ಗವನ್ನು ಮಹಿಳೆಯರುಬಣ್ಣ ಬಣ್ಣದ ರಂಗೋಲಿ ಬಿಡಿಸಿ ಸಿಂಗರಿಸಿದ್ದರು.

ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣಹೊಸಮನಿ. ವಿಠಲಗೌಡ ಗೌಡರ, ಗೋಪಾಲ ಗೌಡರ, ಮಲ್ಲಪ್ಪ ಗದ್ದನಕೇರಿ. ಗುಂಡಣ್ಣಬೋರಣ್ಣವರ, ಪೀತಾಂಬ್ರಪ್ಪ ಹವೇಲಿ, ಸಮಾಜದ ಹಿರಿಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.