ಬಾಗಲಕೋಟೆ: ‘ಜಿಲ್ಲೆಯ ಕೂಡಲಸಂಗಮ ಕ್ಷೇತ್ರದಲ್ಲಿ ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ಜ.12 ರಿಂದ ಮೂರು ದಿನಗಳ ಕಾಲ 37ನೇ ಶರಣ ಮೇಳ ಹಮ್ಮಿಕೊಳ್ಳಲಾಗಿದೆ’ ಎಂದು ಕೂಡಲಸಂಗಮದ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಜ.12ರಂದು ರಾಷ್ಟ್ರೀಯ ಬಸವ ದಳದ 33ನೇ ಅಧಿವೇಶನದಲ್ಲಿ ರಾಷ್ಟ್ರೀಯ ಬಸವ ದಳದ ಕರ್ತವ್ಯ ಮತ್ತು ಉದ್ದೇಶ ಕುರಿತು ಉಪನ್ಯಾಸ ನಡೆಯಲಿದೆ’ ಎಂದರು.

‘ಬೆಳಿಗ್ಗೆ 10.30ಕ್ಕೆ ನಡೆಯುವ ಸಮಾವೇಶದಲ್ಲಿ ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಬಸವಲಿಂಗ ಪಟ್ಟದೇವರು ಸಾನ್ನಿಧ್ಯ ವಹಿಸಲಿದ್ದು, ಹರಿಹರದ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಸವಪ್ರಕಾಶ ಸ್ವಾಮೀಜಿ, ಬಸವಗೀತಾ ತಾಯಿ, ಮಾತೆ ತುಂಗಮ್ಮ ಭಾಗವಹಿಸಲಿದ್ದು, ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಉದ್ಘಾಟಿಸಲಿದ್ದಾರೆ. ಮೂವರಿಗೆ ವಿಶೇಷ ಸತ್ಕಾರ ಮಾಡಲಾಗುವುದು’ ಎಂದು ತಿಳಿಸಿದರು.

‘ಸಂಜೆ 6ಕ್ಕೆ ನವ ಸಮಾಜ ನಿರ್ಮಾಣಕ್ಕಾಗಿ ಮಹಿಳಾ ಕ್ರಾಂತಿ ಕುರಿತು ಮಹಿಳಾ ಗೋಷ್ಠಿ ನಡೆಯಲಿದ್ದು, ಮಾತೆ ಜ್ಞಾನೇಶ್ವರಿ, ಅಕ್ಕ ಗಂಗಾಂಬಿಕೆ, ಮಾತೆ ಶರಣಾಂಬಿಕೆ, ಮಹಾನಂದ ತಾಯಿ, ನೀಲಾಂಬಿಕಾದೇವಿ, ವಚನ ಸಂಸ್ಕೃತಿ ತಾಯಿ, ಮೈತ್ರಾದೇವಿ, ಶಾರದಾ ತಾಯಿ ಸಾನ್ನಿಧ್ಯ ವಹಿಸಲಿದ್ದು, ವಿಜಯಾಂಬಿಕೆ, ಸುಮಾ ಸುನೀಲ, ಪೂಜಾ ಅಂಗಡಿ ವಿಷಯ ಮಂಡನೆ ಮಾಡಲಿದ್ದಾರೆ’ ಎಂದರು.

ಸಂಜೆ 6ಕ್ಕೆ ಲಿಂಗಾಯತ ಬಸವ ಧರ್ಮ ಪೀಠದ 32ನೇ ಪೀಠಾರೋಹಣ ಸಮಾರಂಭ ನಡೆಯಲಿದ್ದು, ಮಾತೆ ಗಂಗಾದೇವಿ ಪೀಠಾರೋಹಣ ಮಾಡಲಿದ್ದಾರೆ. ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಅನ್ನಪೂರ್ಣ, ಮಾತೆ ದಾನೇಶ್ವರಿ, ಬಸವರತ್ನಾದೇವಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.

ಜ.14ರಂದು ಬೆಳಿಗ್ಗೆ 9ಕ್ಕೆ ಬಸವ ಕ್ರಾಂತಿ ದಿನಾಚರಣೆ ಆಚರಿಸಲಿದ್ದು, ಧ್ವಜಾರೋಹಣ, ಪ್ರಾರ್ಥನೆ ಮತ್ತು ವಚನ ಪಠಣ ನಡೆಯಲಿವೆ. ಬಸವಕಲ್ಯಾಣದ ಅಲ್ಲಮಪ್ರಭು ಶೂನ್ಯ ಪೀಠದ ಸಿದ್ದರಾಮೇಶ್ವರ ಸ್ವಾಮೀಜಿ, ಮಡಿವಾಳ ರಾಜಯೋಗಿ ಸ್ವಾಮೀಜಿ, ಎಸ್.ಆರ್. ಪಾಟೀಲ, ದೊಡ್ಡನಗೌಡ ಪಾಟೀಲ, ಶೈಲೇಂದ್ರ ಬೇಲ್ದಾಳೆ ಉಪಸ್ಥಿತರಿರಲಿದ್ದಾರೆ. ಬಸವ ತತ್ವ ಪ್ರಚಾರಕ ಸಿದ್ದಣ್ಣ ಲಂಗೋಟಿ ಅವರಿಗೆ ಬಸವ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಸಂಜೆ 7ಕ್ಕೆ ಸಾಮೂಹಿಕ ಇಷ್ಟಲಿಂಗಾರ್ಚನೆಯಲ್ಲಿ ಲಿಂಗಾಂಗ ಯೋಗ ಪ್ರಾತ್ಯಕ್ಷಿಕೆ ನಡೆಯಲಿದ್ದು, ಬಸವಕುಮಾರ ಸ್ವಾಮೀಜಿ ವಿರತೀತಾನಂದ ಸ್ವಾಮೀಜಿ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದರು.

ಪೀಠದ ಉಪಾಧ್ಯಕ್ಷ ಮಹಾದೇಶ್ವರ ಸ್ವಾಮೀಜಿ, ಅನಿಮಿಷಾನಂದ ಸ್ವಾಮೀಜಿ, ಗುರುಬಸಪ್ಪ ನಿಲೋಗಲ್, ಎನ್.ಎಸ್. ರಾಂಪುರ, ಶಿವಾನಂದ ಹುರಕಡ್ಲಿ ಇದ್ದರು.

ಸಿದ್ಧತೆ ಆರಂಭ

ಜ.12ರಿಂದ ಮೂರು ದಿನಗಳ ಕಾಲ ನಡೆಯುವ ಶರಣ ಮೇಳದ ವೇದಿಕೆ ಬರುವ ಭಕ್ತರಿಗೆ ವಸತಿ ವ್ಯವಸ್ಥೆಯ ಸಿದ್ಧತೆ ಆರಂಭವಾಗಿವೆ. ವೇದಿಕೆ ನಿರ್ಮಾಣ ಮಾಡಲಾಗುತ್ತಿದ್ದು ಭಕ್ತರು ಜೋಳ ಸಜ್ಜೆ ರೊಟ್ಟಿ ಮಾಡುತ್ತಿದ್ದಾರೆ. ರಾಜ್ಯವಲ್ಲದೇ ಮಹಾರಾಷ್ಟ್ರ ತಮಿಳುನಾಡು ಆಂಧ್ರಪ್ರದೇಶ ಮುಂತಾದ ಕಡೆಗಳಿಂದ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿ ಭಾಗಿ

‘ಜ.13ರಂದು ಬೆಳಿಗ್ಗೆ 10.30ಕ್ಕೆ ಶರಣ ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು ಚಿತ್ತರಗಿ ಇಳಕಲ್ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು’ ಎಂದು ಮಾತೆ ಗಂಗಾದೇವಿ ಹೇಳಿದರು. ಬಸವ ಧರ್ಮ ಪೀಠದ ಉಪಾಧ್ಯಕ್ಷ ಮಹದೇಶ್ವರ ಸ್ವಾಮೀಜಿ ಅನ್ನದಾನ ಭಾರತಿ ಅಣ್ಣಪ್ಪ ಸ್ವಾಮೀಜಿ ಬಸವಯೋಗಿ ಸ್ವಾಮೀಜಿ ಅನಿಮಿಷನಾಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಚಿವ ಈಶ್ವರ ಖಂಡ್ರೆ ಧ್ವಜಾರೋಹಣ ನೆರವೇರಿಸಲಿದ್ದು ‘ಪ್ರಾರ್ಥನೆ’ ಗ್ರಂಥವನ್ನು ಶಾಸಕ ಎಂ. ನರೇಂದ್ರ ಸ್ವಾಮಿ ಬಿಡುಗಡೆ ಮಾಡುವರು. ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.