ಮಂಗಳವಾರ, ಜೂನ್ 2, 2020
27 °C
ಮುಧೋಳ ತಾಲ್ಲೂಕು ಚಿಕ್ಕೂರಿಗೆ ಮೇ 15ರಂದು ಮಹಾರಾಷ್ಟ್ರದಿಂದ ಮರಳಿದ್ದ ವ್ಯಕ್ತಿ

ಕ್ವಾರೆಂಟೈನ್‌ಗೆ ಹೆದರಿ ವಿಷ ಸೇವಿಸಿದ್ದ ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಕ್ವಾರಂಟೈನ್‌ಗೆ ಕರೆದೊಯ್ಯಲಿದ್ದಾರೆ ಎಂದು ಹೆದರಿ ಮೇ 16ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದಾರೆ.

ಮುಧೋಳ ತಾಲ್ಲೂಕಿನ ಚಿಕ್ಕೂರಿನಲ್ಲಿ ನೆಲೆಸಿದ್ದ ತುಕಾರಾಮ ಲಮಾಣಿ (40) ಸಾವಿಗೀಡಾದವರು. ಮೂಲತಃ ಯಾದಗಿರಿ ಜಿಲ್ಲೆಯವರಾದ ತುಕಾರಾಮ ಚಿಕ್ಕೂರು ಬಳಿ ತೋಟ ಮಾಡಿಕೊಂಡು ಅಲ್ಲಿಯೇ ಕುಟುಂಬ ಸಮೇತ ವಾಸವಿದ್ದರು. ಮೂರು ತಿಂಗಳ ಹಿಂದೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಗೆ ಕೆಲಸದ ನಿಮಿತ್ತ ಹೋಗಿದ್ದ ಅವರು ಮೇ 15ರಂದು ರತ್ನಗಿರಿಯಿಂದ ವಾಪಸ್ ಚಿಕ್ಕೂರಿಗೆ ಲಾರಿಯೊಂದರಲ್ಲಿ ಬಂದಿದ್ದರು. 

ತುಕಾರಾಮ ಊರಿಗೆ ಮರಳಿರುವ ಸುದ್ದಿ ತಿಳಿದು ಗ್ರಾಮದ ಆಶಾ ಕಾರ್ಯಕರ್ತೆ ಮನೆಗೆ ತೆರಳಿ ಮಾಹಿತಿ ಕಲೆ ಹಾಕಿದ್ದರು. ಇನ್ನು ಅಧಿಕಾರಿಗಳು ಬಂದು ತನ್ನನ್ನು ಕ್ವಾರಂಟೈನ್‌ಗೆ ಕರೆದೊಯ್ಯಲಿದ್ದಾರೆ ಎಂದು ಭೀತಿಗೊಳಗಾದ ತುಕಾರಾಮ, ಮನೆಯಲ್ಲಿಯೇ ಕೀಟನಾಶಕ ಸೇವನೆ ಮಾಡಿದ್ದರು. ನಂತರ ಮನೆಯವರು ಚಿಕಿತ್ಸೆಗಾಗಿ ಅವರನ್ನು ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಿದ್ದರು.

ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು