ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ಸಿನ ₹1 ಲಕ್ಷ ಸುಳ್ಳು ಗ್ಯಾರಂಟಿ: ಸಂಸದ ತೇಜಸ್ವಿ ಸೂರ್ಯ

ನಂದಿಕೇಶ್ವರ : ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ತೇಜಸ್ವಿ ಸೂರ್ಯ ಚುನಾವಣಾ ಪ್ರಚಾರ
Published 4 ಮೇ 2024, 15:49 IST
Last Updated 4 ಮೇ 2024, 15:49 IST
ಅಕ್ಷರ ಗಾತ್ರ

ನಂದಿಕೇಶ್ವರ (ಬಾದಾಮಿ): ‘ 2014 ರ ಪೂರ್ವದ ಕೇಂದ್ರದ ಕಾಂಗ್ರೆಸ್ ಸರ್ಕಾರ ಲಕ್ಷಾಂತರ ಕೋಟಿ ರೂಪಾಯಿ ಭ್ರಷ್ಟಾಚಾರ ಹಗರಣದಲ್ಲಿ ಮುಳುಗಿತ್ತು. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತವನ್ನು ಕೊಟ್ಟಿದ್ದನ್ನು ಇಡೀ ದೇಶವೇ ನೋಡಿದೆ ’ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ನಂದಿಕೇಶ್ವರ ಗ್ರಾಮದಲ್ಲಿ ಶನಿವಾರ ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ಚುನಾವಣಾ ಪ್ರಚಾರದಲ್ಲಿ ಅವರು ಕೇಂದ್ರದಲ್ಲಿ ಕಾಂಗ್ರೆಸ್ ನಡೆಸಿದ್ದ ಆಡಳಿತವನ್ನು ಟೀಕಿಸಿದರು.

‘ಕೇಂದ್ರದ ಕಾಂಗ್ರೆಸ್ ಆಡಳಿತದಲ್ಲಿ ಹಿಂದೂ ಹಬ್ಬಗಳ ಆಸುಪಾಸಿನಲ್ಲಿ ದೇವಾಲಯಗಳ ಹತ್ತಿರ ಬಾಂಬ್ ಬ್ಲಾಸ್ಟ್ ಆಗುತ್ತಿದ್ದವು. ಭಯೋತ್ಪಾದಕರ ಮೇಲೆ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿರಲಿಲ್ಲ. ಮುಸ್ಲಿಂ ಮತಗಳು ತಪ್ಪಿಹೋಗುತ್ತದೆ ಎಂಬ ಭಯದಿಂದ ಕಾಂಗ್ರೆಸ್ಸಿನವರು ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ ’ ಎಂದು ಆರೋಪಿಸಿದರು.

‘ದೇಶವನ್ನು ವಿಭಜನೆ ಮಾಡಿದ ಮುಸ್ಲಿಂ ಲೀಗ್ ಪಕ್ಷದೊಂದಿಗೆ ಕಾಂಗ್ರೆಸ್ ಪಕ್ಷವು ಮೈತ್ರಿ ಮಾಡಿಕೊಂಡು ಕೇರಳದ ವಯನಾಡಿನಲ್ಲಿ ಪ್ರಚಾರ ನಡೆಸಿದ್ದಾರೆ . ಮುಸ್ಲಿಂಲೀಗ್ ಪಕ್ಷವು ಕಾಂಗ್ರೆಸ್ ಪ್ರಚಾರದಲ್ಲಿ ಪಕ್ಷದ ಧ್ವಜವನ್ನು ಹಾಕದಂತೆ ಷರತ್ ವಿಧಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಎಷ್ಟೊಂದು ದೈನೀಯ ಸ್ಥಿತಿಗೆ ಬಂದಿದೆ ’ ಎಂದು ಸೂರ್ಯ ವ್ಯಂಗ್ಯವಾಡಿದರು.

‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರತಿ ಮಹಿಳೆಗೆ ₹1 ಲಕ್ಷ ಗ್ಯಾರಂಟಿ ಘೋಷಿಸಿದ್ದಾರೆ. ಲೋಕಸಭೆ ಚುನಾವಣೆಗೆ ಬಹುಮತ ಬರಲು ಕನಿಷ್ಠ 272 ಸೀಟ್ ಅವಶ್ಯವಿದೆ. ಆದ್ರೆ ಕಾಂಗ್ರೆಸ್ ಸ್ಪರ್ಧಿಸಿದ್ದು 232 ಕ್ಷೇತ್ರಗಳಲ್ಲಿ ಮಾತ್ರ. ದೇಶದಲ್ಲಿ ಕಾಂಗ್ರೆಸ್ ಗೆಲ್ಲುವುದು 30 ರಿಂದ 40 ಸೀಟ್ ಮಾತ್ರ. ಕಾಂಗ್ರೆಸ್ ಆಡಳಿತಕ್ಕೇ ಬರುವುದಿಲ್ಲ. ಗ್ಯಾರಂಟಿ ಯಾರಿಗೆ ಕೊಡುವರು ಬರೀ ಸುಳ್ಳು ಹೇಳುತ್ತಿದ್ದಾರೆ’ ಎಂದು ತಿಳಿಸಿದರು.

‘ಮೋದಿ ಪ್ರಧಾನಿಯಾದ ನಂತರ ದೇಶದ ಸೈನಿಕರಿಗೆ ಸ್ವಾತಂತ್ರ್ಯವನ್ನು ಕೊಟ್ಟರು. ಮೊದಲು ಒಳಗಿನ ಭಯೋತ್ಪಾದಕರನ್ನು ಹೊಡೆದು ಉರುಳಿಸಿದರು. ಪಾಕಿಸ್ತಾನ ದೇಶದ ಒಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಭಯೋತ್ಪಾದಕರ ಹುಟ್ಟನ್ನು ಅಡಗಿಸಿದ ಕೀರ್ತಿ ಮೋದಿಗೆ ಸಲ್ಲಸುತ್ತದೆ’ ಎಂದರು.

‘ಇದು ಗ್ರಾಮ, ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲ. ಇದು ದೇಶದ ಚುನಾವಣೆ. ದೇಶದ ಸುರಕ್ಷತೆ ಮತ್ತು ದೇಶದ ಭವಿಷ್ಯ ನಿರ್ಧಾರ ಮಾಡುವ ರಾಷ್ಟ್ರದ ಚುನಾವಣೆಯಾಗಿದೆ. ಮೂರನೇ ಬಾರಿ ಮತ್ತೆ ಮೋದಿ ಪ್ರಧಾನಿಯಾಗಲು ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರನ್ನು ಗೆಲ್ಲಿಸಿ’ ಎಂದು ಮತದಾರರಲ್ಲಿ ವಿನಂತಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ, ಮುಕ್ಕನಗೌಡ ಜನಾಲಿ, ಭುವನೇಶ ಪೂಜಾರ, ಮಾನಗೌಡ ಜನಾಲಿ, ಮುತ್ತು ಉಳ್ಳಾಗಡ್ಡಿ, ಹುಚ್ಚಪ್ಪ ಬೆಳ್ಳಿಗುಂಡಿ, ಬೇಲೂರಪ್ಪ ವಡ್ಡರ ಮೊದಲಾದವರು ಇದ್ದರು.

ಇದು ಗ್ರಾಮ ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲ. ಇದು ದೇಶದ ಚುನಾವಣೆ. ದೇಶದ ಸುರಕ್ಷತೆ ಮತ್ತು ದೇಶದ ಭವಿಷ್ಯ ನಿರ್ಧಾರ ಮಾಡುವ ರಾಷ್ಟ್ರದ ಚುನಾವಣೆಯಾಗಿದೆ

- ತೇಜಸ್ವಿ ಸೂರ್ಯ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT