ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಸಂಘ: ಸಿದ್ದು ಬಿ.ಶೀಲವಂತರ ಅಧ್ಯಕ್ಷ

Last Updated 29 ಡಿಸೆಂಬರ್ 2020, 16:55 IST
ಅಕ್ಷರ ಗಾತ್ರ

ಹುನಗುಂದ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹುನಗುಂದ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಹಿರೇಯರನಕೇರಿ ಎಲ್.ಪಿ.ಎಚ್. ಶಾಲೆಯ ಶಿಕ್ಷಕ ಸಿದ್ದು ಬಿ. ಶೀಲವಂತರ ಆಯ್ಕೆಗೊಂಡಿದ್ದಾರೆ.

ಅಧ್ಯಕ್ಷ ಸೇರಿದಂತೆ ಇತರ ಪಧಾದಿಕಾರಿಗಳ ಆಯ್ಕೆಗೆ ಮಂಗಳವಾರ ಚುನಾವಣೆ ನಿಗದಿಪಡಿಸಲಾಗಿತ್ತು. ಅಧ್ಯಕ್ಷ ಸ್ಥಾನ ಹೊರತು ಪಡಿಸಿ ಇತರ ಪಧಾದಿಕಾರಿಗಳ ಸ್ಥಾನಕ್ಕೆ ಒಬ್ಬೊಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಎಲ್ಲ ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದವು. ಅಧ್ಯಕ್ಷ ಸ್ಥಾನಕ್ಕೆ ಸಿದ್ದು ಶೀಲವಂತರ ಮತ್ತು ಬೆಳಗಲ್ಲ ಎಚ್.ಪಿ.ಎಸ್. ಶಾಲೆಯ ಶಿಕ್ಷಕ ಎಂ.ಬಿ. ಚಿತ್ತಾಪೂರ ನಾಮಪತ್ರ ಸಲ್ಲಿಸಿದ ಕಾರಣ ಇಂದು ಚುನಾವಣೆ ಜರುಗಿತು.

ತಾಲೂಕು ಸಮಿತಿಗೆ ಆಯ್ಕೆಯಾದ 12 ಜನ ನಿರ್ದೇಶಕರಲ್ಲಿ ಮಂಗಳವಾರ ಜರುಗಿದ ಚುನಾವಣೆಯಲ್ಲಿ 8 ಮತ ಪಡೆದು ಸಿದ್ದು ಶೀಲವಂತರ ಆಧ್ಯಕ್ಷರಾಗಿ ಆಯ್ಕೆಗೊಂಡರೆ ಎಂ.ಬಿ. ಚಿತ್ತಾಪೂರ ಕೇವಲ 4 ಮತಗಳನ್ನು ಪಡೆದು ಪರಾಭವಗೊಂಡರು.

ಅವಿರೋಧ ಆಯ್ಕೆಗೊಂಡವರು: ಅಶೋಕ ವಿ. ಬಳ್ಳಾ ಹಾಗೂ ತುಳಜಾಬಾಯಿ ಎಸ್. ಬೊಂಬಾಳೆ (ಉಪಾಧ್ಯಕ್ಷರು), ದಸ್ತಗೀರಸಾಬ ಎಂ. ಬಾಗವಾನ (ಪ್ರಧಾನ ಕಾರ್ಯದರ್ಶಿ), ಹೇಮಾ ವಿ. ಜಮಖಂಡಿ (ಸಹಕಾರ್ಯದರ್ಶಿ), ರಮೇಶ ಎಚ್. ಕುಳಗೇರಿ (ಖಜಾಂಚಿ), ಗೀತಾ ಎಸ್. ತಾರಿವಾಳ ಹಾಗೂ ಸಂಗಮೇಶ ಪಾಟೀಲ (ಸಂಘಟನಾ ಕಾರ್ಯದರ್ಶಿ)ಗಳಾಗಿ ಅವಿರೋಧ ಆಯ್ಕೆಗೊಂಡಿದ್ದಾರೆ ಎಂದು ಚುನಾವಣೆ ಅಧಿಕಾರಿ ಲಕ್ಷ್ಮಣ ಭೋವಿ ತಿಳಿಸಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘಟನೆಯನ್ನು ಬಲಪಡಿಸುವುದರ ಜತಗೆ ತಾಲೂಕಿನ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT