ಬುಧವಾರ, ನವೆಂಬರ್ 13, 2019
18 °C

ಟಿಪ್ಪು ಜಯಂತಿ: ಸರ್ಕಾರದ ಆದೇಶ ಪಾಲಿಸಿ- ಅಧಿಕಾರಿಗೆ ಸಚಿವ ಸೋಮಣ್ಣ ಎಚ್ಚರಿಕೆ

Published:
Updated:
prajavani

ಬಾಗಲಕೋಟೆ: ‘ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಸರ್ಕಾರದ ಆದೇಶ ಏನಿದೆಯೋ ಹಾಗೆ ಮಾಡಿ.. ಮತ್ತೆ ಅದೇ ಹಳೆಯ ಸಿದ್ದರಾಮಯ್ಯನ ಮಾತೇ ಕೇಳ್ತೀನಿ ಅಂದ್ರೆ ರಜೆ ಹಾಕಿ ಮನೆಗೆ ಹೋಗ್ತೀರಿ..

ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ  ಬುಧವಾರ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ವಸತಿ ಸಚಿವ ವಿ.ಸೋಮಣ್ಣ ಈ ವೇಳೆ ತಮಗೆ ಮೈಸೂರಿನಿಂದ ಕರೆ ಮಾಡಿದ್ದ ಅಧಿಕಾರಿಯೊಬ್ಬರಿಗೆ ನೀಡಿದ ಎಚ್ಚರಿಕೆಯ ಪರಿ ಇದು.

ಪೊಲೀಸರಿಗೂ ಇದನ್ನೇ ಹೇಳಿದ್ದೀನಿ. ಅವರು ನಿಮ್ಮ ಮೇಲೆ ಹೇಳ್ತಾರೆ ಅಂತ ಅಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸೋಮಣ್ಣ, ಇಬ್ಬರೂ ಒಂದು ನಿಮಿಷ ಕುಳಿತು ಬಗೆಹರಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಪ್ರತಿಕ್ರಿಯಿಸಿ (+)