ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಬಕವಿ ಬನಹಟ್ಟಿ: ಏ.9 ರಂದು ಯುಗಾದಿ ಕಾವ್ಯ ಸಂಭ್ರಮ ಕಾರ್ಯಕ್ರಮ

Published 7 ಏಪ್ರಿಲ್ 2024, 13:31 IST
Last Updated 7 ಏಪ್ರಿಲ್ 2024, 13:31 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಏ.9 ರಂದು ಸಂಜೆ 6ಕ್ಕೆ ರಬಕವಿಯ ದಾನಮ್ಮದೇವಿ ಸಭಾ ಭವನದಲ್ಲಿ ಯುಗಾದಿ ಕಾವ್ಯ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಮ.ಕೃ.ಮೇಗಾಡಿ ತಿಳಿಸಿದರು.

ಸಾಹಿತಿ ಜಿ.ಎಸ್. ವಡಗಾವಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಆಶಯ ನುಡಿಗಳನ್ನು ಆಡಲಿದ್ದಾರೆ. ಬಸವರಾಜ ಯೆಂಡಿಗೇರಿ, ವಿಶ್ವಜ ಕಾಡದೇವರ, ಶಿವಜಾತ ಉಮದಿ, ಭಾಗ್ಯಲಕ್ಷ್ಮಿ ಹೆರಲಗಿ ಉಪಸ್ಥಿತರಿರಲಿದ್ದಾರೆ. ಸಾಹಿತಿ ಸಿದ್ಧರಾಜ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮಲ್ಲಿಕಾರ್ಜುನ ಹುಲಗಬಾಳಿ, ಎಂ.ಎಸ್.ಬದಾಮಿ, ಯಶವಂತ ವಾಜಂತ್ರಿ, ಗುರುರಾಜ ಖಾಸನೀಸ್, ಶಿವಾನಂದ ಬಾಗಲಕೋಟಮಠ, ಮೃತ್ಯುಂಜಯ ರಾಮದುರ್ಗ, ಮಲ್ಲಿಕಾರ್ಜುನ ಜವಳಗಿ, ಚಂದ್ರಪ್ರಭಾ ಬಾಗಲಕೋಟ, ಗಂಗಾಧರ ಮೋಪಗಾರ, ಶೈಲಜಾ ಮಿರ್ಜಿ, ಶ‍್ರೀಶೈಲ ಬುರ್ಲಿ ಶಿವಲಿಂಗ ಸಿದ್ನಾಳ ಸೇರಿದಂತೆ ತಾಲ್ಲೂಕಿನ ಅನೇಕ ಕವಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT