ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹರ್ಷಿ ತತ್ವ, ಸಿದ್ಧಾಂತ ಅಳವಡಿಸಿಕೊಳ್ಳಿ: ತಹಶೀಲ್ದಾರ್ ಜಿ.ಎಂ. ಕುಲಕರ್ಣಿ

ತಾಲ್ಲೂಕಿನ ವಿವಿಧೆಡೆ ವಾಲ್ಮೀಕಿ ಜಯಂತಿ ಆಚರಣೆ; ಚಿತ್ರಕ್ಕೆ ಗಣ್ಯರ ಪುಷ್ಪನಮನ
Last Updated 1 ನವೆಂಬರ್ 2020, 1:38 IST
ಅಕ್ಷರ ಗಾತ್ರ

ಗುಳೇದಗುಡ್ಡ: ಮಹರ್ಷಿ ವಾಲ್ಮೀಕಿ ರಾಮಾಯಣ ಗ್ರಂಥ ರಚಿಸುವ ಮೂಲಕ ಸಮಾಜಕ್ಕೆ ಆದರ್ಶಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಪ್ರತಿಯೊಬ್ಬರು ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಜಿ.ಎಂ. ಕುಲಕರ್ಣಿ ಹೇಳಿದರು.

ಅವರು ಶನಿವಾರ ತಹಶೀಲ್ದಾರ್ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು. ಸಮಾಜದ ಮುಖಂಡರು ರಾಮಣ್ಣ ಚಂದರಗಿ, ಮಹಾಗುಂಡಪ್ಪ ದಂಡಿನ, ಬಾಲಪ್ಪ ಬಗಲಿ, ಶಿವು ಗೋತಗಿ, ಶಿವಾನಂದ ವಾಲೀಕಾರ, ಉಪತಹಶೀಲ್ದಾರ್ ವೀರೇಶ ಬಡಿಗೇರ, ಎಂ.ಎಸ್. ತುಪ್ಪದ, ಸುಭಾಸ ವಡವಡಗಿ, ಎಸ್.ಜಿ.ಪಾರ್ವತಿಮಠ, ಪಿ.ಪಿ. ತಳವಾರ, ಎಂ.ಎಸ್. ಗುಡಿಸಾಗರ, ಪ್ರಭು ಕುಂಬಾರ, ಸಿದ್ದು ಸರೂರ ಇತರರು ಇದ್ದರು.

ತಾಲ್ಲೂಕು ಪಂಚಾಯ್ತಿ ಕಚೇರಿ: ತಾಲ್ಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ತಾಲ್ಲೂಕ ಪಂಚಾಯ್ತಿ ಅಧಿಕಾರಿ ಸಿದ್ದಪ್ಪ ಪು. ನಕ್ಕರಗುಂದಿ ಅವರು ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು. ಎಂ.ಎಂ. ಹರಲಾರ, ಎಸ್.ಎಲ್. ಹುಣಶ್ಯಾಳ, ಪ್ರವೀಣ ಬಡಿಗೇರ, ರಾಜು ನಾಗೂರಕರ, ಶೇಖಪ್ಪ ಅಪೋಜಿ ಇತರರು ಇದ್ದರು.

ಬಾಲಕಿಯ ಕಾಲೇಜು: ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ರಾಷ್ಟ್ರದ ಏಕತಾ ದಿನಾಚರಣೆ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿದರು. ಭಾವಚಿತ್ರಕ್ಕೆಪ್ರಾಚಾರ್ಯ ಪ್ರಕಾಶ ಜೇವೂರಅವರು ಪೂಜೆ ನೆರವೇರಿಸಿ ಮಾತನಾಡಿದರು.

ಪ್ರೌಢಶಾಲಾ ವಿಭಾಗದ ಉಪಪ್ರಾಚಾರ್ಯ ಮನೋಹರ ಎಂ. ಚಲವಾದಿ, ವೈ.ಜಿ. ತಳವಾರ, ಸಿ.ಎಂ. ಕುರಬರ, ಲತಾ ಪತ್ತಾರ, ಎಸ್. ಭಾಗ್ಯಮ್ಮ, ನದಾಫ, ಉಳ್ಳೇಗಡ್ಡಿ ಇದ್ದರು. ರಾಷ್ಟ್ರೀಯ ಏಕತಾ ದಿನಾಚರಣೆ ನಿಮಿತ್ತ ಶಿಕ್ಷಕಿ ಲತಾ ಪತ್ತಾರ ಅವರು ಪ್ರಮಾಣ ವಚನ ಬೋಧಿಸಿದರು.

ನೆಹರೂ ಪಬ್ಲಿಕ್ ಶಾಲೆ: ನೆಹರೂ ಇಂಟರ್ ನ್ಯಾಷನಲ್ ಪಬ್ಲಿಕ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹೊಳಬಸು ಶೆಟ್ಟರ ಅವರು ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು. ಪ್ರಾಚಾರ್ಯ ಇ. ಸಾಯಿಕೃಷ್ಣ, ಪ್ರದೀಪ ಕಂಚ್ಯಾಣಿ, ಸಿಕಂದರ ಪೆಂಡಾರಿ, ಮುತ್ತುಸ್ವಾಮಿ ದೇವಾಂಗಮಠ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT