ಬಾಗಲಕೋಟೆ: ಮನುಷ್ಯನನ್ನು ಹೆಜ್ಜೆ, ಹೆಜ್ಜೆಗೂ ಸಂಸ್ಕರಿಸಿ, ಶುದ್ಧೀಕರಿಸಿ ಪರಿಪೂರ್ಣತೆಯತ್ತ ಕೊಂಡೊಯ್ಯಲು ಸಂಸ್ಕಾರದ ಅಗತ್ಯವಾಗಿದೆ ಎಂದು ನಾಲತವಾಡದ ಬ್ರಹ್ಮಾಂಡಭೇರಿಮಠದ ಸುಧಿಂದ್ರ ಸ್ವಾಮೀಜಿ ಹೇಳಿದರು.

ಬಾಗಲಕೋಟೆ ತಾಲ್ಲೂಕು ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ, ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘ, ವಿಶ್ವಕರ್ಮ ತರುಣ ಸಂಘ, ವಿಶ್ವಕರ್ಮ ಸಮಾಜ ಬಡಿಗತನ ಕಾರ್ಮಿಕರ ಸಂಘ, ಕಾಳಿಕಾಂಬಾ ಮಹಿಳಾ ಮಂಡಳ, ವಿಶ್ವಕರ್ಮ ಸಮಾಜ ಸಂಘ ಸಹಕಾರದೊಂದಿಗೆ ವಿದ್ಯಾಗಿರಿಯ 13ನೇ ರಸ್ತೆಯಲ್ಲಿರುವ ಕಾಳಿಕಾಂಬಾ ದೇವಸ್ಥಾನದಲ್ಲಿ ಗುರುವಾರ ನಡೆದ ಪ್ರಥಮ ಸಾಮೂಹಿಕ ಉಪನಯನ ಹಾಗೂ ಧಾರ್ಮಿಕ ಸಭೆ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಸಾವಿರಾರು ವರ್ಷಗಳ ಹಿಂದೆಯೇ ಅಲೌಕಿಕ ಬುದ್ದಿಸಂಪನ್ನರಾಗಿದ್ದ ಭಾರತದ ಋಷಿಮುನಿಗಳು ತಮ್ಮ ತಪೋಪ್ರಭಾವದಿಂದ ಮನುಷ್ಯ ಜೀವನಕ್ಕೆ ಸರಿಯಾದ ಮಾರ್ಗಗಳನ್ನು ತೋರಿಸಿಕೊಟ್ಟಿದ್ದಾರೆ. ಮನುಷ್ಯನ ಇಹ-ಪರ ಎರಡನ್ನೂ ಸಮನ್ವಯಗೊಳಿಸಿದ್ದಾರೆ. ಮನುಷ್ಯನ ಪರಿಪೂರ್ಣತೆಗೆ ಹುಟ್ಟಿನಿಂದ ಮರಣದವರೆಗೂ ಅನೇಕ ಸಂಸ್ಕಾರಗಳನ್ನು ನೀಡಿದ್ದಾರೆ. ಅದರಲ್ಲಿ ಈ ಉಪನಯನವು ಒಂದು ಎಂದರು.

ಸಾನ್ನಿಧ್ಯ ವಹಿಸಿದ್ದ ವಿಶ್ವನಾಥ ಸ್ವಾಮೀಜಿ ಮಹಾಪುರುಷ ಮಾತನಾಡಿ, ಮನುಷ್ಯ ತನ್ನ ಬೌದ್ದಿಕ ಬಲದಿಂದ ವಿಶ್ವದ ವಿವಿಧ ವಸ್ತುಶಕ್ತಿಗಳ ರಹಸ್ಯ ಭೇದಿಸುತ್ತಾ ತನ್ನ ಬಾಳ್ವೆಯನ್ನು ಸುಗಮಗೊಳಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾನೆ. ಇವೆಲ್ಲವೂ ಗುರು–ಹಿರಿಯರು ನೀಡಿದ ಸಂಸ್ಕಾರಗಳಿಂದ ಸಾಧ್ಯವಾಗಿವೆ ಎಂದರು.

ವಿದ್ಯಾಗಿರಿ ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ವಸಂತರಾವ್ ಕಮ್ಮಾರ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವರ್ಕಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದೇವೇಂದ್ರ ಅಗಳತಕಟ್ಟಿ ಮಾತನಾಡಿ, ಸಮಾಜದ ವಿವಿಧ ಸಂಘಟನೆಗಳ ಸಹಕಾರದಿಂದ 25 ವಟುಗಳ ಸಾಮೂಹಿಕ ಉಚಿತ ಬ್ರಹ್ಮೋಪದೇಶ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಚಿತ ಸಾಮೂಹಿಕ ಉಪನಯನ ನಡೆಸುವ ಉದ್ದೇಶ ಹೋಂದಲಾಗಿದೆ ಎಂದರು.

ಬಸವರಾಜ ಬಡಿಗೇರ, ಯಂಕಪ್ಪ ಬಡಿಗೇರ, ನಾಗರಾಜ ಕಮ್ಮಾರ, ಬಸವರಾಜ ಬರಗಿ, ಪ್ರಕಾಶ ಪತ್ತಾರ, ಜಗನ್ನಾಥ ಪತ್ತಾರ, ಮಹೇಶಕುಮಾರ ಪತ್ತಾರ, ಭೀಮಪ್ಪ ಬಡಿಗೇರ, ರಾಘವೇಂದ್ರ ಕಮ್ಮಾರ, ಮಹಾದೇವ ಪತ್ತಾರ, ಅಪ್ಪಾಸಾಬ್ ಬಡಿಗೇರ, ನಿರ್ಮಲಾ ಪತ್ತಾರ, ವಿಜಯಲಕ್ಷ್ಮೀ ಪತ್ತಾರ, ಕಾಳಪ್ಪ ಬಡಿಗೇರ, ರುಕಮಣ್ಣ ಪಂಚಾಳ ಭಾಗವಹಿಸಿದ್ದರು.

ವೀರೇಶಾಚಾರ್ಯ ದೇವಲಾಪುರ ಅವರ ಪೌರೋಹಿತ್ಯದಲ್ಲಿ 25 ಜನ ವಟುಗಳ ಸಾಮೂಹಿಕ ಬ್ರಹ್ಮೋಪದೇಶ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.