ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಈಶ್ವರಪ್ಪಗೆ ಅನ್ಯಾಯ, ಬಿಜೆಪಿಗೆ ಮತ್ತೆ ಕರೆದೊಯ್ಯುತ್ತೇವೆ: ಯತ್ನಾಳ

‘ಸಿದ್ದರಾಮಯ್ಯ ಬಳಿಕ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ’
Published : 22 ಸೆಪ್ಟೆಂಬರ್ 2024, 13:47 IST
Last Updated : 22 ಸೆಪ್ಟೆಂಬರ್ 2024, 13:47 IST
ಫಾಲೋ ಮಾಡಿ
Comments

ಜಮಖಂಡಿ (ಬಾಗಲಕೋಟೆ ಜಿಲ್ಲೆ): ‘ಬಿಜೆಪಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರಿಗೆ ಅನ್ಯಾಯವಾಗಿದೆ. ಆ ಅನ್ಯಾಯವನ್ನು ಸರಿಪಡಿಸಿ ಮುಂದಿನ ದಿನಗಳಲ್ಲಿ ಅವರನ್ನು ಮತ್ತೆ ಬಿಜೆಪಿಗೆ ಕರೆದುಕೊಂಡು ಹೋಗುತ್ತೇವೆ. ಸಿದ್ದರಾಮಯ್ಯನವರ ಬಳಿಕ ರಾಜ್ಯದಲ್ಲಿ ಈಶ್ವರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ, ಅವರನ್ನು ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ತಾಲ್ಲೂಕಿನ ಜಕನೂರ ಗ್ರಾಮದ ಮಾದಣ್ಣ ಮದಗುಂಡೇಶ್ವರ ಸಿದ್ಧಾಶ್ರಮದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಭಂಡಾರ ಸಂಸ್ಕೃತಿ ಉತ್ಸವ, ಜಾನಪದ ಮತ್ತು ಡೊಳ್ಳಿನ ಕಲಾಮಹೋತ್ಸವ, 29ನೇ ‘ಸಿದ್ಧಸಿರಿ’ ಸಂಭ್ರಮದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಿತ್ತೂರು ರಾಣಿ ಚನ್ನಮ್ಮ ವಂಶಸ್ಥರಾದ ನಾವು ಪಂಚಮಸಾಲಿಗಳು ಗಟ್ಟಿಯಾಗಿ ನಿಮ್ಮ ಬೆನ್ನಹಿಂದೆ ನಿಲ್ಲುತ್ತೇವೆ. ನಿಮ್ಮನ್ನು ಮುಖ್ಯಮಂತ್ರಿ ಮಾಡಿ ನಾನು ಸಚಿವನಾಗುತ್ತೇನೆ. ರಾಯಣ್ಣ ಬ್ರಿಗೇಡ್ ಮಾಡಿದಾಗ ನಿಮಗೆ ತೊಂದರೆ ನೀಡಿರುವವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಾವು ಹಾಗೂ ರಮೇಶ ಜಾರಕಿಹೊಳಿ ಸೇರಿದಂತೆ ಬೇರೆ ಹೊಂದಾಣಿಕೆಯ ಟೀಂ ಮಾಡಿಕೊಂಡಿದ್ದೇವೆ. ಸರಿಯಾದ ಸಮಯಕ್ಕೆ ಕಾಯುತ್ತಿದ್ದೇವೆ’ ಎಂದು ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ,‘ರಾಜ್ಯದಲ್ಲಿ ಬಿಜೆಪಿ ಶುದ್ಧೀಕರಣವಾಗಬೇಕು ಎಂದು ನಾನು ಮೊದಲಿನಿಂದ ಹೇಳುತ್ತ ಬಂದಿದ್ದೇನೆ. ಇತ್ತೀಚೆಗೆ ಯತ್ನಾಳ, ಜಾರಕಿಹೊಳಿ, ಲಿಂಬಾವಳಿ ಕೂಡ ಧ್ವನಿ ಎತ್ತಿದ್ದಾರೆ. ಈಗಿನ ಬಿಜೆಪಿ ರಾಜ್ಯಾಧ್ಯಕ್ಷರ ಮೇಲೆ ಯಾರಿಗೂ ಮನಸ್ಸಿಲ್ಲ. ಅವರು ಸೂಕ್ತ ವ್ಯಕ್ತಿಯೂ ಅಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT