ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವ ವಾಕ್, ಶ್ರವಣ ನ್ಯೂನತೆಯುಳ್ಳವರ ದಿನಾಚರಣೆ

Published : 28 ಸೆಪ್ಟೆಂಬರ್ 2024, 16:23 IST
Last Updated : 28 ಸೆಪ್ಟೆಂಬರ್ 2024, 16:23 IST
ಫಾಲೋ ಮಾಡಿ
Comments

ಬಾಗಲಕೋಟೆ: ಬಿಜಾಪುರ ಇಂಟಿಗ್ರೆಟೆಡ್ ರೂರಲ್ ಡೆವ್ಹಲಪ್‌ಮೆಂಟ್ ಸೊಸೈಟಿ, ಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮ ವಿವಿಧ ಸಂಘಗಳ ಸಹಯೋಗದಲ್ಲಿ ಸಾಯಿ ಮಂದಿರದ ಭಕ್ತಿ ಭವನದಲ್ಲಿ ಇತ್ತೀಚೆಗೆ ವಿಶ್ವ ವಾಕ್‌ ಮತ್ತು ಶ್ರವಣ ದೋಷವುಳ್ಳವರ ದಿನ ಆಚರಿಸಲಾಯಿತು.

ಪಾರ್ವತಮ್ಮ ಬಳೂಲಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬರ್ಡ್ಸ್ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಶಾಂತಾಶ್ರಮದ ಖಜಾಂಚಿ ಎಸ್.ಜಿ. ದೊಡ್ಡಮನಿ, ಲಯನ್ಸ್‌ ಕ್ಲಬ್ ಅಧ್ಯಕ್ಷ ಸಿದ್ದಣ್ಣ ಹಂಪನಗೌಡರ, ಲಯನ್ಸ್‌ ಬ್ರ್ಯಾಂಚ ಕ್ಲಬ್ ಅಧ್ಯಕ್ಷೆ ನೇಹಾ ಇಂಜಗನೇರಿ, ಕಾರ್ಯದರ್ಶಿ ವಿಶ್ವನಾಥ್ ಗುಳೇದ, ಬರ್ಡ್ಸ್‌ ಖಜಾಂಚಿ ಡಿ.ಎಸ್. ಹವಾಲ್ದಾರ ಮಾತನಾಡಿದರು. ಬರ್ಡ್ಸ್ ಅಧ್ಯಕ್ಷ ಪ್ರೊ.ಸಿ.ಜಿ. ಹವಾಲ್ದಾರ ಅಧ್ಯಕ್ಷತೆ ವಹಿಸಿದ್ದರು.
ಭೋಸರಾಜ್ ಆರ್, ಬರ್ಡ್ಸ್ ಉಪಾಧ್ಯಕ್ಷ ರಂಗನಗೌಡ ದಂಡಣ್ಣವರ, ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಮಹಾಂತೇಶ ಅಗಸಿಮುಂದಿನ ಉಪಸ್ಥಿತರಿದ್ದರು.

ಲಯನ್ಸ್‌ ಬ್ರ್ಯಾಂಚ್‌ ಕ್ಲಬ್ ನ ಕಾರ್ಯದರ್ಶಿ ಉಮಾ ಪಟ್ಟಣಶೆಟ್ಟಿ, ಶಿಲ್ಪಾ ಅಕ್ಕಿಮರಡಿ, ಬರ್ಡ್ಸ್ ಉಪಾಧ್ಯಕ್ಷರು ವಿಜಯಲಕ್ಷಿ ತತ್ರಾಣಿ, ಮಹಾದೇವಿ ಕಡಪಟ್ಟಿ, ನಿರ್ದೇಶಕ ಬಿ.ಸಿ.ಅಂಗಡಿ, ಲಯನ್ಸ್‌ ಕ್ಲಬ್ ಖಜಾಂಚಿ ಹಣಮಂತ ದೊಡಮನಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT