ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ | ‘ಕಲಾಕೃತಿ ಸಮಾಜದ ಕೈಗನ್ನಡಿಯಾಗಲಿ’

Published 17 ಏಪ್ರಿಲ್ 2024, 15:21 IST
Last Updated 17 ಏಪ್ರಿಲ್ 2024, 15:21 IST
ಅಕ್ಷರ ಗಾತ್ರ

ಬಾದಾಮಿ: ‘ಕಲಾವಿದ ತನ್ನ ಭಾವನಾ ಲೋಕದಲ್ಲಿ ಸದಾ ಅಂತರ್ಮುಖಿಯಾಗಿ ಶಿಲ್ಪ ಮತ್ತು ಚಿತ್ರಕಲಾ ಕೃತಿಗಳನ್ನು ರಚಿಸುವನು. ಕಲಾಕೃತಿಗಳು ಸಮಾಜಕ್ಕೆ ಕೈಗನ್ನಡಿಯಾಗಬೇಕು’ ಎಂದು ಹಿರಿಯ ಚಿತ್ರ ಕಲಾವಿದ ಮಹಾದೇವ ಜಗತಾಪ ಹೇಳಿದರು.

ಬನಶಂಕರಿ ಸಮೀಪದ ಕನ್ನಡ ಹಂಪಿ ವಿಶ್ವವಿದ್ಯಾಲಯದ ವಾಸ್ತುಶಿಲ್ಪ, ಶಿಲ್ಪಶಾಸ್ತ್ರ, ಮತ್ತು ವರ್ಣಚಿತ್ರಕಲೆ ವಿಭಾಗದ ಕೇಂದ್ರದಲ್ಲಿ ಮಂಗಳವಾರ ನಡೆದ ‘ವಿಶ್ವ ದೃಶ್ಯಕಲಾ ದಿನಾಚರಣೆ’ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಾಧ್ಯಾಪಕ ಯಾದಪ್ಪ ಪರದೇಶಿ ವಿಶ್ವ ವಿಖ್ಯಾತ ಕಲಾವಿದ ಲಿಯೊನಾರ್ಡೊ ಡಾ ವಿಂಚಿ ಕುರಿತು ಉಪನ್ಯಾಸ ನೀಡಿದರು.

ಕನ್ನಡ ಹಂಪಿ ವಿ.ವಿ ಕೇಂದ್ರದ ಮುಖ್ಯಸ್ಥ ಮೋಹನರಾವ್ ಪಂಚಾಳ ಅಧ್ಯಕ್ಷತೆ ವಹಿಸಿದ್ದರು. ಶಿಲ್ಪಕಲಾ ಅಕಾಡೆಮಿ ಸದಸ್ಯರಾದ ಬಸಮ್ಮ ನರಗುಂದ, ಭಾರತಿ ಸರಗಣಾಚಾರಿ, ಕಲಾವಿದರಾದ ಶಿವಾನಂದ ಹಿರೇಮಠ, ಅನ್ನಪೂರ್ಣ ಹೊಸಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT