ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಧ್ಯಾತ್ಮಿಕ ಜಗತ್ತಿನಲ್ಲಿ ಅವಧೂತ ಸಂಪ್ರದಾಯ ವಿಶಿಷ್ಟ

ರಾಮಾನಂದ ಅವಧೂತ ಶ್ರೀಗಳ 28ನೇ ಪುಣ್ಯಾರಾಧನೆ
Published 15 ಫೆಬ್ರುವರಿ 2024, 13:57 IST
Last Updated 15 ಫೆಬ್ರುವರಿ 2024, 13:57 IST
ಅಕ್ಷರ ಗಾತ್ರ

ತೇರದಾಳ: ‘ಅವಧೂತ ಸಂಪ್ರದಾಯವು ಆಧ್ಯಾತ್ಮಿಕ ವೈಶಿಷ್ಟ್ಯ ಹೊಂದಿದೆ. ಧರ್ಮ ಜಾಗೃತಿ ಹಾಗೂ ಗುರು ಪರಂಪರೆಯಲ್ಲಿ ಉನ್ನತ ತತ್ವಗಳನ್ನು ಹುಟ್ಟುಹಾಕಿದೆ. ಭಾರತೀಯ ಸಂಸ್ಕೃತಿ ಮತ್ತು ಧರ್ಮದ ಉನ್ನತಿಗಾಗಿ ಇಂತಹ ಮಠಗಳ ಕೊಡುಗೆ ಅನನ್ಯ’ ಎಂದು ರಬಕವಿಯ ಬ್ರಹ್ಮಾನಂದ ಅಶ್ರಮದ ಗುರುಸಿದ್ಧೇಶ್ವರ ಶ್ರೀ ಹೇಳಿದರು.

ತಾಲ್ಲೂಕಿನ ಹನಗಂಡಿ ಗ್ರಾಮದ ಅವಧೂತ ಆಶ್ರಮದಲ್ಲಿ ರಾಮಾನಂದ ಅವಧೂತ ಶ್ರೀಗಳ 28ನೇ ಪುಣ್ಯಾರಾಧನೆ ಅಂಗವಾಗಿ ಆಯೋಜಿಸಲಾಗಿದ್ದ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶೇಗುಣಸಿ ಹನಮಂತ ಮಹಾರಾಜರು, ಆಶ್ರಮದ ಜಗದೀಶ್ವರ ಶ್ರೀ, ಚಿದಾನಂದ ಅವಧೂತ ಶ್ರೀ, ಘೆನಮ್ಮತಾಯಿ, ಹಳಿಂಗಳಿ ಕಮರಿಮಠದ ಶರಣಬಸವದೇವರು, ಬನಹಟ್ಟಿಯ ಶಿವಶರಣೆ ಅಶ್ವಿನಿ ಗೆದ್ದಪ್ಪನವರ ಮಾತನಾಡಿದರು.

ಮುಖಂಡರಾದ ನೀಲೇಶ ದೇಸಾಯಿ, ಪ್ರಸನ್ನಕುಮಾರ ದೇಸಾಯಿ, ಬಾಗಪ್ಪ ಹನಗಂಡಿ, ಸಿದ್ದಪ್ಪ ಪೂಜಾರಿ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ಇದಕ್ಕೂ ಮುಂಚೆ ಆಶ್ರಮದಲ್ಲಿ ವಿಶೇಷ ಪೂಜೆಗಳು ನಡೆದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಭಾವಚಿತ್ರ, ಪಲ್ಲಕ್ಕಿ ಉತ್ಸವ, ಪೂರ್ಣಕುಂಭಮೆರವಣಿಗೆ ವಿವಿಧ ವಾದ್ಯಗಳೊಂದಿಗೆ ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT