ಬಾಗಲಕೋಟೆ: ಉತ್ತರ ಕರ್ನಾಟಕದ ರೈತರು ಬೇಸಾಯ ಸಂದರ್ಭದಲ್ಲಿ ಹೆಚ್ಚಾಗಿ ಬಳಸುವ `ಬರಗಿ ಬಣ್ಣದ ಬಾರುಕೋಲು~ ಆಧುನಿಕ ಕೃಷಿ ಪದ್ಧತಿ ನಡುವೆ ಇಂದಿಗೂ ತನ್ನ ವೈಶಿಷ್ಟ್ಯವನ್ನು ಜೀವಂತವಾಗಿ ಉಳಿಸಿಕೊಂಡಿದೆ.

ನೋಡಲು ಮನಹೋಹಕವಾಗಿರುವ, ಮೈತುಂಬ ಜಾನಪದ ಚಿತ್ತಾರವನ್ನು ಮೆತ್ತಿಕೊಂಡಿ ರುವ ಬರಗಿ ಬಣ್ಣದ ಬಾರುಕೋಲಿನ ಜನಪ್ರಿಯತೆ ಇಂದಿಗೂ ಮಾಸದೇ ಉಳಿದುಕೊಂಡಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂ ಕಿನ ಬರಗಿ ಗ್ರಾಮದ ಕೃಷಿಕ ಕುಟುಂಬವೊಂದು ತಲೆ ತಲಾಂತರದಿಂದ ಬರಗಿ ಬಣ್ಣದ ಬಾರುಕೋಲನ್ನು ತಯಾರಿಸುತ್ತಾ ಬಂದಿದೆ.

ಬರಗಿಯ ಶ್ರೀಕಾಂತ ವೀರಣ್ಣ ಸೋನಾರ ಅವರ ಕುಟುಂಬ ತಲತಲಾಂತರದಿಂದ ಈ ಬಾರುಕೋಲು ಗಳನ್ನು ಮಾಡಿಕೊಂಡು ಬರುತ್ತಿದೆ.

ಬೇವಿನಮರದ ಕಟ್ಟಿಗೆಯನ್ನು ಬಳಸಿ ಸುಂದರ ವಾಗಿ ತಯಾರಿಸುವ ಈ ಬಾರುಕೋಲಿಗೆ ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಬಾಗಲಕೋಟೆ ಮತ್ತು ವಿಜಾಪುರ ಜಿಲ್ಲೆಯಲ್ಲಿ ಭಾರಿ ಬೇಡಿಕೆ.

ಸರಾಸರಿ 18 ಇಂಚಿನ ಈ ಬಣ್ಣದ ಬಾರು ಕೋಲೊಂದಕ್ಕೆ 100 ರೂಪಾಯಿ ಮಾತ್ರ. ಬೇವಿನ ಮರದ ಕಟ್ಟಿಗೆಯನ್ನು ನುಣುಪಾದ ದಿಂಡಿನ್ನಾಗಿಸಿ, ಬಳಿಕ ಅದರ ಮೇಲೆ ಬಣ್ಣದ ಚಿತ್ತಾರವನ್ನು ಬಿಡಿಸ ಲಾಗುತ್ತದೆ.

ಎರಡು ಕಡೆಗಳಲ್ಲೂ ಸುರುಳಿಯಾಕಾರದ ಮತ್ತು ಮಧ್ಯೆ ಈಶ್ವರ ಪೀಠವನ್ನು ಹೊಂದಿರುವ ಹಾಗೂ ಜಾನಪದ ರೇಖಾ ಚಿತ್ರಗಳನ್ನು ಬಾರು ಕೋಲಿನ ಮೇಲೆ ಬಣ್ಣದಿಂದ ಚಿತ್ರಿಸಲಾಗುತ್ತದೆ. ಅದರ ತುದಿಯಲ್ಲಿ ಚಾಟಿಯನ್ನು ಕಟ್ಟಲು ವ್ಯವಸ್ಥೆ ಮಾಡಲಾಗಿರುತ್ತದೆ. ಎಷ್ಟೇ ಬಳಸಿದರೂ ಬಾರು ಕೋಲು ತಕ್ಷಣಕ್ಕೆ ಹಾಳಾಗದಂತೆ ಉತ್ತಮ ಗುಣಮಟ್ಟದ ಮರವನ್ನು ಬಳಸಲಾಗುತ್ತದೆ. ಬರಗಿ ಬಣ್ಣದ ಬಾರುಕೋಲು ನೋಡಲು ಎಷ್ಟು ಸುಂದರವೋ ಬಾಳಿಕೆಯೂ ಅಷ್ಟೇ ದೀರ್ಘವಾಗಿರುತ್ತದೆ.

ದೀಪವಾಳಿ ಸಂದರ್ಭದಲ್ಲಿ ಎತ್ತಿನಗಾಡಿ ಓಡಿ ಸುವಾಗ ಮತ್ತು ಪೂಜೆ ಸಂದರ್ಭದಲ್ಲಿ ಈ ಬಾರು ಕೋಲುಗಳನ್ನು ಕೃಷಿಕ ಕೈಯಲ್ಲಿ ಹಿಡಿದು ಎತ್ತು ಗಳನ್ನು ಹೆದರಿಸುವ ಪರಿ ಅತ್ಯಂತ ಮನಹೋಹಕ ವಾಗಿರುತ್ತದೆ. ರೈತರು ಈ ಬಾರುಕೋಲುಗಳನ್ನು ಕೈಯಲ್ಲಿ ಹಿಡಿಯಲು ಆನಂದ ಪಡುತ್ತಾರೆ.

ಕೃಷಿ ಚಟುವಟಿಕೆಯಲ್ಲಿ ಬಳಸುವುದಕ್ಕಿಂತ ಹೆಚ್ಚಾಗಿ ರೈತರು ಈ ಬಾರುಕೋಲಿನ ಅಂದಕ್ಕೆ ಬೆರಗಾಗಿ ಖರೀದಿಸಿಟ್ಟುಕೊಳ್ಳುವುದು ಒಂದು ಸಂಪ್ರ ದಾಯವಾಗಿ ಬೆಳೆದುಕೊಂಡು ಬಂದಿದೆ. ಅಲ್ಲದೇ ಈ ಭಾಗದ ಕೃಷಿ ಸಂಸ್ಕೃತಿಯ ಪ್ರತೀಕವಾಗಿದೆ.

ತಲೆತಲಾಂತದರಿಂದ ಕುಟುಂಬದ ಕಸುಬಾಗಿ ನಿಷ್ಠೆಯಿಂದ ಮಾಡಿಕೊಂಡು ಬರುತ್ತಿರುವ ಬರ ಗಿಯ ಶ್ರೀಕಾಂತ ವೀರಣ್ಣ ಸೋನಾರ `ಪ್ರಜಾವಾಣಿ~ಯೊಂದಿಗೆ ಮಾತನಾಡಿ, ಬರಗಿ ಬಣ್ಣದ ಬಾರುಕೋಲುಗಳಿಗೆ ರೈತರಿಂದ ಅಧಿಕ ಬೇಡಿಕೆ ಇದೆ. ಬೇಡಿಕೆಗೆ ತಕ್ಕಂತೆ ಪೂರೈಸಲು ಸಾಧ್ಯ ವಾಗುತ್ತಿಲ್ಲ, ನಮ್ಮ ಕುಂಟುಂಬ ಐದಾರು ಮಂದಿ ಮಾತ್ರ ಈ ಬಾರು ಕೋಲನ್ನು ತಯಾರಿಸುತ್ತೇವೆ, ಬೇರೆಲ್ಲೂ ಈ ಬಾರುಕೋಲು ತಯಾ ರಾಗುವುದಿಲ್ಲ ಎನ್ನುತ್ತಾರೆ.

ನಮ್ಮ ತಾತನ ಕಾಲದಿಂದಲ್ಲೂ ಬಾರುಕೋಲು ಗಳನ್ನು ಮಾಡುತ್ತಿದ್ದು, ತಮ್ಮಂದಿಗೆ ಸಹೋದರ ರಾದ ಈರಣ್ಣ ಮತ್ತು ಕೃಷ್ಣ ಕೂಡ ಬಾರು ಕೋಲನ್ನು ತಯಾರಿಸುವಲ್ಲಿ ನೆರವಾಗುತ್ತಾರೆ ಎನ್ನುತ್ತಾರೆ ಅವರು.

ದೀಪಾವಳಿ ಬಂತೆಂದರೆ ಬಣ್ಣದ ಬಾರುಕೋಲಿಗೆ ಜನ ಮುಗಿಬೀಳುತ್ತಾರೆ. ಅದಕ್ಕಾಗಿಯೇ ಈ ಸಂದ ರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾರುಕೋಲು ಗಳನ್ನು ತಯಾರಿಸಿಕೊಂಡಿರುತ್ತೇವೆ ಎನ್ನುತ್ತಾರೆ ಅವರು.ಒಂದು ಬಾರುಕೋಲು ತಯಾರು ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ.

ಬಾರುಕೋಲುಗಳನ್ನು ಉತ್ಸವ, ಜಾತ್ರೆ ಮತ್ತು ಸಂತೆಯಲ್ಲಿ ಮಾರಾಟ ಮಾಡುತ್ತೇವೆ, ರೈತರಿಂದ ಇಂದಿಗೂ ಉತ್ತಮ ಬೇಡಿಕೆ ಇದೆ ಎಂದು ಅವರು ಹೇಳುತ್ತಾರೆ.

ರೈತರ ಉಪಕಸುಬುಗಳು ಮರೆಯಾಗುತ್ತಿರುವ ಆಧುನಿಕ ಕೃಷಿ ಪದ್ಧತಿಯ ಈ ಸಂದರ್ಭದಲ್ಲೂ ಬರಗಿ ಬಣ್ಣದ ಬಾರುಕೋಲುಗಳು ಇನ್ನೂ ರೈತ ಸಮುದಾಯದ ಆಕರ್ಷಣೆ ಉಳಿಸಿಕೊಂಡಿರುವುದು ಶ್ಲಾಘನೀಯವಾಗಿದೆ.
ಶ್ರೀಕಾಂತ ವೀರಣ್ಣ ಸೋನಾರ ಅವರ ಸಂಪರ್ಕ ಸಂಖ್ಯೆ: 9481570505.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.