ಬಾಗಲಕೋಟೆ: `ರಾಜ್ಯ ಸರ್ಕಾರಿ ನೌಕರರ ಸಂಘದ 2013-18ರ ಅವಧಿಯ ಚುನಾವಣೆಯನ್ನು ಜಿಲ್ಲೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲಾಗುತ್ತಿದೆ' ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ. ಲಿಂಗಣ್ಣವರ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಎಂ.ಬಿ. ಬಳ್ಳಾರಿ ಹಾಗೂ ಅವರ ಬೆಂಬಲಿಗರು ಚುನಾವಣೆ ಭೀತಿಯಿಂದ ಹತಾಶೆಗೊಂಡು ಸುಳ್ಳು ಆಪಾದನೆ ಮಾಡುತ್ತಿದ್ದಾರೆ. ಸಂಘದ ಸದಸ್ಯರು ಇಂತಹ ಅನವಶ್ಯಕ ಗೊಂದಲಕ್ಕೆ ಕಿವಿಗೊಡದೆ ಪಾರದರ್ಶಕವಾಗಿ ನಡೆಯುತ್ತಿರುವ ಚುನಾವಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು' ಎಂದು ಅವರು ಮನವಿ ಮಾಡಿದರು.

`ಪ್ರಾಥಮಿಕ ಶಿಕ್ಷಣ ಇಲಾಖೆಯ 878 ನೌಕರರು, ಆರೋಗ್ಯ ಇಲಾಖೆಯ 62 ನೌಕರರು ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಕೆಲವು ನೌಕರರು ಸಂಘದ ಬೈಲಾದ ಪ್ರಕಾರ ಮೂರು ವರ್ಷಗಳ ಸದಸ್ಯತ್ವದ ಶುಲ್ಕವನ್ನು ನಿಗದಿತ ಅವಧಿಯೊಳಗೆ ಪಾವತಿಸದೆ ಇರುವ ಕಾರಣ 2013ರ ಅರ್ಹ ಮತದಾರರ ಪಟ್ಟಿಯಲ್ಲಿ ಪರಿಗಣಿಸಲಾಗಿಲ್ಲ' ಎಂದು ಅವರು ತಿಳಿಸಿದರು.

`ಸಂಘದ ಸದಸ್ಯತ್ವದ ಹಿಂದಿನ ಎರಡು ವರ್ಷಗಳ ಹಣ ಪಾವತಿಸಿದ ಬಗ್ಗೆ ದಾಖಲೆಗಳನ್ನು ನೀಡಿದಲ್ಲಿ ಅಂಥವರಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಈಗಲೂ ಅವಕಾಶವಿದೆ. ಈ ವಿಷಯವನ್ನು ಮತದಾರರ ಪಟ್ಟಿಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆಯೇ ಹೊರತು ಎರಡು ರೀತಿಯ ಮತದಾರರ ಪಟ್ಟಿಯನ್ನು ಪ್ರಕಟಿಸಿಲ್ಲ' ಎಂದು ಅವರು ಹೇಳಿದರು.

`ಚುನಾವಣಾ ಅಧಿಕಾರಿಗಳು ಯಾವುದೇ ಗುಂಪಿನ ಪರವಾಗಿ ಕಾರ್ಯನಿರ್ವಹಿಸದೆ ಚುನಾವಣೆ ನಿಯಮಗಳ ಪ್ರಕಾರ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ' ಎಂದರು.

`ಸಂಘದ ಜಿಲ್ಲಾ ಶಾಖೆಗಳ ಚುನಾವಣೆಗೆ ಸಂಬಂಧಪಟ್ಟಂತೆ ಇಲಾಖಾವಾರು ಮತದಾರರ ಪಟ್ಟಿಗಳಿಗೆ ಜಿಲ್ಲಾಧ್ಯಕ್ಷರು ಮತ್ತು ಕೇಂದ್ರ ಸಂಘದ ಅಧ್ಯಕ್ಷರು ಅನುಮೋದಿಸಲ್ಪಟ್ಟಿರುವ ಮತದಾರರ ಪಟ್ಟಿಯನ್ನು ಮಾತ್ರ ಜಿಲ್ಲಾ ಚುನಾವಣಾಧಿಕಾರಿಗಳು ಚುನಾವಣಾ ಪ್ರಕ್ರಿಯೆಗೆ ಪರಿಗಣಿಸಬೇಕು' ಎಂದು ಹೇಳಿದರು.

`ಒಟ್ಟು 49 ಇಲಾಖೆಗಳ ಪೈಕಿ ಸುಮಾರು 35 ಇಲಾಖೆಗಳ ನೌಕರರು ಯಾವುದೇ ಗೊಂದಲವಿಲ್ಲದೆ ನಾಮಪತ್ರ ಸಲ್ಲಿಸಿರುತ್ತಾರೆ. ಇನ್ನೆರಡು ದಿನಗಳಲ್ಲಿ ಉಳಿದ ಇಲಾಖೆಯ ನೌಕರರು ನಾಮಪತ್ರ ಸಲ್ಲಿಸಲಿದ್ದಾರೆ' ಎಂದು ತಿಳಿಸಿದರು.

`ಸಂಘದ ಸದಸ್ಯರ ಪಟ್ಟಿ ಮತ್ತು ಶುಲ್ಕ ಪಾವತಿ ಮಾಡಿರುವ ಬಗ್ಗೆ ನಿಗದಿತ ಅವಧಿಯಲ್ಲಿ ಮಾಹಿತಿ ಬಂದಿಲ್ಲದ ಕಾರಣ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟುಹೋಗಿದೆಯೇ ಹೊರತು ಇದರಲ್ಲಿ ಯಾವುದೇ ದುರುದ್ದೇಶವಿಲ್ಲ' ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ. ಗುಡೂರ, ಉಪಾಧ್ಯಕ್ಷ ಕೆ.ಎಚ್. ಮುಜಾವರ, ಎಸ್ಸಿ,ಎಸ್ಟಿ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ ಯಂಕಂಚಿ, ಹುನಗುಂದ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಶರಣು ಕೋಟಿ, ಮುಧೋಳ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಸ್. ಪುರವಾರ, ಸಂಘದ ಪ್ರಚಾರ ಕಾರ್ಯದರ್ಶಿ ವಿನೋದಕುಮಾರ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿ ವೇತನಕ್ಕೆ ಆಯ್ಕೆ
ಬಾಗಲಕೋಟೆ: ತಾಲ್ಲೂಕು ಮಲ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮಿತ್ರಾಜನಾಳ, ಅಜಯಗೌಡ ಗೌಡರ, ಭುವನೇಶ್ವರಿ ಇಂಗಳಗಿ, ಶಿಲ್ಪಾ ಕಾಡೇಶನವರ, ಕಾವೇರಿ ತಂಬಾಕದ 2012-13ನೇ ಸಾಲಿನ ಎನ್ಎಂಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮಾಸಿಕ ್ಙ 500 ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.