ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಳಗೊಂಡರ ಜಿಲ್ಲಾ ಸಮಾವೇಶ ಇಂದು

Last Updated 1 ಜುಲೈ 2013, 5:43 IST
ಅಕ್ಷರ ಗಾತ್ರ

ಬಳ್ಳಾರಿ: ವೀರಶೈವ ಲಿಂಗಾಯತ ಸಮುದಾಯದ ಒಳ ಪಂಗಡವಾದ ಲಾಳಗೊಂಡ ಸಮುದಾಯದ ಜಿಲ್ಲಾ ಮಟ್ಟದ ಸಮಾವೇಶ ಹಾಗೂ ಸಮಾ ಜದ ಪ್ರಮುಖರ ಸನ್ಮಾನ ಸಮಾರಂಭ ಜುಲೈ 1ರಂದು ನಗರದ ಬಸವ ಭವನದಲ್ಲಿ ಏರ್ಪಡಿಸಲಾಗಿದೆ.

ನಗರದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಖಿಲ ಕರ್ನಾಟಕ ಲಾಳಗೊಂಡರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎಸ್. ಸೋಮಲಿಂಗನಗೌಡ,

ಲಾಳಗೊಂಡ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ  ಹಾಗೂ ಶೈಕ್ಷಣಿಣಿಕ ವಾಗಿ ಅತ್ಯಂತ ಹಿಂದುಳಿದಿದೆ. ಸಮುದಾ ಯದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಸಂಘವು ಚಿಂತನೆ ನಡೆಸಿದ್ದು ಈ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸ ಲಾಗಿದೆ ಎಂದರು.

ಅಂದು ನಡೆಯುವ ಸಮಾವೇಶದಲ್ಲಿ ಸ್ಥಳೀಯ ಕೊಟ್ಟೂರು ಸ್ವಾಮಿ ಮಠದ ಸಂಗನಬಸವ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಕರ್ಚಿಗನೂರು ಮಠದ ಅಭಿನವ ಮಹಾಂತ ಸ್ವಾಮೀಜಿ, ವಾಮದೇವ ಶಿವಾಚಾರ್ಯರು, ಕಮ್ಮರಚೇಡು ಕಲ್ಯಾಣ ಮಠದ ಕಲ್ಯಾಣ ಸ್ವಾಮೀಜಿ, ಸಂಡೂರಿನ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಅಂದು ಬೆಳಗ್ಗೆ 8ಕ್ಕೆ ಸಿರಿಗೇರಿ ಗ್ರಾಮದ ಶಿವಶರಣೆ ನೀಲಮ್ಮ ಅವರ ಮಠದಿಂದ ಬಳ್ಳಾರಿಯ ಬಸವ ಭವನದವರೆಗೆ ಲಾಳಗೊಂಡ ಜ್ಯೋತಿಯನ್ನು  ವೆುರ ವಣಿಗೆ ಮೂಲಕ ತರಲಾಗುವುದು. ಬೆಳಿಗ್ಗೆ 10ಕ್ಕೆ ಆರಂಭವಾಗುವ  ಸಮಾವೇಶವನ್ನು ಸಂಘದ ರಾಜ್ಯ ಘಟಕದ ಅಧ್ಯಕ್ಷ ಅರವಿ ಬಸವನಗೌಡ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಹೊಸದಾಗಿ ಶಾಸಕರಾಗಿ ಆಯ್ಕೆ ಯಾದ ಲಾಳಗೊಂಡರ ಸಮಾಜದ ಡಾ.ಎಸ್. ಶಿವರಾಜ್ ಪಾಟೀಲ್, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ ಸೇರಿ ದಂತೆ ಇತರರನ್ನು ಸನ್ಮಾನಿಸ ಲಾಗುವುದು. `ಗೊಂಡಿ ಭಾಷೆಯಿಂದ ಸಿಂಧು ರಹಸ್ಯ ಲಿಪಿಯ ಶೋಧ' ಹಾಗೂ `ಓದು ಮತ್ತು ಗೊಂಡ್ವಾನ ಸಂಸ್ಕೃತಿ ಅರ್ಥಾತ್ ಸಿಂಧು ಸಂಸ್ಮೃತಿ'  ಗ್ರಂಥಗಳನ್ನು ಬಿಡುಗಡೆ ಮಾಡ ಲಾಗುವುದು ಎಂದು ಅವರು ಹೇಳಿದರು..

ನಂತರ ಕಲಾವಿದ ಯಲ್ಲನಗೌಡ ಶಂಕರಬಂಡೆ ಮತ್ತು ತಂಡದವರಿಂದ ಸಾಮೂಹಿಕ ವಚನ ಗಾಯನ ಕಾರ್ಯ ಕ್ರಮ ನಡೆಯಲಿದೆ. ವೀರಶೈವ ಲಿಂಗಾ ಯತ ಸಮಾಜದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ಊಟ, ವಸತಿ ಸೌಲಭ್ಯವಿರುವ ವಿದ್ಯಾರ್ಥಿ ನಿಲಯದ ನಿರ್ಮಾಣ ಮಾಡುವ ಕುರಿತು ಸಂಘ ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಸಮಾಜದ ಮುಖಂಡರಾದ ಡಾ.ಎ.ಚೆನ್ನಪ್ಪ, ಶಾಂತನಗೌಡ, ವೀರಭದ್ರಗೌಡ ಉಪಸ್ಥಿತರಿದ್ದರು.

ಅಧ್ಯಯನ ಶಿಬಿರ ಇಂದು
ಹೊಸಪೇಟೆ: ಎಸ್‌ಎಫ್‌ಐನ ಎರಡು ದಿನಗಳ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಜುಲೈ 1 ರಂದು ಟಿಬಿ ಡ್ಯಾಂನ ಗೌಂಡರ್ ಸಮುದಾಯ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂ. ವೀರಭದ್ರಪ್ಪ ಕಾರ್ಯಕ್ರಮ ಉದ್ಘಾಟಿಸುವರು.
ಸಾಹಿತಿಗಳಾದ ಕೆ.ನೀಲಾ, ಡಾ.ಚಂದ್ರಪೂಜಾರಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜೆ.ಸತ್ಯಬಾಬು, ಎಸ್‌ಎಫ್‌ಐ ಕೇಂದ್ರ ಸಮಿತಿ ಸದಸ್ಯ ರೇಣುಕಾ ಕಹಾರ್, ಪಾಲ್ಗೊಳ್ಳಲಿದ್ದಾರೆ. ಎಸ್‌ಎಫ್‌ಐನ ರಾಜ್ಯಾಧ್ಯಕ್ಷ ಅನಂತ ನಾಯ್ಕ ಅಧ್ಯಕ್ಷತೆವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT