ಕಮಲಾಪುರ: ‘ವಾಗ್ದರ್ಗಿ ಬಳಿಯ ಹಳ್ಳಕ್ಕೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಲು ₹10 ಕೋಟಿ ಅನುದಾನ ಒದಗಿಸಲು ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಶಾಸಕ ಬಸವರಾಜ ಮತ್ತಿಮಡು ತಿಳಿಸಿದರು.
ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ವಾಗ್ದರ್ಗಿ ರಾಚೋಟ್ಟೇಶ್ವರ ದೇವಸ್ಥಾನದ ಬಳಿ ನಿರ್ಮಿಸಿದ ಯಾತ್ರಿನಿವಾಸ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಯಾತ್ರಿ ನಿವಾಸ್ ಕಟ್ಟಡಕ್ಕೆ ₹ 50 ಲಕ್ಷ ಅನುದಾನ ಒದಗಿಸಲಾಗಿದೆ. ಮುರಡಿ ರಾಚೋಟೇಶ್ವರ ದೇವಸ್ಥಾನದ ವರೆಗೆ ರಸ್ತೆ ನಿರ್ಮಿಸಲಾಗಿದೆ ಎಂದರು.
ಹಾರಕೂಡ ಚೆನ್ನವೀರ ಶಿವಾಚಾರ್ಯ ಮಾತನಾಡಿ, ಜೀವನದಲ್ಲಿ ಮನುಷ್ಯ 3 ಆನಂದಗಳನ್ನು ಅನುಭವಿಸುತ್ತಾನೆ. ವಿಷಯಾನಂದ, ಭೌತಿಕ ಆನಂದಗಳು ಲೌಕಿಕ ಆನಂದವಾದರೆ ಆತ್ಮಾನಂದ ಆಧ್ಯಾತ್ಮಿಕ ಆನಂದ. ಆತ್ಮನಂದಕ್ಕಾಗಿ ದೇವರ ಮೊರೆಹೋಗಬೇಕು. ದೈವ ಕೃಪೆ ಇದ್ದರೆ ಸಂಕಷ್ಟಗಳು ದೂರವಾಗುತ್ತವೆ ಎಂದರು.
ಬಬಲಾದ ಗುರುಪಾದಲಿಂಗ ಶಿವಯೋಗಿ, ಗ್ರಾ.ಪಂ. ಅಧ್ಯಕ್ಷೆ ಸುಧಾ ರಮೇಶ ಮೂಲಗೆ, ಸಂಗಮೇಶ ವಾಲಿ, ರೇವಣಸಿದ್ದಪ್ಪ ಮೂಲಗೆ, ಸಂಗಮೇಶ ನಾಗನಳ್ಳಿ, ಅಶೋಕ ಅಂಬಾರಾವ ಹೂಗಾರ, ಎಇಇ ಬಸವರಾಜ ರಾಠೋಡ, ಕಾಶಿನಾಥ ರಾಮನ್, ಸುರೇಶ ಸಾಹು, ಸಿದ್ದಣಗೌಡ, ವಿನೋದ ಪಾಟೀಲ ಸರಡಗಿ, ಪ್ರಭುಲಿಂಗ ಬಂದಗಿ, ಶಿವರಾಯ ಸಿಂಗೆ, ಶಿವಪುತ್ರಪ್ಪ ದಳಪತಿ ನಿಜಲಿಂಗಪ್ಪ ವಾಗ್ಧರಿ, ದಿಲೀಪ ಸಾಹು, ಭೀಮರಾಯ ಪಾಟೀಲ, ನಿಜಲಿಂಗಪ್ಪ ವಾಗ್ದರ್ಗಿ, ಬಸವರಾಜ ಪಾಟೀಲ, ಬಸು ಪಾಟೀಲ ಕೆಸರಟಗಿ, ಸೋಮಯ್ಯ ಮಠಪತಿ, ರೇವಣಸಿದ್ದಪ್ಪ ಮೂಲಗೆ, ಹಣಮಂತರಾಯ ದುಕಾನ್, ದೀಪಕ ಸಲಗರ್, ಪ್ರಶಾಂತ ಇಂಡಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.