ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿಲ್ದಾಣದಲ್ಲಿ ಆಟೊ ದರ್ಬಾರ್‌!

ರೈಲು ಬಂದರೆ ಸಂಚಾರ ಸಂಪೂರ್ಣ ಅಸ್ತವ್ಯಸ್ತ; ಪ್ರಯಾಣಿಕರ ಪರದಾಟ
Last Updated 24 ಜುಲೈ 2018, 19:30 IST
ಅಕ್ಷರ ಗಾತ್ರ

ಹೊಸಪೇಟೆ: ನಗರದ ರೈಲು ನಿಲ್ದಾಣದ ಆವರಣದಲ್ಲಿ ಅಕ್ಷರಶಃ ಆಟೊ ರಿಕ್ಷಾಗಳ ದರ್ಬಾರ್‌ ನಡೆಯುತ್ತಿದೆ!

ಪ್ರಯಾಣಿಕರರೈಲು ಬಂದರೆ ಸಾಕು ನಿಲ್ದಾಣದ ಪ್ರವೇಶ ದ್ವಾರದ ಮುಂಭಾಗದಲ್ಲಿರುವ ಇಡೀ ಪರಿಸರ ಆಟೊಗಳ ನಿಲುಗಡೆ ಜಾಗವಾಗಿ ಬದಲಾಗುತ್ತದೆ. ಆಟೊಗಳು ನಿಲ್ಲಿಸಿದ ಜಾಗವೇ ಆಟೊ ನಿಲುಗಡೆ ಸ್ಥಳವಾಗಿ ಬದಲಾಗುತ್ತದೆ. ನಿಲ್ದಾಣದ ಪರಿಸರದಲ್ಲಿ ಅನ್ಯ ವಾಹನಗಳು ಓಡಾಡಲು ಜಾಗವಿಲ್ಲದಂತಾಗುತ್ತದೆ.

ಆಟೊಗಳು ಮುಂದಕ್ಕೆ ಹೋಗುವವರೆಗೆಸಾರಿಗೆ ಸಂಸ್ಥೆಗೆ ಸೇರಿದ ಸಿಟಿ ಬಸ್ಸುಗಳು ತಡಹೊತ್ತು ಕಾದು ನಿಲ್ಲಬೇಕಾಗುತ್ತದೆ. ನಿಲ್ದಾಣದಿಂದ ಹೊರಗೆ, ಹೊರಗಿನಿಂದ ಒಳಗೆ ಹೋಗುವ ಪ್ರಯಾಣಿಕರು ಆಟೊಗಳ ಮಧ್ಯೆ ನುಸುಳಿಕೊಂಡು, ಹರಸಾಹಸ ಮಾಡಿ ಹೋಗುವಂತಹ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಅನೇಕ ಸಲ ಪ್ರಯಾಣಿಕರು ನಿಲ್ದಾಣದ ಪ್ಲಾಟ್‌ಫಾರಂ ತಲುಪುವ ಹೊತ್ತಿಗೆ ರೈಲು ಹೊರಟಿರುವ ನಿದರ್ಶನಗಳಿವೆ. ಹೀಗಿದ್ದರೂ ಸಂಚಾರ ಪೊಲೀಸರಾಗಲಿ, ರೈಲ್ವೆ ಪೊಲೀಸರಾಗಲಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಸಾರ್ವಜನಿಕರು.

‘ದ್ವಿಚಕ್ರ ವಾಹನಗಳು, ಕಾರುಗಳು ಹಾಗೂ ಆಟೊಗಳ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಇದೆ. ಹೀಗಿದ್ದರೂ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಅದರಲ್ಲೂ ಪ್ರಯಾಣಿಕರ ರೈಲು ಬರಲು ಹತ್ತು–ಹದಿನೈದು ನಿಮಿಷಕ್ಕೆ ಮೊದಲು ಆಟೊಗಳು ಇಡೀ ಆವರಣದಲ್ಲಿ ಮನಬಂದಂತೆ ನಿಲ್ಲಿಸಲಾಗುತ್ತದೆ. ಪ್ರಯಾಣಿಕರು ಓಡಾಡಲು ಬಹಳ ಕಿರಿಕಿರಿಯಾಗುತ್ತದೆ’ ಎನ್ನುತ್ತಾರೆ ಹಿರಿಯ ನಾಗರಿಕ ವೆಂಕಟೇಶ್‌ ಕುಡಿತಿನಿ.

‘ಆಟೊಗಳನ್ನು ನಿಲ್ಲಿಸುವುದರ ಜತೆಗೆ ಅದರ ಚಾಲಕರು, ಪ್ರಯಾಣಿಕರಿಗೆ ನಮ್ಮ ಆಟೊ ಅನ್ನೇ ಹತ್ತಬೇಕೆಂದು ಒತ್ತಡ ಹೇರುತ್ತಾರೆ. ಪ್ರಯಾಣಿಕರ ಕೈಗಳಿಂದ ಬ್ಯಾಗುಗಳನ್ನು ಒತ್ತಾಯಪೂರ್ವಕವಾಗಿ ಕಸಿದುಕೊಳ್ಳುತ್ತಾರೆ. ಇದು ಪ್ರಯಾಣಿಕರಿಗೆ ಮುಜುಗರ ಉಂಟು ಮಾಡುತ್ತದೆ’ ಎಂದರು.

‘ವಿಶ್ವವಿಖ್ಯಾತ ಹಂಪಿ ಸನಿಹದಲ್ಲೇ ಇರುವುದರಿಂದ ನಿತ್ಯ ದೇಶ–ವಿದೇಶಗಳಿಂದ ನೂರಾರು ಜನ ರೈಲಿಗೆ ಬರುತ್ತಾರೆ. ಆದರೆ, ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರಾಗಲಿ, ಸಂಚಾರ ಪೊಲೀಸರಾಗಲಿ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಅದಕ್ಕೆ ಕೂಡಲೇ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT