ಹರಪನಹಳ್ಳಿ: ಮನುಷ್ಯನ ಆಕಾರಕ್ಕೆ ಬಟ್ಟೆಗಳನ್ನು ತಯಾರಿಸಿ ಕೊಡುವ ನೇಕಾರರ ವೃತ್ತಿ ದೇವರಿಗೆ ಸಮನಾದದ್ದು ಎಂದು ಹರಪನಹಳ್ಳಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಪ್ನ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಪಟ್ಟಣದ ಬಸಮ್ಮ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಕೈಮಗ್ಗ ಉದ್ಯಮವಾಗಿ ಮಾರ್ಪಟ್ಟಿದೆ. ಗ್ರಾಮೀಣರ ಆರ್ಥಿಕತೆ ಹೆಚ್ಚಿಸುವಲ್ಲಿ ಕೈಮಗ್ಗದ ಪಾತ್ರ ಬಹುಮುಖ್ಯವಾಗಿದೆ. ಕೈಮಗ್ಗದ ಉತ್ಪನ್ನಗಳನ್ನು ಭಾರತೀಯರು ಹೆಚ್ಚೆಚ್ಚು ಖರೀದಿಸಬೇಕು ಎಂದು ಮನವಿ ಮಾಡಿದರು.
ದೇಸಿ ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ ಬಳಸುವ ಮೂಲಕ ಭಾರತದ ಸಾಂಪ್ರದಾಯಿಕ ಕೈಮಗ್ಗದ ಉತ್ಪನ್ನಗಳನ್ನು ಖರೀದಿಸಿ ನೇಕಾರರಿಗೆ ಆರ್ಥಿಕ ಬಲ ತುಂಬಬೇಕು ಎಂದರು.
ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಖಾದಿ ಗ್ರಾಮೋದ್ಯೋಗದಲ್ಲಿ ವಿವಿಧ ಉತ್ಪನ್ನ ಖರೀದಿಸುವ ಮೂಲಕ ಕೈಮಗ್ಗ ದಿನ ಆಚರಿಸಿದರು.
ಪ್ರಧಾನ ಕಾರ್ಯದರ್ಶಿ ಮಂಜುಳಾ ನಾಗರಾಜ, ಉಪಾಧ್ಯಕ್ಷೆ ಉಮಾದೇವಿ, ಜಾನಕಮ್ಮ, ಕಲ್ಪನಾ, ಖಜಾಂಚಿ ಕೆ.ಎಂ. ಕೊಟ್ರಮ್ಮ, ಪದ್ಮಾವತಿ, ಶೀಲಾ, ರೇಣುಕಮ್ಮ, ಮಂಜುಳಾ ಕೆ. ಮಂಜುಳಾ ಮಡಿವಾಳರ ಉಪಸ್ಥಿತರಿದ್ದರು.