ಸೋಮವಾರ, 2 ಫೆಬ್ರುವರಿ 2026
×
ADVERTISEMENT
ADVERTISEMENT

ಮರಳು ಅಕ್ರಮ | ಡಿಎಂಜಿ ಸರಣಿ ದಾಳಿ: 63 ಟನ್ ಮರಳು, 25 ಟನ್‌ ಕಟ್ಟಡ ಕಲ್ಲು ವಶ

Published : 2 ಫೆಬ್ರುವರಿ 2026, 1:57 IST
Last Updated : 2 ಫೆಬ್ರುವರಿ 2026, 1:57 IST
ಫಾಲೋ ಮಾಡಿ
Comments
ಮೇಲೆ ಎಂ.ಸ್ಯಾಂಡ್‌ ಒಳಗೆ ಮರಳು!
ಬಳ್ಳಾರಿ ನಗರದ ಕೌಲ್‌ ಬಜಾರ್‌ನಲ್ಲಿ ಶನಿವಾರ ಲಾರಿಯೊಂದನ್ನು ತಡೆದ ಗಣಿ ಅಧಿಕಾರಿಗಳು ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ವಶಕ್ಕೆ ಪಡೆದರು. ಮೇಲೆ ಎಂ.ಸ್ಯಾಂಡ್‌ ಪದರ ಹಾಕಿ ಒಳಗೆ ಮರಳು ಸಾಗಿಸುತ್ತಿದ್ದದ್ದು ಈ ವೇಳೆ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಹನವನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಈ ದಾಳಿಯಲ್ಲಿ ಒಟ್ಟು 4 ಟನ್‌ ಮರಳು ಸಿಕ್ಕಿದ್ದು ₹32320 ದಂಡ ವಿಧಿಸಲಾಗಿದೆ.  ‘ನಿರಂತರ ದಾಳಿ’ ಇನ್ನು ದಾಳಿ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ದ್ವಿತೀಯಾ ಇ.ಸಿ ‘ಅಕ್ರಮ ಗಣಿಗಾರಿಕೆ ವಿರುದ್ಧ ನಿರಂತರ ದಾಳಿಗಳನ್ನು ನಡೆಸಲಾಗುತ್ತಿದೆ. ಅದರ ಭಾಗವಾಗಿ ಈ ದಾಳಿಗಳು ನಡೆದಿವೆ. ಖನಿಜಕ್ಕೆ ಸಂಬಂಧಿಸಿದ  ಯಾವುದೇ ಅಕ್ರಮಕ್ಕೂ ಅವಕಾಶ ನೀಡುವುದಿಲ್ಲ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT