‘ಬೋಧಕ ಸಿಬ್ಬಂದಿಯ ಮಾರ್ಗದರ್ಶನ, ವಿದ್ಯಾರ್ಥಿಗಳ ಕಠಿಣ ಪರಿಶ್ರಮದಿಂದ ನಮ್ಮ ಕಾಲೇಜಿಗೆ ಸತತ ಮೂರು ವರ್ಷಗಳಿಂದ ಮೊದಲ ರ‍್ಯಾಂಕ್ ಬಂದಿವೆ. ವೀ.ವಿ. ಸಂಘ, ಕಾಲೇಜು ಆಡಳಿತ ಮಂಡಳಿಯ ಇಚ್ಛಾಸಕ್ತಿಯಿಂದ ಕಾಲೇಜಿನಲ್ಲಿ ಉತ್ತಮ ಶೈಕ್ಷಣಿಕ ಪರಿಸರ ರೂಪುಗೊಂಡಿದೆ’ ಎಂದು ಜಿಬಿಆರ್ ಕಾಲೇಜು ಪ್ರಾಚಾರ್ಯ ಎಸ್.ಎಸ್. ಪಾಟೀಲ್ ಹೇಳಿದರು.