ಹೊಸಪೇಟೆ: ಇಲ್ಲಿನ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನ ಆವರಣದಲ್ಲಿ ಶುಕ್ರವಾರ ಬಾಸ್ಕೆಟ್‌ಬಾಲ್ ಅಂಕಣ ಉದ್ಘಾಟಿಸಲಾಯಿತು.

ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ ಬಸವರಾಜ ಉದ್ಘಾಟಿಸಿ, ‘ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ’ ಎಂದರು ಹೇಳಿದರು.

‘ಆಟದ ಬಯಲು ಕೂಡ ಒಂದು ವಿಶಾಲವಾದ ಶಾಲೆಯಿದ್ದಂತೆ. ಅದು ನಮಗೆ ಅನೇಕ ಪಾಠಗಳನ್ನು ಕಲಿಸಿಕೊಡುತ್ತದೆ. ಸ್ನೇಹಪರ ಭಾವನೆ, ಸ್ಪರ್ಧಾತ್ಮಕ ಭಾವನೆ ಹಾಗೂ ಸಹಕಾರ ಮನೋಭಾವ ಬೆಳೆಸುತ್ತದೆ. ಶಾರೀರಿಕ ಸಂಪತ್ತು ಬೌದ್ಧಿಕ ವಿಕಸನದ ಅಡಿಪಾಯವಾಗಿದೆ. ತಾಂತ್ರಿಕ ವಿದ್ಯಾರ್ಥಿಗಳು ಇಂಥ ಕ್ರೀಡಾ ಸೌಕರ್ಯಗಳ ಲಾಭ ಪಡೆದು ರಾಷ್ಟೀಯ, ಅಂತರರಾಷ್ಟ್ರೀಯ ಮನ್ನಣೆ ಪಡೆಯಬೇಕು’ ಎಂದು ತಿಳಿಸಿದರು.

ಸಂಘದ ಕೋಶಾಧಿಕಾರಿ ಕೋಳೂರು ಮಲ್ಲಿಕಾರ್ಜುನಗೌಡ, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಜಾನೆಕುಂಟೆ ಬಸವರಾಜ, ಸದಸ್ಯರಾದ ಏಕಾಮರೇಶ ತಾಂಡೂರ, ಪ್ರಾಂಶುಪಾಲ ಎಸ್.ಎಂ.ಶಶಿಧರ್ ಇದ್ದರು. ಕೊನೆಯಲ್ಲಿ ಬಳ್ಳಾರಿ ಜಿಲ್ಲೆಯ ಆಹ್ವಾನಿತ ಬಾಸ್ಕೆಟ್ ಬಾಲ್ ಆಟಗಾರರ ತಂಡಗಳ ಮಧ್ಯೆ ಪಂದ್ಯಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.