ಸಂಡೂರು: ಪಟ್ಟಣದ ತಾಲ್ಲೂಕು ಸಾರ್ವಜನಿಕ 100 ಹಾಸಿಗೆಗಳ ಆಸ್ಪತ್ರೆಗೆ ಒಬ್ಬ ರೇಡಿಯಾಲಾಜಿಸ್ಟ್ ಅನ್ನು ನೇಮಿಸಲೂ ಸಾಧ್ಯವಾಗದ ಜಿಲ್ಲಾಡಳಿತದ ಅಸಹಾಯಕತೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಕಾಲಕ್ಕೆ ಸ್ಕ್ಯಾನಿಂಗ್ ಸವಲತ್ತು ಸಿಗದೇ ತಾಲ್ಲೂಕಿನ ಲಕ್ಷ್ಮೀಪುರದ ಕುಟುಂಬವೊಂದು ದೂರದ ಹೊಸಪೇಟೆಗೆ ತೆರಳುವ ವೇಳೆ ಅಪಘಾತಕ್ಕೀಡಾಗಿ ದುರಂತ ಅಂತ್ಯ ಕಂಡಿತ್ತು. ಹೀಗಾಗಿ ತಾಲ್ಲೂಕಿನ ಹೋರಾಟಗಾರರು ಸರ್ಕಾರಿ ಆಸ್ಪತ್ರೆಗೆ ತ್ವರಿತವಾಗಿ ಒಬ್ಬ ರೇಡಿಯಾಲಾಜಿಸ್ಟ್ ನೇಮಕ ಮಾಡಬೇಕು, ತಾಲ್ಲೂಕಿನಲ್ಲಿ ಶಾಶ್ವತವಾಗಿ ಸ್ಕ್ಯಾನಿಂಗ್ ಸೇವೆ ಕಲ್ಪಿಸಬೇಕು ಎಂದು ಜಿಲ್ಲಾಡಳಿತಕ್ಕೆ

ಆಗ್ರಹಿಸಿದ್ದರು.

ಆದರೆ, ಈ ವರೆಗೆ ಒಬ್ಬೇ ಒಬ್ಬ ರೇಡಿಯಾಲಜಿಸ್ಟ್ ಅನ್ನು ನೇಮಿಸಲೂ ಸಾಧ್ಯವಾಗದೇ ಜಿಲ್ಲಾಡಳಿತ ಅಸಹಾಯಕತೆಗೆ ಸಿಲುಕಿದೆ. ಸಂಡೂರಿನಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ಆದಾಯವಿದ್ದರೂ ಒಬ್ಬ ರೇಡಿಯಾಲಜಿಸ್ಟ್ ಹೊಂದಿಸಲಾಗದೇ ಇರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ನೂರಾರು ಗರ್ಭಿಣಿಯರು ಸ್ಕ್ಯಾನಿಂಗ್, ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಆಗಮಿಸುತ್ತಾರೆ. ಆದರೆ ರೇಡಿಯಾಲಾಜಿಸ್ಟ್ ಕೊರತೆ ಕಾರಣಕ್ಕೆ ಬಳ್ಳಾರಿ, ಹೊಸಪೇಟೆ, ಕೊಪ್ಪಳ ಸೇರಿದಂತೆ ಇತರೆ ದೂರದ ನಗರಗಳಿಗೆ ಹೋಗುತ್ತಿದ್ದಾರೆ. ದುಬಾರಿ ಹಣವನ್ನು ತೆತ್ತು ಸ್ಕ್ಯಾನಿಂಗ್ ಮಾಡಿಸಿಕೊಳ್ಳುವುದು ಸಾಮಾನ್ಯವಾಗಿದೆ.

ಆಸ್ಪತ್ರೆಯಲ್ಲಿ ರೇಡಿಯಾಲಾಜಿಸ್ಟ್ ಕೊರತೆಯಿಂದ ಸ್ಕ್ಯಾನಿಂಗ್ ಯಂತ್ರದ ಕೊಠಡಿಗೆ ಕಳೆದ ಎರಡು ವರ್ಷಗಳಿಂದ ಬೀಗ ಜಡಿಯಲಾಗಿತ್ತು. ಜಿಲ್ಲಾಡಳಿತವು ಜನರ ಆಗ್ರಹಕ್ಕೆ ಮಣಿದು ಜಿಂದಾಲ್ ಸಂಜೀವಿನಿ ಆಸ್ಪತ್ರೆಯಿಂದ ವಾರಕ್ಕೆ ಒಂದು ಬಾರಿ ರೇಡಿಯೋಲಾಜಿಸ್ಟ್ ತಾತ್ಕಾಲಿಕವಾಗಿ ನೇಮಕ ಮಾಡಿದೆ. ಆದರೆ, ಇದು ಸಾಲುತ್ತಿಲ್ಲ. ಪೂರ್ಣಾವಧಿಗೆ ರೇಡಿಯೊಲಜಿಸ್ಟ್ ಸೇವೆ ಲಭ್ಯವಾಗಬೇಕು ಎಂದು ಜನ ಆಗ್ರಹಿಸಿದ್ದಾರೆ.

ವೈದ್ಯರ ಕೊರತೆ: ತಾಲ್ಲೂಕು ಆಸ್ಪತ್ರೆಗೆ ಸರ್ಕಾದಿಂದ ಒಟ್ಟು 16 ವೈದ್ಯ ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 8 ಜನ ವೈದ್ಯರು ಮಾತ್ರ ಸದ್ಯ ಸೇವೆ ಸಲ್ಲಿಸುತ್ತಿದ್ದಾರೆ. ಸ್ತ್ರೀರಾಗ ತಜ್ಞ, ಕಣ್ಣಿನ ವೈದ್ಯ, ಚರ್ಮ ವೈದ್ಯ, ಎಂಬಿಬಿಎಸ್ ವೈದ್ಯರು-3 ಸೇರಿ ಒಟ್ಟು 7 ಜನ ವೈದ್ಯರ ಹುದ್ದೆಗಳು ಹಲವಾರು ವರ್ಷಗಳಿಂದ ಭರ್ತಿಯಾಗದೇ ಖಾಲಿ ಇವೆ.

ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ತುಂಬುತ್ತಿರುವ ತಾಲ್ಲೂಕುವೊಂದಕ್ಕೆ ಸರಿಯಾಗಿ ಆರೋಗ್ಯ ಸೇವೆ ನೀಡದ ಜಿಲ್ಲಾಡಳಿತವನ್ನು ಜನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.