ಬಳ್ಳಾರಿ: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 13ನೇ ವಾರ್ಷಿಕ ಘಟಿಕೋತ್ಸವವು ಇದೇ 4ರಂದು ನಿಗದಿಯಾಗಿದೆ. ಕಾರ್ಯಕ್ರಮದ ವೆಚ್ಚಗಳಿಗಾಗಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯು ₹60 ಲಕ್ಷಕ್ಕೆ ಅನುಮೋದನೆ ನೀಡಿದೆ.

ವಿಶ್ವವಿದ್ಯಾಲಯದ 13ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗೌರವ ಡಾಕ್ಟರೇಟ್ ಪದವಿಗಾಗಿ ಸೂಕ್ತ ಸಾಧಕರ ಸ್ವವಿವರ ಪಡೆಯಲು ದಿನಾಂಕವನ್ನು ನಿಗದಿಪಡಿಸುವ ಕುರಿತು , ಘಟಿಕೋತ್ಸವವನ್ನು ಆಯೋಜಿಸಲು ತಗಲಬಹುದಾದ ವೆಚ್ಚದ ಪಟ್ಟಿಯನ್ನು ಅನುಮೋದಿಸುವ ಕುರಿತು, ಘಟಿಕೋತ್ಸವದಲ್ಲಿ ಪ್ರದಾನ ಮಾಡಲಿರುವ ವಿವಿಧ ಪದವಿಗಳ ರ್ಯಾಂಕ್ಗಳ ಮತ್ತು ಚಿನ್ನದ ಪದಕ ಪಡೆದವರ ಪಟ್ಟಿ ತಯಾರಿಸಲು, ವಿವಿಧ ಸಮಿತಿಗಳನ್ನು ರಚಿಸಲು, ಗಣ್ಯರ ಸ್ವವಿವರಗಳನ್ನು ಪರಿಶೀಲಿಸಲು ತಜ್ಞರ ಪರಿಶೀಲನಾ ಸಮಿತಿಯನ್ನು ರಚಿಸಲು, ಮುಖ್ಯ ಅತಿಥಿಗಳ ನಾಮನಿರ್ದೇಶನ ಮಾಡಲು ಸಿಂಡಿಕೇಟ್ ಸಭೆಯ ಚರ್ಚೆ ಹಾಗೂ ಆಡಳಿತಾತ್ಮಕ ಅನುಮೋದನೆಗಾಗಿ ಜುಲೈ 29ರಂದು ವಿ.ವಿಯ ಆವರಣದಲ್ಲಿ ಸಿಂಡಿಕೇಟ್ ಸಭೆ ನಡೆದಿತ್ತು.

ಈ ಸಭೆಯ ನಡಾವಳಿಗಳು ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು, ಒಂದು ದಿನದ ಘಟಿಕೋತ್ಸವಕ್ಕೆ ಭಾರಿ ಮೊತ್ತ ಖರ್ಚು ಮಾಡುವ ನಿರ್ಧಾರ ಕೈಗೊಂಡಿರುವುದು ಬಹಿರಂಗವಾಗಿದೆ.

‘ವಿಶ್ವವಿದ್ಯಾಲಯದ 13ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದ ಆಯವ್ಯಯಕ್ಕೆ ಸಂಬಂಧಿಸಿದಂತೆ ಕುಲಸಚಿವರು(ಮೌಲ್ಯಮಾಪನ) ವಿವರವಾದ ಮಾಹಿತಿಯನ್ನು ಸಿಂಡಿಕೇಟ್ ಸಭೆಗೆ ಸಲ್ಲಿಸಿದ್ದು, ಸಿಂಡಿಕೇಟ್ ಸಭೆಯು ಕುಲಸಚಿವರ ವಿವರವಾದ ಮಾಹಿತಿಯನ್ನು ಪರಿಶೀಲಿಸಿ ಒಟ್ಟಾರೆ ₹60 ಲಕ್ಷಕ್ಕೆ ಆಯವ್ಯಯವನ್ನು ನಿಗದಿಪಡಿಸಿ ಅನುಮೋದಿಸಿತು’ ಎಂದು ನಡಾವಳಿಗಳಲ್ಲಿ ಬರೆಯಲಾಗಿದೆ.

ಆದರೆ, ಒಂದು ದಿನ ನಡೆಯುವ ಘಟಿಕೋತ್ಸವಕ್ಕೆ ಭಾರಿ ಮೊತ್ತದ ಹಣ ಖರ್ಚು ಮಾಡುತ್ತಿರುವ ಬಗ್ಗೆ ಸಿಂಡಿಕೇಟ್ನ ಕೆಲವು ಸದಸ್ಯರು, ಮಾಜಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮ ನಡೆಯುವ ಜಾಗ, ವ್ಯವಸ್ಥೆ ವಿವಿಯ ಸುಪರ್ದಿಯಲ್ಲೇ ಇದ್ದಾಗ್ಯೂ, ಇಷ್ಟು ಖರ್ಚು ಏಕೆ? ಇದು ದುಂದು ವೆಚ್ಚಕ್ಕೆ ದಾರಿ ಮಾಡಿಕೊಡುತ್ತದೆ. ಇಲ್ಲವೇ ಅಕ್ರಮಕ್ಕೆ ಕಾರಣವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯೆ ಪಡೆಯಲು ಕುಲಪತಿ ಪ್ರೊ. ಎಂ ಮುನಿರಾಜು ಅವರನ್ನು ಸಂಪರ್ಕಿಸಲು ಸತತವಾಗಿ ಪ್ರಯತ್ನಿಸಲಾಯಿತಾದರೂ, ಅವರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ಇತರ ತೀರ್ಮಾನಗಳು: ವಿಶ್ವವಿದ್ಯಾಲಯದ 13ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದ ಪ್ರಕ್ರಿಯೆಯನ್ನು ಆರಂಭಿಸಲು ಜುಲೈ 29ರ ಸಿಂಡಿಕೇಟ್ ಸಭೆ ಅನುಮೋದನೆ ನೀಡಿತ್ತು. ಜತೆಗೆ, ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಆಯ್ಕೆ ಸಮಿತಿಗೆ ಆಂಧ್ರ ಪ್ರದೇಶದ ಗಿರಿಜನ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ. ತೇಜಸ್ವಿ ವಿ. ಕಟ್ಟಿಮನಿ ಅವರನ್ನು ನಾಮನಿರ್ದೇಶನ ಮಾಡಲೂ ಈ ಸಭೆಯಲ್ಲಿ ಸಮ್ಮತಿ ಸಿಕ್ಕಿತ್ತು.

ಹಿಂದಿನ ಘಟಿಕೋತ್ಸವದ ಲೆಕ್ಕಪತ್ರ ಎಲ್ಲಿ?

ಈ ಬಾರಿಯ ಘಟಿಕೋತ್ಸವಕ್ಕೆ ವಿಶ್ವವಿದ್ಯಾಲಯವು ₹60 ಲಕ್ಷ ಖರ್ಚು ಮಾಡಲು ಆಯವ್ಯಯ ಅನುಮೋದನೆ ನೀಡಿರುವ ಈ ಹೊತ್ತಿನಲ್ಲೇ ಹಿಂದಿನ ಘಟಿಕೋತ್ಸವದ ಲೆಕ್ಕಪತ್ರಗಳೇ ಇನ್ನೂ ಮಂಡನೆಯಾಗಿಲ್ಲ ಎಂಬ ವಿಷಯವೂ ಬಹಿರಂಗವಾಗಿದೆ. ಇದೇ ವಿಚಾರವನ್ನು ಜುಲೈ 29ರ ಸಿಂಡಿಕೇಟ್ ಸಭೆಯಲ್ಲಿ ಸದಸ್ಯರು ಪ್ರಶ್ನೆ ಮಾಡಿದರು ಎನ್ನಲಾಗಿದೆ. ಇದಕ್ಕೆ ಸಮಜಾಯಿಷಿ ನೀಡಿರುವ ಕುಲಪತಿ ಹಿಂದಿನ ಘಟಿಕೋತ್ಸವ ಮತ್ತು ಈ ಬಾರಿಯ ಘಟಿಕೋತ್ಸವದ ಲೆಕ್ಕ ಪತ್ರಗಳನ್ನು ಒಟ್ಟಿಗೆ ಮಂಡಿಸುವುದಾಗಿ ತಿಳಿಸಿದರು ಎಂದು ಮೂಲಗಳು ಮಾಹಿತಿ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.