ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರು ವಿಚಾರಣೆಯಲ್ಲೂ ಭೀಮಾ ನಾಯ್ಕ ಸದಸ್ಯತ್ವ ರದ್ದು

Last Updated 24 ಡಿಸೆಂಬರ್ 2020, 20:44 IST
ಅಕ್ಷರ ಗಾತ್ರ

ಹೊಸಪೇಟೆ: ಚುನಾವಣೆಗೆ ಸ್ಪರ್ಧಿಸಲು ಸಲ್ಲಿಸಿದ್ದ ದಾಖಲೆಗಳು ಖೊಟ್ಟಿ ಎಂದು ಮರು ವಿಚಾರಣೆಯಲ್ಲೂ ಸಾಬೀತಾಗಿರುವುದರಿಂದ ಹಗರಿಬೊಮ್ಮನಹಳ್ಳಿ ಶಾಸಕ ಎಲ್‌.ಬಿ.ಪಿ. ಭೀಮಾ ನಾಯ್ಕ ಅವರ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯತ್ವವನ್ನು ರದ್ದುಗೊಳಿಸಿ ಹೊಸಪೇಟೆ ಉಪವಿಭಾಗದ ಸಹಕಾರ ಸಂಘಗಳ ನ್ಯಾಯಾಲಯದ ನ್ಯಾಯಾಧೀಶ ಲಿಯಾಕತ್‌ ಅಲಿ ಅವರು ಬುಧವಾರ (ಡಿ.23) ಆದೇಶ ಹೊರಡಿಸಿದ್ದಾರೆ.

ಇದರೊಂದಿಗೆ ಭೀಮಾನಾಯ್ಕ ಅವರಿಗೆ ಕರ್ನಾಟಕ ಹಾಲು ಮಹಾಮಂಡಳದ ನಿರ್ದೇಶಕ ಸ್ಥಾನ ಹಾಗೂ ರಾಯಚೂರು– ಬಳ್ಳಾರಿ– ಕೊಪ್ಪಳ (ರಾಬಕೊ) ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನವೂ ಕೈತಪ್ಪಿದೆ. ಭೀಮಾ ನಾಯ್ಕ ಅವರ ಆಯ್ಕೆ ಪ್ರಶ್ನಿಸಿ ಅಡವಿ ಆನಂದದೇವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾದ ಕೆ. ಬಸವರಾಜ ಹಾಗೂ ಆರ್‌. ನಾಗನಗೌಡ ಅವರು ಆಗಸ್ಟ್‌ 17ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

2013, 2018ರ ವಿಧಾನಸಭೆ ಚುನಾವಣೆ ವೇಳೆ ಭೀಮಾ ನಾಯ್ಕ ಅವರು ತಾವು ಹಗರಿಬೊಮ್ಮನಹಳ್ಳಿ ನಿವಾಸಿ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದರು. ಆದರೆ, ಅವರ ಈ ಕ್ಷೇತ್ರ ಅಡವಿ ಆನಂದದೇವನಹಳ್ಳಿ ಹಾಲು ಉತ್ಪಾದಕರ ಸಂಘದ ವ್ಯಾಪ್ತಿಯಲ್ಲಿ ಇರಲಿಲ್ಲ. ಅದಕ್ಕಾಗಿ ಅವರು ಅಡವಿ ಆನಂದದೇವನಹಳ್ಳಿ ನಿವಾಸಿ ಎಂದು ಸಾಬೀತುಪಡಿಸಲು ಜಮೀನು ಗುತ್ತಿಗೆ, ಮನೆ ಬಾಡಿಗೆಯ ಛಾಪಾ ಕಾಗದದ ಕರಾರು ಪತ್ರಗಳನ್ನು ಸಲ್ಲಿಸಿದ್ದರು. ಆದರೆ, ಅವುಗಳ ನೋಂದಣಿಯಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT