ಸಂಡೂರು: ‘ನವಉದಾರವಾದ ಆರ್ಥಿಕ ನೀತಿಗಳು ವ್ಯಾಪಕವಾಗಿ ಎಲ್ಲ ದೇಶಗಳ ಮೇಲೆ ಹೇರಲ್ಪಟ್ಟವು ವಿಶ್ವ ಬ್ಯಾಂಕುಗಳ ಷರತ್ತುಬದ್ಧ ಸಾಲ, ನೆರವುಗಳು ರಾಷ್ಟ್ರಗಳ ಅಭಿವೃದ್ಧಿಗೆ ಅನುಕೂಲವಾಗಿವೆ’ ಎಂದು ಸಿಪಿಐಎಂ ಪಕ್ಷದ ತಾಲ್ಲೂಕು ಕಾರ್ಯದರ್ಶಿ ಎ. ಸ್ವಾಮಿ ಹೇಳಿದರು.

ತಾಲ್ಲೂಕಿನ ತೋರಣಗಲ್ಲು ಗ್ರಾಮದ ಸೂರಿ ನಾರಾಯಣ ಭವನದ ಕಚೇರಿಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕೆಂಪು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ವರ್ಷಕ್ಕೆ ₹700 ಶತಕೋಟಿ ಡಾಲರಿನಷ್ಟು ಬಡ ದೇಶಗಳ ಸಂಪನ್ಮೂಲಗಳನ್ನು ಶ್ರೀಮಂತ ದೇಶಗಳಿಗೆ ವರ್ಗಾಯಿಸಲಾಗುತ್ತದೆ. ಕೃಷಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ನವ ಉದಾರವಾದಿ ನೀತಿಗಳ ಭಾಗವಾಗಿ ನೀರು, ವಿದ್ಯುತ್, ಇಂಧನ, ಬೀಜ, ರಸಗೊಬ್ಬರ ಮುಂತಾದವುಗಳ ಸಬ್ಸಿಡಿಯನ್ನು ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿಯ ಆದ್ಯತಾ ಸಾಲವನ್ನು ಕ್ರಮೇಣ ವಾಪಸ್ಸು ತೆಗೆದುಕೊಳ್ಳಲಾಯಿತು’ ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಖಲಂದರ್ ಭಾಷಾ, ತಾಲ್ಲೂಕು ಕಾರ್ಯದರ್ಶಿ ಪಂಪನಗೌಡ, ಮುಖಂಡರಾದ ಎನ್.ಸಂಕಣ್ಣ, ಎಚ್.ಸ್ವಾಮಿ, ವಿ. ದೇವಣ್ಣ, ಹಾಲೇಶ್, ಶಂಕ್ರಮ್ಮ, ಜಯಪ್ರದ, ತಿಮ್ಮಕ್ಕ, ಭಾಗ್ಯಮ್ಮ, ಕೆ.ಲಕ್ಷ್ಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.