ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಜಾಗರಣೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸಿಂಚನ

Last Updated 19 ಫೆಬ್ರುವರಿ 2023, 8:44 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಮಹಾಶಿವರಾತ್ರಿ ಅಂಗವಾಗಿ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಭಕ್ತರು ಶನಿವಾರ ರಾತ್ರಿ ಕೈಗೊಂಡಿದ್ದ ಜಾಗರಣೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕಳೆ ತಂದುಕೊಟ್ಟಿತ್ತು.

ಕಡ್ಡಿರಾಂಪುರದ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದವು 25ನೇ ವರ್ಷದ ಭಕ್ತಿ ಭಾವನ ಕಾರ್ಯಕ್ರಮದಲ್ಲಿ ಎಂ.ಯೋಗೀಶ್ ತಂಡ ಭಕ್ತಿ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಿತು. ಅನಂತರ ಮಲ್ಲಿಕಾರ್ಜುನ ತುರುವನೂರು, ಮಧುಸೂಧನ್ ಯಾದವ್ ಇವರ ಶಾಸ್ತ್ರೀಯ ಸಂಗೀತ, ಸುಮಾ ಕಾಳಘಟ್ಟ, ಅಂಗಡಿ ಸಮರ್ಥ ಅವರಿಂದ ಸುಗಮ ಸಂಗೀತ, ಶ್ರೀಕರಿ ಶಾಲೆಯ ಭರತನಾಟ್ಯ, ಹರ್ಷಿತಾ ಅವರ ಗೀತ ನೃತ್ಯ, ಯಲ್ಲಪ್ಪ ಭಂಡಾರ ಜಾನಪದ ಗೀತೆಗಳು, ಪಾಂಡುರಂಗ ಅಮಿದಾಲ್ ಕುಡುತಿನಿ ಅವರು ಪ್ರವಚನ, ಕೃಷ್ಣ ತಂಡದ ಜಾನಪದ ನೃತ್ಯ ಗಮನ ಸೆಳೆಯಿತು. ಮಹೇಶ್ ಆಚಾರ್, ಎ.ದೊಡ್ಡಬಸಪ್ಪ ಕೀಬೋರ್ಡ್‌ ನುಡಿಸಿದರು. ಕೆ.ಪಂಪನ ಗೌಡ ನಿರೂಪಿಸಿದರು.

ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಮಾತಂಗ ಪೀಠದ ಪೂರ್ಣಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಕೆ.ಎಂ.ಹೇಮಯ್ಯ ಸ್ವಾಮಿ, ಸುರಪುರದ ತಿಪ್ಪರಾಜಗೌಡ ಬಿರಾದಾರ್, ಹಂಪಿ ಗ್ರಾಮ ಪಂಚಾಯಿತಿ ಸದಸ್ಯೆ ರಜನಿ ಕೆ.ಷಣ್ಮುಖ ಗೌಡ, ಅಭಿವೃದ್ಧಿ ಅಧಿಕಾರಿ ಉಮೇಶ್ ಜಾಹಗೀರದಾರ್‌, ಕಲಾವೃಂದದ ಸ್ಥಾಪಕ ಅಧ್ಯಕ್ಷ ಅಂಗಡಿ ವಾಮದೇವ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT