ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸ್ಕ್ ಸ್ ಥ್ರೋನಲ್ಲಿ ಸಾಧನೆ; ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಹಳ್ಳಿ ಪ್ರತಿಬೆ ಆಯ್ಕೆ

Published 8 ಜೂನ್ 2023, 14:13 IST
Last Updated 8 ಜೂನ್ 2023, 14:13 IST
ಅಕ್ಷರ ಗಾತ್ರ

ಕಾನಹೊಸಹಳ್ಳಿ: ಸಮೀಪದ ಚಿಕ್ಕಜೋಗಿಹಳ್ಳಿ ತಾಂಡಾದ ಯುವಕನೊಬ್ಬ ಡಿಸ್ಕ್‌ಸ್ ಥ್ರೋ ವಿಭಾಗದಲ್ಲಿ 66ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ಹಳ್ಳಿಯ ಕ್ರೀಡಾ ಪ್ರತಿಭೆಗೆ ಮಾದರಿಯಾಗಿದ್ದಾನೆ.

ಚಿಕ್ಕಜೋಗಿಹಳ್ಳಿ ತಾಂಡಾದ ಎಂ.ಎಸ್.ಶ್ರೀಕಾಂತ್ ಪೋಷಕರ ಹಣಕಾಸಿನ ನೆರೆವಿನೊಂದಿಗೆ ಮಧ್ಯಪ್ರದೇಶದ ಭೂಪಾಲ್ ತೆರಳಿದ್ದು, 66ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಅಂತಿಮ ಘಟಕ್ಕೆ ತಲುಪಿರುವುದರಿಂದ ಚಿಕ್ಕಜೋಗಿಹಳ್ಳಿ ತಾಂಡಾದ ಜನರಲ್ಲಿ ಸಂತೋಷಕ್ಕೆ ಕಾರಣವಾಗಿದೆ.

ಎಂ.ಎಸ್.ಶ್ರೀಕಾಂತ್ ಮೂಡುಬಿದರೆ ಆಳ್ವಾಸ್ ಕಾಲೇಜಿನಲ್ಲಿ ಸದ್ಯ ದ್ವಿತೀಯ ಪಿಯುಸಿ ಪೂರೈಸಿದ್ದಾನೆ. ಇತನ ತಂದೆ 2013ರಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟಿದ್ದು,ತಾಯಿ ಸವಿತಾಬಾಯಿ ಅಂಗನವಾಡಿ ಸಹಾಯಕಿಯಾಗಿದ್ದಾಳೆ, ಸಂಬಂದಿ ವಿಜಯಕುಮಾರ್ ಅವರ ಸಹಕಾರದೊಂದಿಗೆ ವ್ಯಾಸಂಗ ಮುಂದುವರಿಸಿದ್ದಾನೆ.

ಬಾಲ್ಯದಿಂದಲೂ ಡಿಸ್ಕಸ್ ವಿಭಾಗದಲ್ಲಿ ಕ್ರೀಡಾ ಆಸಕ್ತಿ ಹೊಂದಿದ್ದ ಶ್ರೀಕಾಂತ್ ವ್ಯಾಸಂಗದ ಜತೆಯಲ್ಲಿ ನಿರಂತರ ತರಬೇತಿ ಪಡೆದು ಡಿಸ್ಕಸ್ ಥ್ರೋ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೂ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದ ನಂತರ ಮಧ್ಯಪ್ರದೇಶ ಭೂಪಾಲ್ ಮತ್ತು ಗ್ವಾಲಿಯರ್ ನಡೆಯುವ 66ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ.

ಪ್ರಶಸ್ತಿ ಸುತ್ತಿಗೆ: ಕ್ರೀಡಾಕೂಟವು ಜೂನ್ 6ರಿಂದ ಆರಂಭವಾಗಿದ್ದು ಡ್ಸಿಸ್ಕಸ್ ಥ್ರೋ ವಿಭಾಗದಲ್ಲಿ 60 ಕ್ರೀಡಾಪಟ್ಟು ಆಯ್ಕೆಯಾಗಿದ್ದು, ಈ ಪೈಕಿ 10ಜನರು ಅಂತಿಮ ಘಟಕ್ಕೆ ತಲುಪಿದ್ದಾರೆ ಅಲ್ಲದೆ ಶ್ರೀಕಾಂತ್ 6ನೇ ಸ್ಥಾನ ಪಡೆದಿದ್ದು, ಜೂನ್ 9ರಂದು ಜರುಗುವ ಅಂತಿಮ ಪಂದ್ಯದಲ್ಲಿ ಪದಕ ಗೆಲ್ಲುವ ಕಾತುರದಲ್ಲಿದ್ದಾನೆ. ಲಂಬಾಣಿ ತಾಂಡದ ಯುವಕನೊಬ್ಬ ರಾಷ್ಟ್ರೀಯ ಕ್ರೀಡೆಯಲ್ಲಿ ಚಿನ್ನ ಪದಕ ಗೆಲ್ಲಲೆಂದು ತಾಂಡಾ ಜನರು ಯುವಕ ಶ್ರೀಕಾಂತನಿಗೆ ಶುಭ ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT