ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಗಿ ಪ್ರಾರ್ಥನೆ: ಕತ್ತೆಗಳ ಮದುವೆ ಮಾಡಿಸಿದ ಗ್ರಾಮಸ್ಥರು

Published 16 ಜುಲೈ 2023, 14:32 IST
Last Updated 16 ಜುಲೈ 2023, 14:32 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ಇಟ್ಟಿಗಿ ಗ್ರಾಮಸ್ಥರು ಭಾನುವಾರ ವರುಣ ದೇವನನ್ನು ಪ್ರಾರ್ಥಿಸಿ ಕತ್ತೆಗಳಿಗೆ ಸಾಂಪ್ರದಾಯಿಕ ಮದುವೆ ನೆರವೇರಿಸಿದರು.

ಗ್ರಾಮದ ಆಂಜನೇಯ ದೇವಸ್ಥಾನ ಮುಂಭಾಗದಲ್ಲಿ ಹೆಣ್ಣು, ಗಂಡು ಕತ್ತೆಗಳಿಗೆ ಸ್ನಾನ ಮಾಡಿಸಿ ಅರಿಸಿಣ ಶಾಸ್ತ್ರ ನೆರವೇರಿಸಲಾಯಿತು. ಬಳಿಕ ಕತ್ತೆಗಳಿಗೆ ಬಾಸಿಂಗ ಕಟ್ಟಿ, ಶಾಸ್ತ್ರೋಕ್ತವಾಗಿ ಮಾಂಗಲ್ಯ ಕಟ್ಟಿಸಲಾಯಿತು. ನೆರೆದವರು ಆರತಿ ಬೆಳಗಿ, ಅಕ್ಷತೆ ಹಾಕಿದರು. ನಂತರ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

‘ಜುಲೈ ಮೂರನೇ ವಾರ ಕಳೆದರೂ ಮಳೆ ಸುರಿದಿಲ್ಲ. ಬಿತ್ತನೆಗಾಗಿ ಬೀಜ, ಗೊಬ್ಬರ ಸಿದ್ಧತೆ ಮಾಡಿಟ್ಟುಕೊಂಡು ಮಳೆಗಾಗಿ ಕಾಯುತ್ತಿದ್ದೇವೆ. ಮಳೆ ಕೊರತೆ ಉಂಟಾದಾಗಲೆಲ್ಲ ದೇವರಲ್ಲಿ ಪ್ರಾರ್ಥಿಸಿ ಕತ್ತೆಗಳ ಮದುವೆ ಮಾಡುತ್ತೇವೆ. ಈ ರೀತಿಯ ಆಚರಣೆ ಮಾಡಿದಾಗಲೆಲ್ಲ ಮಳೆ ಸುರಿದಿದೆ’ ಎಂದು ಮಲ್ಲಪ್ಪ ಹೇಳಿದರು.

ಚಿಕ್ಕಣ್ಣನವರ ಕಲ್ಲಪ್ಪ, ಮಾದೂರು ರಾಜಪ್ಪ, ಟಿ. ಪ್ರಕಾಶ, ಬಸವರಾಜ, ಕೂಡ್ಲಿಗಿ ಬಸಣ್ಣ, ಚಿ.ಯಮುನಪ್ಪ, ಸಿ.ಕೊಟ್ರೇಶ ಹಾಗೂ ಗ್ರಾಮದ ದೈವಸ್ಥರು, ಭಗತ್ ಸಿಂಗ್ ಗೆಳೆಯರ ಬಳಗದ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT