ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ರಮ ಮದ್ಯ ಜಪ್ತಿ: 3 ಪ್ರಕರಣ ದಾಖಲು

Published 30 ಮಾರ್ಚ್ 2024, 15:38 IST
Last Updated 30 ಮಾರ್ಚ್ 2024, 15:38 IST
ಅಕ್ಷರ ಗಾತ್ರ

ಬಳ್ಳಾರಿ:  ಅಕ್ರಮ ಮದ್ಯ ದಾಸ್ತಾನು ಮತ್ತು ಸಾಗಾಣೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಶುಕ್ರವಾರ 3 ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಎನ್.ಮಂಜುನಾಥ ತಿಳಿದ್ದಾರೆ.

ಬಳ್ಳಾರಿ-ಬೆಂಗಳೂರು ಬೈಪಾಸ್ ರಸ್ತೆಯಲ್ಲಿನ ಟೋಲ್ ಗೇಟ್ ಹತ್ತಿರ ದ್ವಿಚಕ್ರ ವಾಹನದಲ್ಲಿ 3 ಲೀಟರ್ (₹30,650) ಶೇಂದಿ ಸಾಗಿಸಲಾಗುತ್ತಿತ್ತು. ವಾಹನ ಸವಾರನ್ನು ವಶಕ್ಕೆ ಪಡೆದು ಸೇಂದಿ ಹಾಗೂ ವಾಹನವನ್ನು ಜಪ್ತಿ ಮಾಡಲಾಗಿದೆ. 

ಕಂಪ್ಲಿ ಪಟ್ಟಣದ ಕಂಪ್ಲಿ-ಸಣಾಪುರ ರಸ್ತೆಯ ಜೋಡು ಕಾಲುವೆ ಬಳಿ ದ್ವಿಚಕ್ರ ವಾಹನದಲ್ಲಿ 6.480 ಲೀ. (₹12,881) ಮದ್ಯ ಸಾಗಿಸಲಾಗುತ್ತಿತ್ತು. ಸವಾರನ್ನು ವಶಕ್ಕೆ ಪಡೆದು, ಮದ್ಯ ಹಾಗೂ ವಾಹನ ಜಪ್ತಿ ಮಾಡಲಾಗಿದೆ. 

ಸ್ವಾಮಿಹಳ್ಳಿಯಿಂದ ತೊಣಸಿಗೇರೆಗೆ ಹೋಗುವ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ 6.300 ಲೀ. (₹32,800) ಮದ್ಯ ಸಾಗಿಸಲಾಗುತ್ತಿತ್ತು. ಸವಾರನ್ನು ವಶಕ್ಕೆ ಪಡೆದು ಮದ್ಯ ಹಾಗೂ ವಾಹನವನ್ನು ಜಪ್ತಿ ಮಾಡಲಾಗಿದೆ. 

ಪೊಲೀಸ್ ಧ್ವಜ ದಿನಾಚರಣೆ ಏ.2 ರಂದು 

ಬಳ್ಳಾರಿ:  ಪೊಲೀಸ್ ಧ್ವಜ ದಿನಾಚರಣೆಯನ್ನು ಏ.2 ರಂದು ಬೆಳಿಗ್ಗೆ 8 ಗಂಟೆಗೆ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಶಸ್ತ್ರ ಸಹಾಯಕ ನಿವೃತ್ತ ಪೊಲೀಸ್ ಸಬ್‍ಇನ್‌ಸ್ಪೆಕ್ಟರ್ ಎಚ್.ಎ.ಎಂ.ಚನ್ನಬಸಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸುವರು.

ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕ ಬಿ.ಎಸ್.ಲೋಕೇಶ್ ಕುಮಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜೀತ್ ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಪಿ.ರವಿಕುಮಾರ್, ಎಸ್.ನವೀನ್‍ಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿರುವರು ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT