ಕಂಪ್ಲಿ: ತಾಲ್ಲೂಕಿನ ಎಮ್ಮಿಗನೂರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿರುವುದಾಗಿ ಶಾಸಕ ಜೆ.ಎನ್. ಗಣೇಶ್ ತಿಳಿಸಿದರು.

ಎಮ್ಮಿಗನೂರು ಗ್ರಾಮದಲ್ಲಿ ಗ್ರಾಮಪಥ ಯೋಜನೆಯಡಿ ₹ 6.10ಕೋಟಿ ವೆಚ್ಚದ ಎಮ್ಮಿಗನೂರು-ಇಟಗಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ, ಗ್ರಾಮದಲ್ಲಿ ಎಪಿಎಂಸಿ ಮಾರುಕಟ್ಟೆ ಮತ್ತು 30 ಹಾಸಿಗೆಗಳ ಸೌಲಭ್ಯವಿರುವ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

‘ಗ್ರಾಮದ ಇಟಗಿ ರಸ್ತೆಯನ್ನು 1 ಕಿ.ಮೀ.ನಷ್ಟು ಸಿಸಿ ರಸ್ತೆಯಾಗಿ ಈಗಾಗಲೇ ಅಭಿವೃದ್ಧಿಗೊಳಿಸಿದ್ದು, ಉಳಿದ ರಸ್ತೆಯನ್ನು ಬಿ.ಟಿ ರಸ್ತೆಯಾಗಿ ನಿರ್ಮಿಸಲಾಗುವುದು’ ಎಂದರು.

‘ರೈತರ ಅನುಕೂಲಕ್ಕಾಗಿ ₹ 34 ಕೋಟಿ ವೆಚ್ಚದಲ್ಲಿ ಮಾಗಾಣಿ ರಸ್ತೆಯ ಅಭಿವೃದ್ಧಿ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್.ಜೆ. ಶಾರದಾ, ಉಪಾಧ್ಯಕ್ಷ ಗಾದಿಲಿಂಗಪ್ಪ, ಸದಸ್ಯರಾದ ಸಾಯಿಬಣ್ಣ, ಜಯರಾಮ್, ಪಿಎಂಜಿಎಸ್ವೈ ಜೆಇ ಪ್ರಸನ್ನಾ, ಪಿಡಿಒ ತಾರು ಲಕ್ಷ್ಮಣನಾಯ್ಕ, ಕಾರ್ಯದರ್ಶಿ ದೊಡ್ಡಬಸಪ್ಪ, ಮುಖಂಡರಾದ ಎಳ್ಳಾರ್ಥಿ ರಾಘವೇಂದ್ರ ರೆಡ್ಡಿ, ಎಚ್. ಜಡೆಪ್ಪ, ವೆಂಕಟರಾಜು, ರಾಮಾಂಜನಿ, ವಿ. ವೀರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.