ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈತರು ಸಕಾಲಕ್ಕೆ ಸಾಲ ಪಾವತಿಸಿ: ಅಂಬಳಿ

Published : 23 ಸೆಪ್ಟೆಂಬರ್ 2024, 15:52 IST
Last Updated : 23 ಸೆಪ್ಟೆಂಬರ್ 2024, 15:52 IST
ಫಾಲೋ ಮಾಡಿ
Comments

ಕುಡತಿನಿ (ತೋರಣಗಲ್ಲು): ‘ಕೃಷಿ, ವಾಹನ, ಭೂ ಅಭಿವೃದ್ಧಿ, ಸಣ್ಣ ವ್ಯಾಪಾರ ಸೇರಿದಂತೆ ಇತರೆ ಸಾಲಗಳನ್ನು ಪಡೆದ ಎಲ್ಲ ರೈತರು, ಸಣ್ಣ ವ್ಯಾಪಾರಿಗಳು ಸಹಕಾರ ಸಂಘದ ಆರ್ಥಿಕ ಅಭಿವೃದ್ಧಿಗೆ ಸಕಾಲಕ್ಕೆ ಸಾಲಗಳನ್ನು ಮರು ಪಾವತಿಮಾಡಬೇಕು’ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರ ಸಂಘದ ಅಧ್ಯಕ್ಷ ನಾಗಣ್ಣ ಅಂಬಳಿ ಹೇಳಿದರು.

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ 48ನೇ ವಾರ್ಷಿಕ ಮಹಾಜನ ಸಭೆಗೆ ಚಾಲನೆ ನೀಡಿ ಮಾತನಾಡಿದರು.

‘ಒಟ್ಟು ₹15.85ಕೋಟಿ ಸಾಲವನ್ನು ನೀಡಲಾಗಿದೆ. ಸಂಘವು 8266 ಸದಸ್ಯರನ್ನು ಹೊಂದಿದ್ದು, ₹3 ಕೋಟಿ ನಿವ್ವಳ ಲಾಭಗಳಿಸಿದೆ’ ಎಂದರು.

ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ರೈತರ ಮಕ್ಕಳನ್ನು ಸನ್ಮಾನಿಸಿ, ನಗದು ಬಹುಮಾನ ವಿತರಿಸಲಾಯಿತು.

ಉಪಾಧ್ಯಕ್ಷೆ ಹಂಪಮ್ಮ ಹಟ್ಟಿ, ನಿರ್ದೇಶಕರಾದ ಬೀಸಣ್ಣ ಜಟ್ಟಿ, ಮೂರುಣ್ಣಿ ಬಸವರಾಜ್, ಎಸ್.ಗೋಪಾಲ, ಎ.ರಾಮಣ್ಣ, ಚಲುವಾದಿ ಈರಮ್ಮ, ಎಂ.ಶಿಲ್ಪ, ತಿಮ್ಮಪ್ಪ ದಾಸರ, ಜಿ.ಶ್ರೀನಿವಾಸ್, ಜಗದೀಶ್ ಕೋರಿ, ಎಲೆಗಾರ ಪಂಪಾಪತಿ, ಮುಖ್ಯ ಕಾರ್ಯ ನಿರ್ವಾಹಕ ಆಂಜಿನೇಯ ಪದ್ಮಶಾಲಿ, ಮುಖಂಡರಾದ ಸಿ.ದೊಡ್ಡಬಸಪ್ಪ, ಪಲ್ಲೇದ ಪ್ರಭುಲಿಂಗ, ಸಂಘದ ಅಧಿಕಾರಿ, ಸಿಬ್ಬಂದಿ ಹಾಗೂ ವಿವಿಧ ಗ್ರಾಮಗಳ ರೈತ ಮುಖಂಡರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT