ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಹಂಪಿ ಪುರಂದರ ಮಂಟಪದಲ್ಲಿ ವಿದೇಶಿಯರಿಂದ ಮದ್ಯ ಸೇವನೆ

Last Updated 21 ಫೆಬ್ರವರಿ 2023, 9:24 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಶ್ವಪ್ರಸಿದ್ಧ ಹಂಪಿಯ ಪುರಂದರ ಮಂಟಪದೊಳಗೆ ಕುಳಿತು ವಿದೇಶಿಯರು ಸೋಮವಾರ ಮದ್ಯ ಸೇವಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಹಂಪಿಯಲ್ಲಿ ಮದ್ಯ, ಮಾಂಸಾಹಾರ ಸೇವನೆ ಮೇಲೆ ನಿಷೇಧವಿದೆ. ಪುರಂದರ ಮಂಟಪದ ಬಳಿ ಸೇರಿದಂತೆ ಕೆಲವೆಡೆ ಈ ಬಗ್ಗೆ ನಾಮಫಲಕಗಳನ್ನೂ ಹಾಕಲಾಗಿದೆ. ಇದೇ ಪರಿಸರದಲ್ಲಿ ಪೊಲೀಸರು, ಗೃಹರಕ್ಷಕರು, ಪ್ರವಾಸಿ ಮಿತ್ರರು ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಿಬ್ಬಂದಿ ಗಸ್ತು ತಿರುಗುತ್ತಾರೆ. ಹೀಗಿದ್ದರೂ ಅವರನ್ನು ಲೆಕ್ಕಿಸದೇ ನಾಲ್ಕೈದು ಜನ ವಿದೇಶಿಯರು ನದಿಯಲ್ಲಿ ಸ್ನಾನ ಮಾಡಿ, ಮಂಟಪದೊಳಗೆ ಕುಳಿತು ಮದ್ಯ ಸೇವಿಸಿದ್ದಾರೆ.

ಅದೇ ಪರಿಸರದಲ್ಲಿ ಓಡಾಡುತ್ತಿದ್ದ ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣ ಸೇನೆ ಅಧ್ಯಕ್ಷ ವಿಶ್ವನಾಥ ಮಾಳಗಿಯವರು ಇದನ್ನು ಗಮನಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಳಿಕ ಪೊಲೀಸರ ಗಮನಕ್ಕೆ ತಂದಿದ್ದಾರೆ. ಅನಂತರ ಪೊಲೀಸರು ವಿದೇಶಿಯರನ್ನು ಅಲ್ಲಿಂದ ಕಳುಹಿಸಿಕೊಟ್ಟಿದ್ದಾರೆ.

‘ಹಾಡಹಗಲಲ್ಲೇ ಪುರಂದರದಾಸರ ಮಂಟಪದೊಳಗೆ ಮದ್ಯ ಸೇವಿಸುತ್ತಿದ್ದರೂ ಪೊಲೀಸರು ಅವರನ್ನು ತಡೆಯುವ ಕೆಲಸ ಮಾಡಲಿಲ್ಲ. ಹೀಗಾದರೆ ಹಂಪಿ ಸಂಸ್ಕೃತಿ, ಪರಂಪರೆ ಉಳಿಯುವುದು ಹೇಗೆ?’ ಎಂದು ಮಾಳಗಿ ಪ್ರಶ್ನಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT