ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ಜಿಂದಾಲ್‌ನ ಅಧಿಕಾರಿಗೆ ₹ 17.05 ಲಕ್ಷ ವಂಚನೆ

Published 17 ಜೂನ್ 2024, 5:53 IST
Last Updated 17 ಜೂನ್ 2024, 5:53 IST
ಅಕ್ಷರ ಗಾತ್ರ

ಬಳ್ಳಾರಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಪಡೆಯಬಹುದು ಎಂದು ನಂಬಿಸಿ ಜಿಂದಾಲ್‌ ಕಂಪನಿಯ  ಉನ್ನತ ಅಧಿಕಾರಿಯೊಬ್ಬರಿಗೆ ಆನ್‌ಲೈನ್‌ನಲ್ಲಿ ₹17.05 ಲಕ್ಷ ವಂಚನೆ ಮಾಡಲಾಗಿದೆ.

ಇತ್ತೀಚೆಗೆ ಯೂಟ್ಯೂಬ್‌ ನೋಡುತ್ತಿದ್ದಾಗ ಅಧಿಕಾರಿಗೆ ಷೇರು ಮಾರುಕಟ್ಟೆ ಕುರಿತ ಜಾಹಿರಾತೊಂದು ಬಂದಿತ್ತು. ಅದನ್ನು ಕ್ಲಿಕ್‌ ಮಾಡಿದಾಗ ವಾಟ್ಸಾಪ್‌ ಗ್ರೂಪ್‌ವೊಂದಕ್ಕೆ ಅವರು ಪ್ರವೇಶಿಸಿದ್ದರು. 

ಅದರಲ್ಲಿ ವಾರಗಳ ಕಾಲ ಷೇರು ಮಾರುಕಟ್ಟೆಯ ಕುರಿತು ಮಾಹಿತಿ ವಿನಿಯಮ ಮಾಡಿದ್ದಾರೆ. ಬಳಿಕ, ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಅಧಿಕಾರಿಯನ್ನು ನಂಬಿಸಲಾಗಿದೆ. ವಂಚಕರ ಮಾತು ನಂಬಿದ ಅಧಿಕಾರಿ, ಅವರು ತಿಳಿಸಿದ ಬ್ಯಾಂಕ್‌ ಖಾತೆಗೆ ಮೇ 22ರಿಂದ ಜೂನ್‌ 4ರ ವರೆಗೆ ಹಂತ ಹಂತವಾಗಿ ₹17,05,000 ಹಣ ಹಾಕಿದ್ದಾರೆ. ಬಳಿಕ ಇದು ಮೋಸವೆಂದು ತಿಳಿದು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. 

ದೂರು ಆಧರಿಸಿ ಪೊಲೀಸರು ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT