ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಸ್ವೀಕರಿಸದ ಗಣೇಶ್‌: ಪ್ರಮುಖ ಹುದ್ದೆಗೆ ಬೇಡಿಕೆ 

Published 8 ಮಾರ್ಚ್ 2024, 16:30 IST
Last Updated 8 ಮಾರ್ಚ್ 2024, 16:30 IST
ಅಕ್ಷರ ಗಾತ್ರ

ಕಂಪ್ಲಿ (ಬಳ್ಳಾರಿ ಜಿಲ್ಲೆ): ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡು ಒಂದು ತಿಂಗಳಾದರೂ‌‌‌‌ ಕಂಪ್ಲಿ ಶಾಸಕ ಜೆ.ಎನ್‌ ಗಣೇಶ್‌ ಅವರು ಇನ್ನೂ ಅಧಿಕಾರ ಸ್ವೀಕರಿಸಿಲ್ಲ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಗಣೇಶ್‌, ‘ಪ್ರಮುಖ ನಿಗಮ ಮಂಡಳಿಗೆ ನೇಮಿಸಲು ಮುಖ್ಯಮಂತ್ರಿಗೆ ಮತ್ತೆ ಮನವಿ ಮಾಡಿರುವೆ’ ಎಂದು ತಿಳಿಸಿದ್ದಾರೆ.

ಸಂಭಾವ್ಯ ಪಟ್ಟಿಯಲ್ಲಿ ಶಾಸಕ ಗಣೇಶ್ ಅವರಿಗೆ ಖಾದಿ ಗ್ರಾಮದ್ಯೋಗ ಮಂಡಳಿ ಸಿಗುವುದಾಗಿ ಕೇಳಿ ಬಂದಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಅವರು, ಜನವರಿ 24ರಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ‘ಹೀಗೆ ಆಗಬಾರದಿತ್ತು’ ಎಂದಿದ್ದರು.

ಜನವರಿ 26ರಂದು ಬಿಡುಗಡೆಯಾದ ನಿಗಮ ಮಂಡಳಿ ನೇಮಕಾತಿ ಅಂತಿಮ ಪಟ್ಟಿಯಲ್ಲಿ ಗಣೇಶ್ ಅವರಿಗೆ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿತ್ತು. ಆದರೆ, ಅದಕ್ಕೂ ಅವರ ಸಮ್ಮತಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT