ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾಮತ ಸಮುದಾಯ ಎಸ್.ಟಿ ಸೇರ್ಪಡೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು: ಮಂಕಾಳ ವೈದ್ಯ

Published : 24 ಆಗಸ್ಟ್ 2024, 13:46 IST
Last Updated : 24 ಆಗಸ್ಟ್ 2024, 13:46 IST
ಫಾಲೋ ಮಾಡಿ
Comments

ಕಂಪ್ಲಿ: ರಾಜ್ಯ ಗಂಗಾಮತಸ್ಥರನ್ನು ಪರಿಶಿಷ್ಟ ಪಂಗಡಕ್ಕೆ(ಎಸ್.ಟಿ) ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದರು.

ಎಚ್. ವೀರಾಪುರ ಗ್ರಾಮದ ಮೀನುಕೃಷಿ ಕೊಳಗಳಿಗೆ ಭೇಟಿ ನೀಡಲು ಶನಿವಾರ ಪಟ್ಟಣಕ್ಕೆ ಆಗಮಿಸಿದ್ದ ಸಚಿವರನ್ನು ಸ್ಥಳೀಯ ಗಂಗಾಮತಸ್ಥರು ಸ್ವಾಗತಿಸಿದ ಬಳಿಕ ಸಮುದಾಯದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಮೀನುಕೃಷಿ ಕೊಳಗಳ ಮಾಲೀಕರಿಗೆ ವಿದ್ಯುತ್ ಬಿಲ್ ಹೆಚ್ಚಳವಾಗಿರುವ ಕುರಿತು ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ‘ಪಟ್ಟಣದ ಮೀನುಗಾರರಿಗೆ ಮೀನು ಮಾರುಕಟ್ಟೆ, ಕೋಲ್ಡ್ ಸ್ಟೋರೇಜ್, ಮೀನುಗಾರ ಕುಟುಂಬಗಳಿಗೆ ವಸತಿ ಸೌಲಭ್ಯ ತುಂಬಾ ಅಗತ್ಯವಿದ್ದು, ಸಚಿವರು ಆದ್ಯತೆ ನೀಡಬೇಕಿದೆ’ ಎಂದು ಆಗ್ರಹಿಸಿದರು.

ಗಂಗಾಮತಸ್ಥರ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎಲಿಗಾರ ನಾಗರಾಜ ಮಾತನಾಡಿ, ಮೀನುಗಾರರಿಗೆ ದೊರೆಯಬೇಕಾದ ಸರ್ಕಾರದ ಸೌಲಭ್ಯಗಳನ್ನು ಅನ್ಯರು ಕಬಳಿಸುತ್ತಿದ್ದಾರೆ. ಸಚಿವರು ಗಮನಹರಿಸಿ ಬೆಸ್ತ, ಗಂಗಾಮತಸ್ಥರಿಗೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಗಂಗಾಮತ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನವಿದ್ದು, ಭವನ ನಿರ್ಮಾಣಕ್ಕೆ ₹1ಕೋಟಿ ಮಂಜೂರು ಮಾಡುವಂತೆ ಮನವಿ ಮಾಡಿದರು.

ಸಮಾಜದ ಪ್ರಮುಖರಾದ ಬಿ. ಸಿದ್ದಪ್ಪ, ಕರೇಕಲ್ ಮನೋಹರ, ಅಯ್ಯೋದಿ ವೆಂಕಟೇಶ, ಕಟ್ಟೆ ಸಣ್ಣ ದುರುಗಪ್ಪ, ಎ. ತಾಯಣ್ಣ, ಬಿ. ನೇಣ್ಕಿ ಗಿರೀಶ, ಆಟೊ ರಾಘವೇಂದ್ರ, ಕೆ.ಪ್ರಕಾಶ, ನಡವಿ ಮಂಜುನಾಥ, ಮುಖಂಡ ಬಿ. ನಾರಾಯಣಪ್ಪ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT