ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ಬೀದಿಯಲ್ಲಿ ಕಸ: ದಂಡ ಹಾಕಿಸಿದ ಪಾಲಿಕೆ ಸದಸ್ಯ

Published : 22 ಸೆಪ್ಟೆಂಬರ್ 2024, 15:58 IST
Last Updated : 22 ಸೆಪ್ಟೆಂಬರ್ 2024, 15:58 IST
ಫಾಲೋ ಮಾಡಿ
Comments

ಬಳ್ಳಾರಿ: ಮಹಾನಗರ ಪಾಲಿಕೆ ವ್ಯಾಪ್ತಿಯ 35ನೇ ವಾರ್ಡ್‌ನಲ್ಲಿ ಬೀದಿಯಲ್ಲಿ ಕಸ ಎಸೆಯುತ್ತಿದ್ದವರಿಗೆ ಕಾರ್ಪೊರೇಟರ್‌ ವಿ. ಶ್ರೀನಿವಾಸಲು ಮಿಂಚು ಅವರು ಅಧಿಕಾರಿಗಳ ಮೂಲಕ ದಂಡ ಹಾಕಿಸಿದ್ದಾರೆ. 

ವಾರ್ಡ್‌ನ ಎಂ. ಕೆ. ನಗರದಲ್ಲಿ ಭಾನುವಾರ  ಪರಿಶೀಲನೆ ನಡೆಸುತ್ತಿರುವಾಗ ಮಹಿಳೆಯೊಬ್ಬರು ಬೀದಿಗೆ ಕಸ ಎಸೆದರು. ಇದನ್ನು ಗಮನಿಸಿದ ಶ್ರೀನಿವಾಸಲು, ಸ್ಥಳದಲ್ಲೇ ಇದ್ದ ಪಾಲಿಕೆ ಆರೋಗ್ಯಾಧಿಕಾರಿ ಮುನಾಫ್ ಪಟೇಲ್ ಹಾಗೂ ಪರ್ವೀನ್ ಶೇಖ್ ಅವರ ಮೂಲಕ ₹300 ದಂಡ ಹಾಕಿಸಿದರು. ಮತ್ತೊಮ್ಮೆ ಈ ರೀತಿ ಮಾಡದಂತೆ ತಾಕೀತು ಮಾಡಿದರು. 

ಈ ಕುರಿತು ಮಾತನಾಡಿರುವ ಶ್ರೀನಿವಾಸಲು, ‘ಕಸದ ಸಮಸ್ಯೆಯ ನಿವಾರಣೆಗಾಗಿ ನನ್ನ ವಾರ್ಡ್‌ ವ್ಯಾಪ್ತಿಯಲ್ಲಿ ನಾಲ್ಕು ವಾಹನಗಳನ್ನು ನಿಯೋಜಿಸಲಾಗಿದೆ. ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಕೆಲ ಮಂದಿ ಬೀದಿಗೇ ಕಸ ಹಾಕುತ್ತಿರುವುದು ಗಮನಕ್ಕೆ ಬಂದಿತ್ತು. ಇಂದು ಖುದ್ದು ನಾನೇ ನೋಡಿದೆ. ಸ್ಥಳದಲ್ಲೇ ಅವರಿಗೆ ದಂಡ ಹಾಕಿಸಿದೆ’ ಎಂದು ಅವರು ತಿಳಿಸಿದರು. 

ಪಾಲಿಕೆ ಸಿಬ್ಬಂದಿ ಬಸವರಾಜ್ ತಾಂಬಾಕಿ, ಕಿರಣ್ ಕುಮಾರ್ ಹಾಗೂ ಸ್ಥಳೀಯರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT