ಸಂಡೂರು: ತಾಲ್ಲೂಕಿನ ಚೋರುನೂರು ಗ್ರಾಮದಲ್ಲಿ ಬುಧವಾರ ಗುಳೇದ ಲಕ್ಕಮ್ಮ ಜಾತ್ರೆಯು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಗ್ರಾಮದ ಜನರು ದೇವಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ಗ್ರಾಮದ ಹೊರವಲಯದ ದೇವಸ್ಥಾನಕ್ಕೆ ಬಿಡಲಾಯಿತು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಗ್ರಾಮದ ಜನರು ತಮ್ಮ ಮನೆಗಳಿಗೆ ಬೀಗ ಜಡಿದು ದೇವಿಯ ಉತ್ಸವ ಮೂರ್ತಿಯ ಜೊತೆಗೆ ಹೊರ ವಲಯದಲ್ಲಿನ ದೇವಸ್ಥಾನಕ್ಕೆ ತೆರಳಿ ದೇವರಿಗೆ ಸಂಪ್ರದಾಯಕ ಪೂಜೆ ನೆರವೇರಿಸಿದರು.

ಜನರು ಬೆಳಿಗ್ಗೆಯಿಂದ ಸಂಜೆಯವರೆಗೂ ಗ್ರಾಮದ ಹೊರ ದೇವಸ್ಥಾನದಲ್ಲಿದ್ದು ಅನ್ನ ಸಂತರ್ಪಣ ಕಾರ್ಯ ನಡೆಸುವವರು. ಗ್ರಾಮದ ಸುತ್ತಲೂ ಚರಗ ಚೆಲುವ ಕಾರ್ಯಕ್ರಮ ನಡೆಸಿದ ನಂತರ ಎಲ್ಲ ಜನರು ಗ್ರಾಮದ ಒಳಗೆ ಆಗಮಿಸುತ್ತಾರೆ.

ದೇವಿಯ ಮೂರ್ತಿಯನ್ನು ಗ್ರಾಮದ ಹೊರಗಿನ ದೇವಸ್ಥಾನದಲ್ಲಿ ಬಿಟ್ಟು ಆರು ತಿಂಗಳ ನಂತರ ಶ್ರಾವಣ ಮಾಸದಲ್ಲಿ ದೇವಿಯನ್ನು ಗ್ರಾಮಕ್ಕೆ ಕರೆತರುವುದು ವಾಡಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.