ತೋರಣಗಲ್ಲು: ತೋರಣಗಲ್ಲು ಸೇರಿದಂತೆ ಕುರೆಕುಪ್ಪ, ವಡ್ಡು, ತಾಳೂರು, ಎಸ್.ಬಸಾಪುರ, ಬನ್ನಿಹಟ್ಟಿ, ನಾಗಲಾಪುರ ಸೇರಿದಂತೆ ಇತರೆ ಗ್ರಾಮಗಳಲ್ಲಿ ಗುಡುಗು, ಸಿಡಿಲು, ಭಾರಿ ಗಾಳಿ ಸಹಿತ ಕೆಲಕಾಲ ಗುರುವಾರ ಸಾಧಾರಣ ಮಳೆ ಸುರಿಯಿತು.

ಕುರೆಕುಪ್ಪ ಪಟ್ಟಣದಲ್ಲಿ ಗುಡುಗು, ಸಿಡಿಲು ಹಾಗೂ ಭಾರಿ ಗಾಳಿ ಸಹಿತ ಸಾಧಾರಣ ಮಳೆಯಾಗಿದ್ದು, ಕೆಲಕಾಲ ಪಟ್ಟಣದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಪಟ್ಟಣದ 2,4ನೇ ವಾರ್ಡ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸುಮಾರು ಹತ್ತು ಮರಗಳು ಗಾಳಿ ಮಳೆಗೆ ಮುರಿದು ಬಿದ್ದಿವೆ. ಸುಮಾರು ನಾಲ್ಕು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ.

ಮರಗಳ ಟೊಂಗೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ತಂತಿ ಹರಿದು ಬಿದ್ದಿವೆ. ವಿದ್ಯುತ್ ಕಂಬಗಳು ರಸ್ತೆ ಬದಿಯ ಮನೆಗಳ ಬಳಿ ಉರುಳಿ ಬಿದ್ದಿವೆ. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ತೋರಣಗಲ್ಲು ಗ್ರಾಮದ 1ನೇ ವಾರ್ಡ್‍ನಲ್ಲಿ ಸಣ್ಣ ಪ್ರಮಾಣದ ಮಳೆ ಸುರಿದರೂ ಸಹ ಓಣಿಯ ರಸ್ತೆಯಲ್ಲಿ ನೀರು ಸಂಗ್ರಹವಾಗುತ್ತಿದ್ದು ನಿವಾಸಿಗಳು ಪ್ರತಿವರ್ಷ ಮಳೆಗಾಲದಲ್ಲಿ ಮಳೆಯ ನೀರಿನಿಂದ ಪರಿತಪಿಸುವಂತಾಗಿದೆ. ಪ್ರಮುಖ ರಸ್ತೆಯಲ್ಲಿ ಮಳೆ ನೀರು ಸಂಗ್ರಹಗೊಂಡಿದ್ದರಿಂದ ವಿವಿಧ ವಾಹನಗಳ ಸವಾರರು ಮಳೆಯ ನೀರಿನಲ್ಲಿ ಕೆಲ ಕಾಲ ಪ್ರಯಾಸಪಟ್ಟು ಸಂಚರಿಸಿದರು.

‘ಕುರೆಕುಪ್ಪ ಪಟ್ಟಣದಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಿದ್ದರಿಂದ ಪಟ್ಟಣದಲ್ಲಿ ಎಲ್‍ಟಿ ಲೈನ್‌ನ ನಾಲ್ಕು ವಿದ್ಯುತ್ ಕಂಬಗಳು ಕುಸಿದಿವೆ. ಕೆಲ ಮರಗಳು ವಿದ್ಯುತ್ ತಂತಿಯ ಮೇಲೆ ಬಿದ್ದರಿಂದ ತಂತಿಗಳು ಹರಿದು ಬಿದ್ದಿದ್ದು ಯಾವುದೇ ಅಪಾಯ ಸಂಭವಿಸಿಲ್ಲ’ ಎಂದು ತೋರಣಗಲ್ಲು ಜೆಸ್ಕಾಂ ಕೇಂದ್ರದ ಶಾಖಾಧಿಕಾರಿ ತುಕಾರಾಂ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.