ಹೊಸಪೇಟೆ: ತನ್ನ ಪತ್ನಿಯನ್ನು (25) ಅಪಹರಿಸಿದ್ದಾರೆ ಎಂದು ಇಲ್ಲಿನ ಬಸವೇಶ್ವರ ಬಡಾವಣೆಯ ನಿವಾಸಿ ಚಂದನ್ ಮಿಶ್ರಾ ಎಂಬುವರು ನಗರದ ಚಿತ್ತವಾಡ್ಗಿ ಪೊಲೀಸ್ ಠಾಣೆಗೆ ಬುಧವಾರ ತಡರಾತ್ರಿ ದೂರು ಕೊಟ್ಟಿದ್ದಾರೆ.

‘ನನ್ನ ಹೆಂಡತಿ ಪ್ರಿಯಾಂಕಾ (25) ಬುಧವಾರ (ಡಿ.18) ಸಂಜೆ 5.30ರ ಸುಮಾರಿಗೆ ಟೈಲರ್ ಮಳಿಗೆಯಿಂದ ಮನೆ ಕಡೆಗೆ ಹೊರಟಿದ್ದಳು. ಈ ವೇಳೆ ಮೂರ್ನಾಲ್ಕು ಜನ ಅಪರಿಚಿತರು ಆಕೆಯನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಜಂಬುನಾಥಹಳ್ಳಿ ಕಡೆಗೆ ಕರೆದೊಯ್ಯುವಾಗ ಆಕೆ ನನಗೆ ಕರೆ ಮಾಡಿದ್ದಾಳೆ. ಕೆಲಕಾಲ ಮಾತನಾಡಿದ ಬಳಿಕ ಕರೆ ಕಡಿತಗೊಂಡಿದೆ’ ಎಂದು ಚಂದನ್ ದೂರಿನಲ್ಲಿ ತಿಳಿಸಿದ್ದಾರೆ.

ಚಂದನ್ ಅವರು ಮೂಲತಃ ಬಿಹಾರದವರು. ಕೊಪ್ಪಳದ ಕಲ್ಯಾಣಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ಒಂದು ಗಂಡು ಮಗುವಿದೆ. ‘ಚಂದನ್ ಕೊಟ್ಟಿರುವ ದೂರಿನ ಮೇರೆಗೆ ತನಿಖೆ ನಡೆಸಲಾಗುತ್ತಿದೆ. ಅದಕ್ಕಾಗಿ ಎರಡು ತಂಡಗಳನ್ನು ರಚಿಸಲಾಗಿದೆ’ ಎಂದು ಡಿ.ವೈ.ಎಸ್ಪಿ. ವಿ. ರಘುಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.