ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ಕೊಟ್ಟೆ ಎನ್ನುವುದು ವಿಜಯನಗರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರ ಮಂತ್ರ. ‘ನಿಮ್ಮನ್ನು ಅನರ್ಹರು ಅಂದರೆ ಏನು ಅನಿಸುತ್ತದೆ?’ ಎಂಬ ಪ್ರಶ್ನೆಗೂ ಅವರು ಇದೇ ಸಂದರ್ಶನದಲ್ಲಿ ಉತ್ತರ ಕೊಟ್ಟಿದ್ದಾರೆ.

* ಜನ ನಿಮ್ಮನ್ನು ಐದು ವರ್ಷದ ಅವಧಿಗೆ ಆಯ್ಕೆ ಮಾಡಿದ್ದರು. ಆದರೆ, ನೀವು ಅದಕ್ಕೂ ಮೊದಲೇ ರಾಜೀನಾಮೆ ಕೊಟ್ಟು ಮತದಾರರಿಗೆ ದ್ರೋಹ ಮಾಡಿಲ್ಲವೇ?

ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕೆಲವೊಮ್ಮೆ ಇಂತಹ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ರಾಜೀನಾಮೆ ಕೊಡುವ ಯಾವ ಉದ್ದೇಶವೂ ನನಗಿರಲಿಲ್ಲ. ಆದರೆ, ಮೈತ್ರಿ ಸರ್ಕಾರದ ದುರಾಡಳಿತದಿಂದ ವಿಜಯನಗರ ಕ್ಷೇತ್ರ ಕಡೆಗಣನೆಗೆ ಒಳಗಾಗಿತ್ತು. ಯಾವ ಕೆಲಸಗಳು ಆಗುತ್ತಿರಲಿಲ್ಲ. ಹೀಗಾಗಿ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡೆ. ಈ ಚುನಾವಣೆಗೆ ನಾನು ಕಾರಣನಲ್ಲ. ಸಮ್ಮಿಶ್ರ ಸರ್ಕಾರವೇ ಕಾರಣ.

* ಈ ಚುನಾವಣೆಯಲ್ಲಿ ಜನ ನಿಮ್ಮನ್ನೇಕೇ ನಂಬಬೇಕು?

ಈ ಚುನಾವಣೆ ಆನಂದ್ ಸಿಂಗ್ ಅವರ ಚುನಾವಣೆಯಲ್ಲ. ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರೆಯಲು, ರಾಜ್ಯದಲ್ಲಿ ಸ್ಥಿರವಾದ ಸರ್ಕಾರ ನಡೆಯಬೇಕಾದರೆ ಜನ ಬಿಜೆಪಿಗೆ ಮತ ಹಾಕಬೇಕು.

* ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ನಿಮ್ಮ ಹೊಸ ಬಂಗಲೆಯ ಗೃಹ ಪ್ರವೇಶ, ಮಗನ ಅದ್ದೂರಿ ಮದುವೆ ಆಯೋಜಿಸಿದ್ದೀರಿ ಎಂಬ ಆರೋಪ ನಿಮ್ಮ ಮೇಲಿದೆ.

ಯಾರು ಈ ರೀತಿ ಮಾತನಾಡುತ್ತಿದ್ದಾರೊ ಅವರು ನಿನ್ನೆ ಮೊನ್ನೆ ರಾಜಕಾರಣಿಗಳಲ್ಲ. ಅವರಿಗೆ ರಾಜಕಾರಣದಲ್ಲಿ ನನ್ನ ವಯಸ್ಸಿನಷ್ಟು ಅನುಭವವಿದೆ. ಇಂತಹ ವಿಚಾರಗಳನ್ನು ಅವರು ಮಾತನಾಡುತ್ತಾರೆ ಎಂದರೆ ಶೋಭೆ ತರುವಂತಹದ್ದಲ್ಲ. ಜನ ಅದಕ್ಕೆ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ.

* 11 ವರ್ಷ ಶಾಸಕರಾಗಿದ್ದರೂ ವಿಜಯನಗರ ಜಿಲ್ಲೆ ರಚನೆ ಬಗ್ಗೆ ಮಾತಾಡಿರಲಿಲ್ಲ. ಚುನಾವಣೆಯ ಹೊತ್ತಿನಲ್ಲಿ ಈಗೇಕೇ ಮಾತನಾಡುತ್ತಿದ್ದೀರಿ?

ಈ ಹಿಂದೆ ಮಾತನಾಡಿದ್ದೇನೆ. ಈಗ ಸಂಕಲ್ಪ ಮಾಡಿದ್ದೇನೆ. ಇದರಲ್ಲಿ ಯಾವ ರಾಜಕೀಯವೂ ಇಲ್ಲ. ಭೌಗೋಳಿಕ ಕಾರಣಕ್ಕಾಗಿ ಜಿಲ್ಲೆಯಾಗುವುದು ಸೂಕ್ತ.

* ನಿಮ್ಮನ್ನು ಅನರ್ಹರು ಅಂದರೆ ಏನು ಅನಿಸುತ್ತದೆ?

ಸುಪ್ರೀಂಕೋರ್ಟ್ ಏನು ಆದೇಶ ಕೊಟ್ಟಿದೆಯೋ ಅದನ್ನು ಒಪ್ಪಿಕೊಳ್ಳಲೇಬೇಕು. ಅದಕ್ಕೆ ಬೇರೆ ಶಬ್ದವಿಲ್ಲ. ಆ ಹಣೆಪಟ್ಟಿ ಹೋಗಬೇಕಾದರೆ ಚುನಾವಣೆಯಲ್ಲಿ ಗೆಲ್ಲಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.