ಬಳ್ಳಾರಿ: ಉದ್ಯೋಗ ಖಾತ್ರಿ ಯೋಜನೆ ಅಡಿ ತಾಲೂಕಿನ ಸಂಜೀವನರಾಯನಕೋಟೆ ಗ್ರಾಮ ಪಂಚಾಯಿತಿಯ ಮಿಂಚೇರಿ ಗ್ರಾಮದ ಬಳಿ ರಾಮನಕೊಳ ಹಳ್ಳದಿಂದ ಅಸುಂಡಿ ಗ್ರಾಮದ ವೇದಾವತಿ ನದಿಯವರೆಗೆ ನಡೆಯುತ್ತಿರುವ ಹಳ್ಳದ ಪುನಶ್ಚೇತನ ಕಾಮಗಾರಿಯನ್ನು ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವೀಕ್ಷಿಸಿದರು.

24 ಕಿ.ಮೀ ದೂರದರವರೆಗೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, 4.72 ಲಕ್ಷ ಮಾನದದಿನಗಳ ಸೃಜನೆ ಅಂದಾಜಿಸಲಾಗಿದೆ. ಇಲ್ಲಿನ ಕಿರುಬೆಟ್ಟ ಪ್ರದೇಶದಿಂದ ಮಳೆಗಾಲದ ಸಂದರ್ಭದಲ್ಲಿ ಬರುವ ನೀರನ್ನು ನಾಲದಲ್ಲಿ ಚೆಕ್‍ಡ್ಯಾಂ ಮೂಲಕ ತಡೆಯುವುದು ಮತ್ತು ನಾಲಾದ ಎರಡು ಬದಿಗಳನ್ನು ಕಲ್ಲಿನಿಂದ ಭದ್ರಗೊಳಿಸುವ ಕಾಮಗಾರಿ ನಡೆಯುತ್ತಿದೆ. ನಾಲಾದ ಬದಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಗಿಡಗಳನ್ನು ನೆಡುವ ಕಾರ್ಯ ನಡೆದಿದೆ. ಈ ಯೋಜನೆ ಅನುಷ್ಠಾನದಿಂದ ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ ಬಳ್ಳಾರಿ ತಾಲೂಕಿನ ಸಂಜೀವರಾಯನಕೋಟೆ, ಶಂಕರಬಂಡೆ, ಬೆಳಗಲ್ಲು, ಹಲಕುಂದಿ, ಅಮರಾಪುರ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳು ಸೇರಿದಂತೆ 25 ಗ್ರಾಮಗಳಲ್ಲಿ ಜಲಮೂಲಗಳು ಅಭಿವೃದ್ಧಿಯಾಗುವ ನಿರೀಕ್ಷೆ ಇದೆ ಎಂದರು.

ಅಂತರ್ಜಲ ವೃದ್ಧಿ ಉದ್ದೇಶದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನಾಲೆ ಪುನಶ್ಚೇತನಗೊಳಿಸಲು ಮಣ್ಣಿನ ತಡೆಗೋಡೆ ನಿರ್ಮಾಣ ಮಾಡಿ (ಹೊರಹರಿವು ಮಾಡುವುದು), ಮಲ್ಟಿ ಚೆಕ್‍ಡ್ಯಾಂ ನಿರ್ಮಾಣ, ಕೊಳವೆಬಾವಿ ಮರುಪೂರಣ, ಹಳ್ಳ ಹೂಳೆತ್ತುವುದು ಮತ್ತು ಹಳ್ಳದ ಎರಡು ಕಡೆ ಒಡ್ಡು ಬಲಪಡಿಸುವುದು, ಬೋಲ್ಡರ್ ಚೆಕ್, ಹಳ್ಳದ ಎರಡು ಕಡೆ ಬದು ಮತ್ತು 10 ಎಕರೆ ಸಸಿ ನೆಡುವುದು, ಗ್ಯಾಬಿಯನ್ ಚೆಕ್‍ಡ್ಯಾಂ, ಸಣ್ಣ ಕೆರೆ,ಗೋಕಟ್ಟೆ ನಿರ್ಮಾಣ, ಮಿಂಚೇರಿ ಗುಡ್ಡದಲ್ಲಿ ಕಂಟೂರು ಟ್ರೆಂಚ್, ರೈತರ ಹೊಲದಲ್ಲಿ 70 ಬದು ಹಾಗೂ 50 ಕೃಷಿ ಹೊಂಡಗಳ ನಿರ್ಮಾಣದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ, 2 ಸಾವಿರ ಜನರಿಗೆ ಪ್ರತಿನಿತ್ಯ ಉದ್ಯೋಗ ಅವಕಾಶ ಮಾಡಿಕೊಡಲಾಗಿದೆ ಎಂದರು.

ಗ್ರಾಮೀಣ ಶಾಸಕ ನಾಗೇಂದ್ರ, ಸಂಸದ ವೈ.ದೇವೇಂದ್ರಪ್ಪ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಭಾರತಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಎಸ್.ಆರ್.ಲೀಲಾವತಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ನಿತೀಶ್, ಉಪಕಾರ್ಯದರ್ಶಿ ಅಮರೇಶ, ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ಉದ್ಯೋಗ ಖಾತರಿ ಸಹಾಯಕ ನಿರ್ದೇಶಕ ಆರ್.ಕೆ.ಬಸವರಾಜ, ಅಭಿವೃದ್ಧಿ ಅಧಿಕಾರಿ ಕಾಂತರಾಜ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.