ಕೂಡ್ಲಿಗಿ: ತಾಲ್ಲೂಕಿನ ಮೊರಬ ಗ್ರಾಮದ ಬಳಿ ಸರಕು ವಾಹನವೊಂದು ಪಲ್ಟಿಯಾಗಿ 39ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಬುಧವಾರ ನಡೆದಿದೆ.

ಮೊರಬ ಗ್ರಾಮದಲ್ಲಿ ಜಾತ್ರೆ ಇದ್ದ ಪ್ರಯುಕ್ತ ಕೂಡ್ಲಿಗಿಯಲ್ಲಿ ಸರಕು ವಾಹನದಲ್ಲಿ ಜನರನ್ನು ತುಂಬಿಕೊಂಡು ರಾಷ್ಟ್ರೀಯ ಹೆದ್ದಾರಿ-50ರಿಂದ ಹೋಗಿ ಮೊರಬ ಕ್ರಾಸ್ ಮುಖಾಂತರ ಮೊರಬಕ್ಕೆ ಹೋಗುವಾಗ ಗ್ರಾಮದ ಸಮೀಪ ಎದುರುಗಡೆ ಬಂದ ವಾಹನಕ್ಕೆ ದಾರಿ ಬಿಡುವಾಗ ಚಾಲಕನ ನಿಯಂತ್ರಣ ತಪ್ಪಿದ ವಾಹನ ಹೊಲದಲ್ಲಿ ಹೋಗಿ ಬಿದ್ದಿದೆ. ಅದರಲ್ಲಿ ಪ್ರಯಾಣಿಸುತ್ತಿದ್ದ 39 ಜನ ಗಾಯಗೊಂಡಿದ್ದರು.

ಇದೇ ವಾಹನದ ಹಿಂದೆ ಹೋಗುತ್ತಿದ್ದ ಕೂಡ್ಲಿಗಿ ಅಜೇಯ ಹಾಗೂ ಇತರರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಆಸ್ಪತ್ರೆಯಲ್ಲಿ 39ಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆದುಕೊಂಡಿದ್ದು, 21 ಜನರು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಬೇರೆ ಅಸ್ಪತ್ರೆಗಳಿಗೆ ತೆರಳಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.