ಕಮಲಾಪುರ: ‘ದುಡ್ಡಿದೆ ಎಂದು ಅಧಿಕಾರಕ್ಕೆ ಹಪಹಪಿಸುವವರಿಗೆ ಮಣೆಹಾಕಬೇಡಿ, ವಿಧಾನ ಪರಿಷತ್‌ನಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುವ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ನಾನು ಅಧಿಕಾರಕ್ಕಾಗಿ ಅಲ್ಲ; ಅಭಿವೃದ್ಧಿಯ ತುಡಿತ ಇಟ್ಟುಕೊಂಡು ರಾಜಕೀಯಕ್ಕೆ ಬಂದಿದ್ದೇನೆ’ ಎಂದು ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಮರ್ತೂರ ತಿಳಿಸಿದರು.

ಕಲಬುರಗಿ ಗ್ರಾಮೀಣ ಮತಕ್ಷೇತ್ರದ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಹಾಗೂ ಸದಸ್ಯರು ಸೂಕ್ತ ಅನುದಾನವಿಲ್ಲದೆ ನಲುಗಿ ಹೋಗಿದ್ದಾರೆ. ಈ ಹಿಂದಿನ ಸದಸ್ಯರು, ಸದ್ಯದ ಬಿಜೆಪಿ ಅಭ್ಯರ್ಥಿ ನಿಮ್ಮ ಕುರಿತು ಕಳೆದ 6 ವರ್ಷದ ಅವಧಿಯಲ್ಲಿ ಒಮ್ಮೆಯೂ ಧ್ವನಿ ಎತ್ತಲಿಲ್ಲ. ಗ್ರಾಮ ಪಂಚಾಯಿತಿಯ ಸಮಸ್ಯೆಗಳ ಕುರಿತು ಅವರಿಗೆ ಅರಿವಿಲ್ಲ. ಸಮಸ್ಯೆ ಆಲಿಸುವ ಗೋಜಿಗೂ ಹೋಗಲಿಲ್ಲ. ನಾನು ಅವರಷ್ಟು ಶ್ರೀಮಂತನಲ್ಲ. ಆದರೆ ಗ್ರಾಮ ಪಂಚಾಯಿತಿ ಮಟ್ಟದಿಂದ ಬೆಳದು ಬಂದವನು. ಸಮಸ್ಯೆಗಳ ಮೂಲ, ಬೆಳವಣಿಗೆ, ಅವುಗಳ ನಿವಾರಣೆ ಹೇಗೆ ಮಾಡಬೇಕು ಎಂಬ ಎಲ್ಲವನ್ನು ಅರಿತುಕೊಂಡಿದ್ದೇನೆ ಎಂದರು.

ಕಾಂಗ್ರೆಸ್ ಮುಖಂಡ ವಿಜಯಕುಮಾರ ಜಿ.ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ್ ಮಾತನಾಡಿದರು.

ನಂದೂರ ಕೆ, ಕುಸನೂರ, ಶ್ರೀನಿವಾಸ ಸರಡಗಿ, ಸಣ್ಣೂರ, ಹಾಗರಗಾ, ಭೂಪಾಲ ತೆಗನೂರ, ಹರಸೂರ, ಅವರಾದ (ಬಿ) ಗ್ರಾಮ ಪಂಚಾಯಿತಿಗಳಲ್ಲಿ ಪ್ರಚಾರ ಸಭೆ ನಡೆಸಿದರು.

ಸಿ.ಎ.ಪಾಟೀಲ, ಸೋಮಶೇಖರ ಗೋನಾಯಕ್, ಮಲ್ಲಿನಾಥ ಪಾಟೀಲ, ಜಗನ್ನಾಥ ಗೋಧಿ, ಅಜೀತ ಗೌಡ, ಆನಂದ ಪಾಟೀಲ, ಶರಣಗೌಡ ಪಾಟೀಲ, ಶರಣಬಸಪ್ಪ ಹಾಗರಗಿ, ಸಂಜೀವಕುಮಾರ ಶೆಟ್ಟಿ, ನಿರ್ಮಲಾ ಬರಗಾಲಿ, ಸಿದ್ದು ಗೋಧಿ, ರಶೀದ ಪಟೇಲ್, ರಾಜಶೇಕರ ಉಪ್ಪಿನ್, ವೀರಣ್ಣಗೌಡ ಪಾಟೀಲ, ನಿಂಗಣ್ಣ ದೊಡ್ಡಮನಿ, ಗುಂಡಪ್ಪ ಸಿರಡೋಣ, ಜಗದೇವಪ್ಪ ಅಂಕಲಗಿ, ಸುಭಾಶ ಕೋರೆ, ಪ್ರಕಾಶ ಹಾಗರಗಿ, ಶಿವಶರಣಪ್ಪ ಪೂಜಾರಿ, ರವಿ ಪಾಟೀಲ, ಬಸವರಾಜ ಪಾಟೀಲ, ಈಶ್ವರ, ಶಿವಾಜಿ ರಾಠೋಡ್, ಸಂತೋಷ ಪವಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.