ಕುರುಗೋಡು: ಪಟ್ಟಣದಲ್ಲಿ ಒಂಟಿ ಕರಿಕೋತಿ ಉಪಟಕ್ಕೆ ಟ್ರಾಕ್ಟರ್ ಚಾಲಕರು ಭಯಭೀತರಾಗಿದ್ದಾರೆ. ಟ್ರಾಕ್ಟರ್ ಕಂಡಕೂಡಲೇ ಜಿಗಿದು ಚಾಲಕನ ಮೇಲೆ ಎರಗಿ ಸೀಟಿನ ಮೇಲೆ ಕೂರುತ್ತದೆ.ಭಯಭೀತರಾದ ಚಾಲಕರು ರಸ್ತೆಗಳಲ್ಲಿಯೇ ಟ್ರಾಕ್ಟರ್ ಬಿಟ್ಟು ಓಡಿಹೋಗುತ್ತಿದ್ದಾರೆ.

ಅದೇ ರಸ್ತೆಯಲ್ಲಿ ಮತ್ತೊಂದು ಟ್ರಾಕ್ಟರ್ ಬಂದರೆ ಒಂದನ್ನು ಬಿಟ್ಟು ಅದರ ಮೇಲೆ ಎರಗುತ್ತದೆ. ಈ ಪರಿಸ್ಥಿತಿ ಕಳೆದ ಒಂದು ವಾರದಿಂದ ಕಂಡುಬಂದಿದೆ. ಮುಷ್ಟಗಟ್ಟೆ ರಸ್ತೆ, ದೊಡ್ಡಬಸವೇಶ್ವರ ದೇವಸ್ಥಾನದ ರಸ್ತೆ ಮತ್ತು ಎದುರು, ಬಸವಣ್ಣ ರಸ್ತೆಗಳಲ್ಲಿ ಕಟ್ಟಡ ನಿಮಾರ್ಣ ಸಾಮಾಗ್ರಿಗಳನ್ನು ಸಾಗಿಸುವ ಟ್ರಾಕ್ಟರ್ ಚಾಲಕರು ಜೀವ ಕೈಯಲ್ಲಿರಿಸಿ ಚಾಲನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನಿತ್ಯ 20ಕ್ಕೂ ಅಧಿಕ ಟ್ರಾಕ್ಟರ್ಗಳ ಮೇಲೆ ಕೋತಿ ದಾಳಿಮಾಡುತ್ತಿದೆ. ಟ್ರಾಕ್ಟರ್ ಹತ್ತಿ ಕೂರುವ ಕೋತಿ ಚಾಲಕನಿಗೆ ದೈಹಿಕವಾಗಿ ಯಾವುದೇ ತೊಂದರೆ ಕೊಡುವುದಿಲ್ಲ. ಆದರೆ ಭಯ ಸೃಷ್ಟಿಸುತ್ತಿದೆ.

ಕೋತಿ ಸೆರೆಹಿಡಿದು, ಸ್ಥಳಾಂತರಿಸಬೇಕು ಎಂದು ಚಾಲಕರಾದ ಬಸವರಾಜ, ಹುಲುಗಪ್ಪ, ಶಂಕ್ರಪ್ಪ, ದೊಡ್ಡಬಸಪ್ಪ, ದಾದಾ ಖಲಂದರ್ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಟ್ರಾಕ್ಟರ್ಗಳ ಮೇಲೆ ಕೋತಿ ದಾಳಿಮಾಡುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಅರಣ್ಯ ಇಲಾಖೆಗೆ ತಿಳಿದಿ ಕೋತಿಯನ್ನು ಬಂಧಿಸಿ ಸ್ಥಳಾಂತರಿಸುವ0ತೆ ಕೋರಲಾಗುವುದು ಎಂದು ಕುರುಗೋಡು ಠಾಣೆ ಪಿಎಸ್ಐ ಸುಪ್ರಿತ್ ವಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.