ಮರಿಯಮ್ಮನಹಳ್ಳಿಯಲ್ಲಿ ನವರಾತ್ರಿ ದಸರಾ ಹಬ್ಬದ ಅಂಗವಾಗಿ ತೂಗುಯ್ಯಾಲೆಯಲ್ಲಿ ಪ್ರತಿಷ್ಠಾಪಿತಗೊಂಡ ಗ್ರಾಮದೇವತೆ ರಾಂಪುರ ದುರ್ಗಾದೇವಿ ಹಾಗೂ ಗಾಳೆಮ್ಮ ಸಾರೆಮ್ಮ.
ಗ್ರಾಮೀಣ ಕಲೆ ಬಿಂಬಿಸುವ ಗೊಂಬೆಗಳ ಪ್ರದರ್ಶನ ಹರಪನಹಳ್ಳಿ:
ಮೈಸೂರು ಅರಮನೆ ಗ್ರಾಮೀಣ ಬದುಕಿನ ಚಿತ್ರಣ ಗಣೇಶ ಚಾಮುಂಡೇಶ್ವರಿ ಶ್ರೀಕೃಷ್ಣ ಸೇರಿ ದೇವಾನುದೇವತೆಗಳು ರಾಮಾಯಣ ಮಹಾಭಾರತದ ಕಥನ ಬಿಂಬಿಸುವ ಗೊಂಬೆಗಳ ಪ್ರದರ್ಶನ ದಸರಾ ಉತ್ಸವ ಅಂಗವಾಗಿ ನಗರದ ಆಚಾರ್ಯ ಬಡಾವಣೆಯ ಡಾ.ರಮೇಶ್ ಮತ್ತು ಅರ್ಚನಾ ರಮೇಶ್ ದಂಪತಿ ಅವರ ಮನೆಯಲ್ಲಿ 7ನೇ ವರ್ಷದಲ್ಲಿ ಜೋಡಿಸಿರುವ ಗೊಂಬೆಗಳಲ್ಲಿ ಕಾಣುದ ದೃಶ್ಯ ಕಾವ್ಯ ಇದು. ನವರಾತ್ರಿಯ ಸಮಯದಲ್ಲಿ ಶೈಲಪುತ್ರಿ ಕೂಷ್ಮಾಂಡಾ ಕಾಲರಾತ್ರಿ ಬ್ರಹ್ಮಚಾರಿಣಿ ಸ್ಕಂಧ ಮಾತಾ ಮಹಾಗರಿ ಚಂದ್ರಘಂಟಾ ಕಾತ್ಯಾಯಿನಿ ಸಿದ್ದಿಧಾತ್ರಿಯಾಗಿ 9 ದಿನ ದುರ್ಗಾದೇವಿಯಾಗಿ ಪೂಜಿಸಲಾಗುತ್ತಿದೆ. ಹಾಗೂ ಆಧುನಿಕ ಕ್ರಿಕೆಟ್ ಟೀಂ ಎತ್ತಿನ ಬಂಡಿ ದೇವಾನುದೇವತೆಗಳ ಗೊಂಬೆಗಳು ಗಮನ ಸೆಳೆಯುತ್ತಿವೆ. ‘ವೈದ್ಯರ ಮನೆಯಲ್ಲಿ ಸಂಗ್ರಹಿಸಿ ಅಚ್ಚುಕಟ್ಟಾಗಿ ಜೋಡಿಸಿರುವ ಗೊಂಬೆಗಳು ವಸ್ತು ಸಂಗ್ರಹಾಲಯದಂತೆ ಭಾಸವಾಗುತ್ತಿದೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ದುರ್ಗಾಸಪ್ತಶತಿ ಪರಾಯಣ ಕಣ್ತುಂಬಿಕೊಳ್ಳಲು ಸ್ನೇಹಿತರು ಹಿತೈಷಿಗಳು ಹೆಚ್ಚಿನ ಆಗಮಿಸಿ ಗೊಂಬೆಗಳನ್ನು ದರ್ಶನ ಪಡೆಯುತ್ತಿದ್ದಾರೆ’ ಎನ್ನುತ್ತಾರೆ ಡಾ.ರಮೇಶ್.