ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ನಾಯಿ ಕಚ್ಚಿ ತಿಂದದ್ದರಿಂದ ಹಸುಗೂಸು ಸಾವು

Last Updated 28 ಮೇ 2020, 17:05 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ಅನಂತಶಯನಗುಡಿ ರೈಲ್ವೆ ವಸತಿ ಗೃಹಕ್ಕೆ ತೆರಳುವ ಮಾರ್ಗ ಮಧ್ಯದ ಚರಂಡಿ ಬಳಿ ಬಿಸಾಡಿದ ನವಜಾತ ಹೆಣ್ಣು ಶಿಶುವನ್ನು ನಾಯಿಗಳು ತಿಂದದ್ದರಿಂದ ಮಗು ಸತ್ತು ಹೋಗಿರುವ ಹೃದಯ ವಿದ್ರಾವಕ ಘಟನೆ ಗುರುವಾರ ಬೆಳಕಿಗೆ ಬಂದಿದೆ.

‘ನಾಯಿಗಳು ಮಗುವಿನ ಬಲಗೈ ಮತ್ತು ಎಡಕಾಲು ತಿಂದಿವೆ. ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಪೊಲೀಸರು ಮಗುವಿನ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಮರಣೋತ್ತರ ಶವಪರೀಕ್ಷೆ ನಡೆಸಿ, ವಾರಸುದಾರರಿಲ್ಲದ ಕಾರಣ ನಗರಸಭೆ ಸಿಬ್ಬಂದಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಮಗುವಿನ ಪೋಷಕರ ಪತ್ತೆಕಾರ್ಯನಡೆದಿದೆ’ ಎಂದು ಗ್ರಾಮೀಣ ಠಾಣೆ ಸಿಪಿಐ ಶ್ರೀನಿವಾಸ ಮೇಟಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ವಿದ್ಯುತ್‌ ಸ್ಪರ್ಶ; ಕಾರ್ಮಿಕ ಸಾವು
ನಗರದ ನಾಗಪ್ಪ ಕಟ್ಟೆ ಬಳಿಯ ತುಷಾರ ಆಟೊ ವರ್ಕ್ಸ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ವಿದ್ಯುತ್‌ ಶಾಕ್‌ನಿಂದ ಬೆಳಗಟ್ಟೆ ಗ್ರಾಮದ ಮೊಹಮ್ಮದ್‌ ರಫೀಕ್‌ (30) ಸಾವನ್ನಪ್ಪಿದ್ದಾರೆ.

‘ಸಂಜೆ ಕಾರ್‌ ತೊಳೆಯಲು ಯಂತ್ರದ ಗುಂಡಿ ತಿವಿಯಲು ಹೋದಾಗ ವಿದ್ಯುತ್‌ ಪ್ರವಹಿಸಿ ಮೊಹಮ್ಮದ್‌ ಮೃತಪಟ್ಟಿದ್ದಾರೆ. ನಿರ್ಲಕ್ಷ್ಯ ವಹಿಸಿದ ಗ್ಯಾರೇಜ್‌ ಮಾಲೀಕ ಹನುಮಂತಪ್ಪ ಎನ್ನುವವರ ವಿರುದ್ಧ ಮೃತರ ಪತ್ನಿ ಠಾಣೆಗೆ ದೂರು ಸಲ್ಲಿಸಿದ್ದಾರೆ’ ಎಂದು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT