ಮಧ್ಯಮ ಗಾತ್ರದ ಪುಷ್ಕರಣಿಯ ಸುತ್ತಲೂ ಸುಂದರ ಕೆತ್ತನೆಯ ಬಂಡೆಗಲ್ಲುಗಳಿವೆ. ಒಂದು ಕಡೆ ನಂದಿ ಸ್ಮಾರಕವಿದೆ. ಪುಷ್ಕರಣಿಯ ಒಳಗೆ ಇಳಿಯಲು ಒಂದು ಭಾಗದಲ್ಲಿ ಮೆಟ್ಟಿಲುಗಳಿವೆ. ‘ದೇವಸ್ಥಾನದ ಪ್ರವೇಶ ದ್ವಾರದ ಎಡಬದಿಯಲ್ಲಿ ನಿರ್ಮಿಸಿದ್ದ ಯಾತ್ರಾರ್ಥಿಗಳ ಕೊಠಡಿಗಳನ್ನು ಇತ್ತೀಚೆಗೆ ತೆರವುಗೊಳಿಸಲಾಗಿತ್ತು. ನೆಲವನ್ನು ಸಮತಟ್ಟುಗೊಳಿಸಿ, ಹಾಸುಗಲ್ಲುಗಳನ್ನು ಸೂಕ್ತ ರೀತಿಯಲ್ಲಿ ಹಾಕಲಾಗುತ್ತಿತ್ತು. ಈ ವೇಳೆ ಸುಂದರ ಕೆತ್ತನೆಯ ಕಲ್ಲುಗಳು ಪತ್ತೆಯಾಗಿವೆ. ಸೂಕ್ಷ್ಮವಾಗಿ ನೆಲವನ್ನು ಅಗೆಯುತ್ತ ಹೋದಂತೆ ಪುಷ್ಕರಣಿ ಪತ್ತೆಯಾಯಿತು’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ (ಎ.ಎಸ್.ಐ.) ಹಂಪಿ ವೃತ್ತದ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.