ಬಳ್ಳಾರಿ: ಸುಮ್ಮನಿದ್ದಂತೆ ಇರುವುದು, ಏಕಾಏಕಿ ದೊಡ್ಡದಾಗಿ ಸದ್ದು ಮಾಡುವುದು, ಸದಾ ಸುದ್ದಿಯಲ್ಲಿ ಇರುವುದು. ಇದು ಬಳ್ಳಾರಿ ಜಿಲ್ಲೆಯ ಮಣ್ಣಿನ ಗುಣ. ಈ ವರ್ಷವೂ ಬಳ್ಳಾರಿ ತನ್ನ ಅದೇ ಗುಣವನ್ನು ಪ್ರದರ್ಶಿಸಿತು. ದೊಡ್ಡ ದೊಡ್ಡ ವಿಷಯಗಳೊಂದಿಗೆ ಜಿಲ್ಲೆ ಸುದ್ದಿಯಾಯಿತು.

ಬಳ್ಳಾರಿ ಲೋಕಸಭಾ ಚುನಾವಣೆ, ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿಗೆ ನಟ ದರ್ಶನ್ ಅವರನ್ನು ವರ್ಗಾಯಿಸಿದ್ದು, ಸಂಡೂರು ಉಪ ಚುನಾವಣೆ, ಬಾಣಂತಿಯರ ಸಾವು, ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶ ಇವು ಜಿಲ್ಲೆಯಲ್ಲಿ ನಡೆದ ಅತ್ಯಂತ ಪ್ರಮುಖ ಘಟನಾವಳಿಗಳು ಎನಿಸಿಕೊಂಡವು.

ಇದರ ಮಧ್ಯೆಯೂ ಹಲವು ಘಟನೆಗಳಿಗೆ ಬಳ್ಳಾರಿ ಜಿಲ್ಲೆ ಸಾಕ್ಷಿಯಾಯಿತು. 2024 ಸವೆದು, 2025 ಚಿಗುರುತ್ತಿರುವ ಈ ಹೊತ್ತಿನಲ್ಲಿ ಹಳೆ ಘಟನಾವಳಿಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ.

ಜ. 08: ಬಳ್ಳಾರಿಯ ಮೇಯರ್ ಆಗಿ ಶ್ವೇತಾ ಆಯ್ಕೆ

ಫೆ.10:ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಸಂಬಂಧಿಗಳ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ.

ಫೆ. 16: ರಾಜ್ಯ ಬಜೆಟ್ನಲ್ಲಿ ಬಳ್ಳಾರಿ ಜಿಲ್ಲೆಗೆ ಸಿಗದ ಬೃಹತ್ ಯೋಜನೆಗಳು.

ಫೆ. 26: ತೆರಿಗೆ ಪಾವತಿ ಮಾಡದ ಎಸ್ಎಲ್ಎನ್ ಮಾಲ್ನ ಥಿಯೇಟರ್ಗೆ ಬೀಗ.

ಪೆ. 28: ಪಾಕಿಸ್ತಾನದ ಪರ ಘೋಷಣೆ ಪ್ರಕರಣ ಖಂಡಿಸಿ ಜಿಲ್ಲೆಯಲ್ಲಿ ಸೈಯದ್ ನಾಸಿರ್ ಹುಸೇನ್ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಯತ್ನ

ಫೆ. 29: ಬಳ್ಳಾರಿ ಹೊರವಲಯದ ಅಮೃತೇಶ್ವರ ದೇಗುಲಕ್ಕೆ ನಟ ಯಶ್ ಆಗಮನ. ಅಭಿಮಾನಿ ಕಾಲಿನ ಮೇಲೆ ಹತ್ತಿದ ಕಾರು. ಎಫ್ಐಆರ್ ದಾಖಲು

ಫೆ. 29: ₹452.37 ಕೋಟಿ ಗಾತ್ರದ ಆಯವ್ಯ ಮಂಡನೆ.

ಮಾರ್ಚ್ 4: ತೆಲಂಗಾಣದ ಮೆಹಬೂಬ್ ನಗರದಲ್ಲಿ ಅಪಘಾತ. ಬಳ್ಳಾರಿಯ ಐವರು ಸಾವು

ಮಾರ್ಚ್5: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ ಕೆ.ಎಂ. ಮೇತ್ರಿ ನೇಮಕ.

ಮಾರ್ಚ್6: ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ನಾಗರಾಜ ಲೋಕಾಯುಕ್ತಾ ಬಲೆಗೆ

ಮಾರ್ಚ್ 7 ಬೆಂಗಳೂರಿನ ‘ದಿ ರಾಮೇಶ್ವರಂ ಕೆಫೆ’ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಶಂಕಿತನ ಜಾಡು ಹಿಡಿದು ಬಳ್ಳಾರಿಗೆ ಬಂದ ರಾಷ್ಟ್ರೀಯ ತನಿಖಾ ದಳ.

ಮಾರ್ಚ್ 7: ಚುನಾವಣಾ ಅಫಿಡವಿಟ್ನಲ್ಲಿ ತಪ್ಪು ಮಾಹಿತಿ ಆರೋಪ: ಶಾಸಕ ಗಾಲಿ ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ವಿರುದ್ಧ ಎಫ್ಐಆರ್

ಮಾರ್ಚ್ 13: ಬಳ್ಳಾರಿಯಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದ ಎನ್ಐಎ ಅಧಿಕಾರಿಗಳು.

ಮಾರ್ಚ್ 13: ಲೋಕಸಭಾ ಚುನಾವಣೆಯ ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿ. ಶ್ರೀರಾಮುಲು ಹೆಸರು ಘೋಷಣೆ

ಮಾರ್ಚ್ 19: ಬಳ್ಳಾರಿ ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮದೇವಿಯ ವಾರ್ಷಿಕ ಸಿಡಿಬಂಡಿ ರಥೋತ್ಸವ.

ಮಾರ್ಚ್ 19: ವರ್ತಕರು ಬಾಕಿ ನೀಡದ ಕಾರಣ ಬಳ್ಳಾರಿ ಎಪಿಎಂಸಿ ಬಂದ್

ಮಾರ್ಚ್ 21: ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಇ.ತುಕಾರಾಂ ಹೆಸರು ಘೋಷಣೆ

ಮಾರ್ಚ್ 26: ಬಳ್ಳಾರಿ ಎಪಿಎಂಸಿಯಲ್ಲಿ ಮತ್ತೆ ವಹಿವಾಟು ಆರಂಭ

ಮಾರ್ಚ್ 27: ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಅಲ್ಲಂ ಗುರುಬಸವರಾಜ್ ಹಾಗೂ ಕಾರ್ಯದರ್ಶಿಯಾಗಿ ಡಾ.ಅರವಿಂದ ಪಾಟೀಲ್ ಆಯ್ಕೆಯಾಗಿದ್ಧಾರೆ

ಏ. 7: ಬಳ್ಳಾರಿಯ ಬ್ರೂಸ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ದಾಖಲೆ ಇಲ್ಲದ ₹5.60 ಕೋಟಿ ನಗದು ಸೇರಿದಂತೆ ಒಟ್ಟು ₹7.5 ಕೋಟಿ ಮೌಲ್ಯದ ವಸ್ತುಗಳು ಪತ್ತೆ.

ಏ. 8: ಕೊಳಗಲ್ಲು ಗ್ರಾಮದಲ್ಲಿ ಘರ್ಷಣೆ, ನಾಲ್ವರು ಪೊಲೀಸರಿಗೆ ಗಾಯ, 25 ಮಂದಿ ವಶಕ್ಕೆ

ಏ. 10: ದ್ವಿತೀಯ ಪಿಯು ಫಲಿತಾಂಶ ಪ್ರಕಟ. ಜಿಲ್ಲೆಗೆ 29ನೇ ಸ್ಥಾನ. 20,955 ಮಂದಿ ಪಾಸು

ಏ. 11: ಬಳ್ಳಾರಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ

ಏ.25: ಲಂಚ ಸ್ವೀಕರಿಸುವಾಗ ‘ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ’(ಬುಡಾ)ದ ಆಯುಕ್ತ ರಮೇಶ್ ವಟಗಲ್ ಲೋಕಾಯುಕ್ತ ಬಲೆಗೆ

ಏ. 15: ಸಂಗನಕಲ್ಲಿನಲ್ಲಿ ಶಿಲಾಯುಗದ ರೇಖಾಚಿತ್ರ ಬಂಡೆ ಕತ್ತರಿಸಿ ಕಳವು, ಎಫ್ಐಆರ್

ಏ.26: ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಬಳ್ಳಾರಿಗೆ ಆಗಮನ.

ಏ. 29: ಕರ್ನಾಟಕ ಒನ್ನಲ್ಲಿ ದರೋಡೆ, ₹75 ಲಕ್ಷ ಕಳವು

ಮೇ 2: ಕಲ್ಯಾಣ್ ಜ್ಯುವೆಲರ್ಸ್ ಮಳಿಗೆಯಲ್ಲಿ ಎಸಿ ಸ್ಫೋಟ: ಐವರಿಗೆ ಗಾಯ

ಮೇ 4: ಬಳ್ಳಾರಿಯ ಗೋನಾಳ್ನ ಪರಿಶಿಷ್ಟ ಜಾತಿ ಮಹಿಳೆ ಮನೆಗೆ ಯಧುವೀರ್ ಭೇಟಿ

ಮೇ7: ಲೋಕಸಭಾ ಚುನಾವಣೆಗೆ ಕ್ಷೇತ್ರದಲ್ಲಿ ಮತದಾನ. ಶೇ 73.59 ರಷ್ಟು ಮತಚಲಾವಣೆ

ಮೇ 9: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ. ಜಿಲ್ಲೆಗೆ 28ನೇ ರ್ಯಾಂಕ್. 14,441 ಮಂದಿ ಪಾಸ್.

ಮೇ 9: ತೋರಣಗಲ್ನಲ್ಲಿರುವ ಜೆಎಸ್ಡಬ್ಲ್ಯು ಸ್ಟೀಲ್ ಲಿಮಿಟೆಡ್ನಲ್ಲಿ ದುರಂತ. ಮೂವರ ಸಾವು.

ಮೇ 20: ಗಡಿಗಿ ಚೆನ್ನಪ್ಪ ವೃತ್ತದ ಪಾಲಿಕೆ ಕಟ್ಟಡ ಧ್ವಂಸ

ಮೆ 22: ₹27 ಲಕ್ಷ ಮೌಲ್ಯದ 55 ಕೆ.ಜಿ ಗಾಂಜಾ ವಶ

ಮೇ 29: ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಪುನರಾರಂಭ.

ಮೇ 29: ಬಿ1 ವರ್ಗದ ಏಳು ಗಣಿ ಗುತ್ತಿಗೆಗಳ ಜಂಟಿ ಸಮೀಕ್ಷೆ ಕಾರ್ಯ ಆರಂಭ

ಮೇ 30: ಕರ್ನಾಟಕ ಒನ್ ದರೋಡೆ ಪ್ರಕರಣದಲ್ಲಿ ಮಾಜಿ ಉದ್ಯೋಗಿ ಸೆರೆ

ಜೂನ್ 3: ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಮತದಾನ. ಶೇ 67.78 ಮಂದಿ ಮತಚಲಾವಣೆ.

ಜೂನ್ 3: ಬಳ್ಳಾರಿಯ ವಿಮ್ಸ್ನಲ್ಲಿ ವೈದ್ಯೆ ಮೇಲೆ ಹಲ್ಲೆ. ವೈದ್ಯಕೀಯ ವಿದ್ಯಾರ್ಥಿಗಳಿಂದ ಪ್ರತಿಭಟನೆ.

ಜೂನ್ 4: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟ. ಬಳ್ಳಾರಿಯಲ್ಲಿ ಕಾಂಗ್ರೆಸ್ ಆಭ್ಯರ್ಥಿ ಇ.ತುಕಾರಾಂಗೆ ಗೆಲುವು. ಬಿಜೆಪಿ ಅಭ್ಯರ್ಥಿ ಶ್ರೀರಾಮುಲುಗೆ ಸೋಲು.

ಜೂನ್ 12: ದೇವದಾರಿ ಕಬ್ಬಿಣದ ಅದಿರು ಗಣಿ ಕಾರ್ಯಾಚರಣೆಗೆ ಸಂಬಂಧಿಸಿದ ‘ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ (ಕೆಐಒಸಿಎಲ್)’ ಕಡತಕ್ಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಸಹಿ.

ಜೂನ್ 21: ಬಳ್ಳಾರಿ ಜಿಲ್ಲಾ ಉಸ್ತುವಾರಿ ಹೊಣೆ ಜಮೀರ್ ಹೆಗಲಿಗೆ

ಜೂನ್ 21: ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಆಗಿ ನಂದೀಶ್, ಉಪ ಮೇಯರ್ ಆಗಿ ಡಿ.ಸುಕುಂ ಆಯ್ಕೆ.

ಜೂನ್ 22: ದೇವದಾರಿ ಗಣಿಗೆ ಅರಣ್ಯ ಭೂಮಿ ಹಸ್ತಾಂತರಿಸದಂತೆ ಅರಣ್ಯ ಇಲಾಖೆ ಸೂಚನೆ

ಜುಲೈ 3: ಜಿಲ್ಲೆಯ ಮೊಲದ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ. ಶೋಭಾರಾಣಿ ವಿ.ಜಿ ಅಧಿಕಾರ ಸ್ವೀಕಾರ.

ಜುಲೈ 6: ಲಂಚಕ್ಕೆ ಬೇಡಿಕೆ. ಪಾಲಿಕೆಯ ಇಬ್ಬರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಎಫ್ಐಆರ್.

ಜುಲೈ 6: ಬಳ್ಳಾರಿ ಜಿಲ್ಲಾ ಉಪವಿಭಾಗಾಧಿಕಾರಿ (ಎಸಿ)ಯಾಗಿದ್ದ ಹೇಮಂತ್ ಎನ್ ವರ್ಗಾವಣೆ.

ಜುಲೈ 6. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿದ್ದ ಡಾ.ಕೆ.ವಿ. ತ್ರಿಲೋಕ ಚಂದ್ರ ಮುಂದುವರಿಕೆ

ಜುಲೈ 9: ವಿಜಯನಗರ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು, ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಎಂದು ಮರುನಾಮಕರಣ.

ಜುಲೈ 10: ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಂಧಿಸಿದಂತೆ ಬಳ್ಳಾರಿಯಲ್ಲಿ ಮಾಜಿ ಸಚಿವ ನಾಗೇಂದ್ರ ಆಪ್ತರ ವಿಚಾರಣೆ

ಜು.16: ಲಂಚ ಪಡೆಯುವಾಗ ಶ್ರೀಧರ ಗಡ್ಡೆ ಗ್ರಾಮ ಪಂಚಾಯಿತಿಯ ಪಿಡಿಒ ಲೋಕಾ ಬಲೆಗೆ.

ಜುಲೈ: 27 ತುಂಗಭದ್ರಾ ಜಲಾಶಯದಿಂದ 1.50 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ. ಕಂಪ್ಲಿಯಲ್ಲಿ ನೆರೆ ಪರಿಸ್ಥಿತಿ.

ಆ. 8: ಕನ್ನಡದ ಶ್ರೇಷ್ಠ ಕಥೆಗಾರ ರಾಜಶೇಖರ ನೀರಮಾನ್ವಿ ನಿಧನ.

ಆ.15: ಸ್ವಾತಂತ್ರ್ಯೋತ್ಸವ ಅಂಗವಾಗಿ ಜಿಲ್ಲೆಯಲ್ಲಿ ಕೃಷ್ಣ ಬೈರೇಗೌಡ ಧ್ವಜಾರೋಹಣ.

ಆ.16: ಬಳ್ಳಾರಿ ಶ್ರೀಕೃಷ್ಣ ದೇವರಾಜಯ ವಿಶ್ವವಿದ್ಯಾಲಯದ ಕುಲಪತಿಯಾಗಿ ಮುನಿರಾಜು ಅಧಿಕಾರ ಸ್ವೀಕಾರ

ಆ. 22: ಜಿಂದಾಲ್ ಸೌತ್ವೆಸ್ಟ್ ಉಕ್ಕು ಕಂಪನಿಗೆ ಸಂಡೂರು ತಾಲೂಕಿನ ತೋರಣಗಲ್ ಹೋಬಳಿಯಲ್ಲಿ 3,677 ಎಕರೆ ಭೂಮಿ ಮಾರಾಟ ಮಾಡಲು ಸರ್ಕಾರ ನಿರ್ಧಾರ

ಆ. 28: ನಾಗೇಂದ್ರ ಆಪ್ತರ ಮನೆಗಳಲ್ಲಿ ಇ.ಡಿ ಶೋಧ

ಆ. 29: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ. ವಿಚಾರಣಾಧೀನ ಕೈದಿ ಸಂಖ್ಯೆ 511.

ಸೆ. 2: ದರ್ಶನ್ಗೆ ಸರ್ಜಿಕಲ್ ಚೇರ್

ಸೆ. 6: ಬಳ್ಳಾರಿ ವಿಎಸ್ಕೆ ವಿವಿಯಿಂದ ಉಮಾಶ್ರೀ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ.

ಸೆ. 12: ಮಾಧ್ಯಮಗಳಿಗೆ ದರ್ಶನ್ ಅಸಭ್ಯ ಸಜ್ಞೆ ಮಾಡಿದ್ದಾಗಿ ಚರ್ಚೆ

ಸೆ. 15: ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ಸಂಡೂರಿನಲ್ಲಿ ನಡೆಯಿತು. ಸರಪಳಿ ಜಿಲ್ಲೆಯನ್ನೂ ಸಂಪರ್ಕಿಸಿತು.

ಸೆ. 17: ಬಳ್ಳಾರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ. ಸಚಿವ ರಹೀಂ ಖಾನ್ ಅವರಿಂದ ಧ್ವಜಾರೋಹಣ

ಸೆ. 21: ದರೋಡೆ ಪ್ರಕರಣದಲ್ಲಿ ಬ್ರೂಸ್ಪೇಟೆ ಕಾನ್ಸ್ಟೆಬಲ್ ಸೇರಿ 7 ಜನರ ಬಂಧನ

ಸೆ. 25: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಬಳ್ಳಾರಿ ಜೈಲಿನಲ್ಲೇ ದರ್ಶನ್ ವಿಚಾರಣೆ

ಸೆ. 30: ಜನಾರ್ದನ ರೆಡ್ಡಿಗೆ ಬಳ್ಳಾರಿ ಜಿಲ್ಲೆ ಪ್ರವೇಶಿಸಲು ಸುಪ್ರೀಂ ಕೋರ್ಟ್ ಅನುಮತಿ.

ಅ. 3: ಜನಾರ್ದನ ರೆಡ್ಡಿ ಬಳ್ಳಾರಿ ಜಿಲ್ಲೆ ಪ್ರವೇಶ

ಅ.4: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಬುಡಾ) ಅಕ್ರಮ ಆರೋಪ. ಪ್ರಾಧಿಕಾರದ ಎರಡು ಸಭಾ ನಡಾವಳಿಗಳನ್ನು ರದ್ದುಪಡಿಸಿದ ನಗರಾಭಿವೃದ್ಧಿ ಇಲಾಖೆ. ಅಕ್ರಮದ ಪರಿಶೀಲನೆ

ಅ.8: ಹಗರಿ ಚೆಕ್ಪೋಸ್ಟ್ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ.

ಅ. 15: ಸಂಡೂರು ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ

ಅ. 17: ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಆರೋಪ, ಬಂಧನ, ಬಿಡುಗಡೆ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ ಮಾಜಿ ಸಚಿವ ಬಿ. ನಾಗೇಂದ್ರ. ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಕಣ್ಣೀರು

ಅ. 18: ಉಪಚುನಾವಣೆ ಕಾರಣಕ್ಕೆ ಸಂಡೂರಿನ ಶಿವಪುರ ಕೆರೆ ಬಳಿ ಮನೆ ಮಾಡಿದ ಜನಾರ್ದನ ರೆಡ್ಡಿ.

ಅ. 19: ತೋರಣಗಲ್ನ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಮಾನವೊಂದಕ್ಕೆ ಬಾಂಬ್ ಬೆದರಿಕೆ

ಅ. 19: ಸಂಡೂರು ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಂಗಾರು ಹನುಮಂತ ನಿಯೋಜನೆ

ಅ. 23: ಸಂಡೂರು ಉಪಚುನಾವಣೆಗೆ ಒಟ್ಟು ಮೂವರು ಅಭ್ಯರ್ಥಿಗಳು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.

ಅ. 24: ಇಬ್ಬರೂ ಅಭ್ಯರ್ಥಿಗಳಿಂದ ಅಧಿಕೃತವಾಗಿ, ರೋಡ್ಶೋ ಮೂಲಕ ನಾಮಪತ್ರ

ಅ.27: ಕೊಪ್ಪಳದ ಮರಕುಂಬಿ ಪ್ರಕರಣದ 100 ಅಪರಾಧಿಗಳು ಬಳ್ಳಾರಿ ಜೈಲಿಗೆ

ಅ. 30: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ಗೆ ಜಾಮೀನು. ಬಳ್ಳಾರಿ ಜೈಲಿನಿಂದ ಬಿಡುಗಡೆ

ಅ. 30: ರಾಜ್ಯೋತ್ಸವ ಪ್ರಶಸ್ತಿ ಪ್ರಕಟ. ಹಗಲು ವೇಷಧಾರಿಗೆ ಅಶ್ವ ರಾಮಣ್ಣ, ಸಹಕಾರ ರಂಗದ ವಿರೂಪಾಕ್ಷಪ್ಪ ನೇಕಾರಗೆ ಪ್ರಶಸ್ತಿ

ನ.1: ರಾಜ್ಯೋತ್ಸವ ಅಂಗವಾಗಿ ಜಿಲ್ಲೆಯಲ್ಲಿ ಕೃಷ್ಣ ಬೈರೇಗೌಡ ಧ್ವಜಾರೋಹಣ.

ನ.3: ಜಿಲ್ಲೆಯಾದ್ಯಂತ ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ. 130 ಪ್ರಕರಣ, 810 ಜನರ ಸೆರೆ

ನ. 12: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ಬಾಣಂತಿಯರ ಸಾವು

ನ. 12: ಬಿಸಿಯೂಟದಲ್ಲಿ ಹಲ್ಲಿ ಬಿದ್ದು ಕಂಪ್ಲಿಯಲ್ಲಿ 35 ಮಕ್ಕಳು ಅಸ್ವಸ್ಥ

ನ,13. ಸಂಡೂರಲ್ಲಿ ಶೇ 74ರಷ್ಟು ಮತದಾನ

ನ.14: ವಿಮ್ಸ್ನಲ್ಲಿ ಮತ್ತೊಬ್ಬ ಬಾಣಂತಿ ಸಾವು, ಮೃತರ ಸಂಖ್ಯೆ 3ಕ್ಕೆ

ನ. 15: ಮರಕುಂಬಿ ಪ್ರಕರಣದ 99 ಮಂದಿ ಸೇರಿದಂತೆ ಒಟ್ಟು 116 ಅಪರಾಧಿಗಳು ಬಳ್ಳಾರಿ ಜೈಲಿನಿಂದ ಒಂದೇ ದಿನ ಬಿಡುಗಡೆ

ನ. 23: ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇ. ಅನ್ನಪೂರ್ಣ ಗೆಲುವು. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತಗೆ ಸೋಲು

ನ. 26: ಮತ್ತೊಬ್ಬ ಬಾಣಂತಿ ಕೊನೆಯುಸಿರು, ಸಾವಿನ ಸಂಖ್ಯೆ 4ಕ್ಕೆ

ನ. 27: ಬಳ್ಳಾರಿಯ ಕ್ರೈಸ್ತ ಧರ್ಮ ಕ್ಷೇತ್ರಕ್ಕೆ 75 ವರ್ಷ. ಸಮಾರಂಭದಲ್ಲಿ ಸಿಎಂ ಭಾಗಿ.

ಡಿ. 1: ಆಂಧ್ರದ ವಿಡಪನಕಲ್ಲು ಬಳಿ ಅಪಘಾತ: ಬಳ್ಳಾರಿ ವಿಮ್ಸ್ನ ಇಬ್ಬರು ವೈದ್ಯರು ಸೇರಿ ಮೂವರ ದುರ್ಮರಣ

ಡಿ. 1: ಬಾಣಂತಿಯರ ಸರಣಿ ಸಾವು ಸಂಭವಿಸಿದ್ದ ಜಿಲ್ಲಾ ಆಸ್ಪತ್ರೆಗೆ ವಿರೋಧ ಪಕ್ಷದ ನಾಯಕ ಆರ್. ಆಶೋಕ ಭೇಟಿ

ಡಿ.02: ತೆಕ್ಕಲಕೋಟೆ ಪೊಲೀಸ್ ಠಾಣೆಗೆ ದೇಶದ 10ನೇ ಆತ್ಯುತ್ತಮ ಠಾಣೆ ಎಂಬ ಗೌರವ

ಡಿ. 02: ಟರ್ಕಿ ರಾಯಭಾರಿ ಹೆ.ಇ ಫಿರಟ್ ಸುನೆಲ್ ನಗರದ ಕೊಳಗಲ್ ರಸ್ತೆಯ ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಟರ್ಕಿಯ ಹುತಾತ್ಮರ ಸಮಾಧಿಗಳಿಗೆ ಭೇಟಿ

ಡಿ. 02: ಬಳ್ಳಾರಿಯ ಮೂವರಿಗೆ ಬಯಲಾಟ ಅಕಾಡೆಮಿ ಪ್ರಶಸ್ತಿ

ಡಿ.04: ಬಾಣಂತಿ ಸಾವು ಪ್ರಕರಣ ಹಿನ್ನೆಲೆಯಲ್ಲಿ ಬಳ್ಳಾರಿಗೆ ಜೆಡಿಎಸ್ ನಿಯೋಗ ಭೇಟಿ

ಡಿ. 05: ವಿಮ್ಸ್ನಲ್ಲಿ ಮತ್ತೊಬ್ಬ ಬಾಣಂತಿ ಸಾವು, ಮೃತರ ಸಂಖ್ಯೆ 5ಕ್ಕೆ ಏರಿಕೆ

ಡಿ. 07: ವಿಮ್ಸ್, ಜಿಲ್ಲಾಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ : ವೈದ್ಯಕೀಯ ದಾಖಲೆ, ಔಷಧಗಳ ಮಾದರಿ ವಶ

ಡಿ.07: ಬಾಣಂತಿಯರ ಸರಣಿ ಸಾವು ಖಂಡಿಸಿ ಜಿಲ್ಲಾಸ್ಪತ್ರೆ ಬಳಿ ಬಿಜೆಪಿ ನಾಯಕ ಶ್ರೀರಾಮುಲು ಧರಣಿ

ಡಿ. 07: ಜಿಲ್ಲಾ ಆಸ್ಪತ್ರೆ, ಮೃತ ಬಾಣಂತಿಯರ ಕುಟುಂಬಗಳ ಮನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ

ಡಿ.08: ಸಂಡೂರಿನಲ್ಲಿ ಉಪಚುನಾವಣೆಯ ಗೆಲುವಿನ ಕೃತಜ್ಞತಾ ಸಮಾವೇಶ. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ

ಡಿ. 12: ಬಾಣಂತಿಯರ ಸಾವು ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆ, ವಿಮ್ಸ್ಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಭೇಟಿ

ಡಿ. 12: ಅತ್ಯಾಚಾರ ಆರೋಪದ ಮೇಲೆ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು

ಡಿ. 13: ಆಸ್ಪತ್ರೆಗೆ ಕುಡಿದು ಬಂದು ಅನುಚಿತವಾಗಿ ವರ್ತಿಸಿದ್ದ ಸಿರುಗುಪ್ಪ ಟಿಎಚ್ಒ ಈರಣ್ಣ ಅಮಾನತು

ಡಿ. 15: ಸಂಗನಕಲ್ಲು ಬಳಿ ಇದ್ದ ನವಶಿಲಾಯುಗ ಕಾಲದ ಬೂದಿ ದಿಬ್ಬ ನಾಶ.

ಡಿ.17: ಬೂದಿದಿಬ್ಬ ನಾಶ ಪ್ರಕರಣದಲ್ಲಿ ಮೂವರ ವಿರುದ್ಧ ಎಫ್ಐಆರ್

ಡಿ.18: ವರ್ತಕರು–ದಲ್ಲಾಳಿಗಳ ನಡುವಿನ ವಿವಾದದ ಹಿನ್ನೆಲೆಯಲ್ಲಿ ಬಳ್ಳಾರಿ ಎಪಿಎಂಸಿಯಲ್ಲಿ ವಹಿವಾಟು ಸ್ಥಗಿತ

ಡಿ. 19: ಜಿಂದಾಲ್ಗೆ ಸಾವಿರಾರು ಎಕರೆ ಭೂಮಿ ನೀಡುವುದರ ವಿರುದ್ಧ ಧಾರವಾಡದ ಹೈಕೋರ್ಟ್ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಕೆ

ಡಿ. 21: 25 ವರ್ಷಗಳ ಹಿಂದೆ ಹೊಸಪೇಟೆಯಿಂದ ಕಾಣೆಯಾಗಿ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಅನಾಥವಾಗಿದ್ದ ಸಾಕಮ್ಮ ಎಂಬುವವರನ್ನು ಕರೆತರಲು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡ ನಿಯೋಜನೆ.

ಡಿ. 21: ಮುಂದಿನ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ನಡೆಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ತು ಘೋಷಣೆ

ಡಿ. 24: ಬಳ್ಳಾರಿಯಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆ ಪ್ರಾರಂಭಿಸಲು ಆಗ್ರಹಿಸಿ ವಿವಿಧ ಸಂಘ ಸಂಸ್ಥೆಗಳು, ರೈತರಿಂದ ಬೃಹತ್ ಪ್ರತಿಭಟನೆ

ಡಿ. 25: ಹಿಮಾಚಲ ಪ್ರದೇಶದಲ್ಲಿ ಅನಾಥವಾಗಿದ್ದ ಹೊಸಪೇಟೆಯ ಸಾಕಮ್ಮ ಬಳ್ಳಾರಿಗೆ ಆಗಮನ

ಡಿ. 28: ಕುರುಗೋಡು ಬಳಿ ಸರಕು ವಾಹನ ಪಲ್ಟಿ, ಇಬ್ಬರ ಸಾವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.